ಸನ್​ರೈಸರ್ಸ್ ಹೈದರಾಬಾದ್​ನ ಸಿಇಒ ಕಾವ್ಯಾ ಮಾರನ್ ಯಾರು? ಕರುನಾಡಿನ ನಂಟಿರುವ ಈ ಚೆಂದುಳ್ಳಿ ಚೆಲುವೆ ಹಿನ್ನೆಲೆ ಏನು?

SRH CEO Kavya Maran and Link to Kodagu: ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಸದಾ ಹುರಿದುಂಬಿಸುವ ಚೆಲುವೆಯೊಬ್ಬಳನ್ನು ನೀವು ನೋಡಿರಬಹುದು. ಈಕೆ ಆ ತಂಡದ ಸಿಇಒ, ಕಮ್ ಚೀರ್​ಗರ್ಲ್ ಕಾವ್ಯಾ ಮಾರನ್. ಸನ್ ಗ್ರೂಪ್ ಸಂಸ್ಥಾಪಕ ಕಲಾನಿದಿ ಮಾರನ್ ಅವರ ಏಕೈಕ ಪುತ್ರಿಯಾದ 31 ವರ್ಷದ ಕಾವ್ಯಾ ಮಾರನ್ ಯುಕೆಯಲ್ಲಿ ಎಂಬಿಎ ಮಾಡಿದ್ದಾರೆ. 2018ರಿಂದ ಎಸ್​ಆರ್​ಎಚ್​ನ ಸಿಇಒ ಆಗಿರುವ ಕಾವ್ಯಾ ಅವರ ತಾಯಿ ಕಾವೇರಿ ಕೊಡಗಿನ ಮೂಲದವರು. ಕಾವ್ಯಾ ತಂದೆ ಕಲಾನಿದಿ ಮಾರನ್ ಅವರು ದಿವಂಗತ ಎಂ ಕರುಣಾನಿಧಿ ಅವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್​ನ ಸಿಇಒ ಕಾವ್ಯಾ ಮಾರನ್ ಯಾರು? ಕರುನಾಡಿನ ನಂಟಿರುವ ಈ ಚೆಂದುಳ್ಳಿ ಚೆಲುವೆ ಹಿನ್ನೆಲೆ ಏನು?
ಕಾವ್ಯಾ ಮಾರನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2024 | 1:03 PM

ಬೆಂಗಳೂರು, ಏಪ್ರಿಲ್ 16: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ (SRH- Sunrisers Hyderabad) ತಂಡ ದಾಖಲೆಯ ಟಿ20 ಮೊತ್ತ ಗಳಿಸಿ ಪಂದ್ಯ ಜಯಿಸಿದೆ. ಹೈದರಾಬಾದ್ ತಂಡದ ಪ್ರಮುಖ ಆಕರ್ಷಣೆಗಳಲ್ಲಿ ಅದರ ಬಿಗ್ ಬ್ಯಾಟರ್ಸ್ ಇದ್ದಾರೆ. ಜೊತೆಗೆ ಅವರಿಗೆ ಚೀರ್ ಗರ್ಲ್​ನಿಂದ ಹಿಡಿದು ಸಿಇಒವರೆಗೆ ಸಕಲ ಸ್ಫೂರ್ತಿ ನೀಡುವ ಕಾವ್ಯಾ ಮಾರನ್ (Kavya Maran) ಕೂಡ ಪ್ರಮುಖ ಆಕರ್ಷಣೆ ಆಗಿದ್ದಾರೆ. ಎಸ್​ಆರ್​ಎಚ್ ತಂಡಕ್ಕೆ ಮಾತ್ರವಲ್ಲ, ಇಡೀ ಐಪಿಎಲ್ ವೀಕ್ಷಕರಿಗೆ ಈ 31 ವರ್ಷದ ಹುಡುಗಿ ಅಚ್ಚುಮೆಚ್ಚು. ಹೈದರಾಬಾದ್ ತಂಡದ ಬ್ಯಾಟುಗಾರರು ಹೊಡೆಯುವ ಪ್ರತೀ ಫೋರ್, ಸಿಕ್ಸ್​ಗಳಿಗೂ ಈಕೆ ಖುಷಿಯಿಂದ ವ್ಯಕ್ತಪಡಿಸುವ ಭಾವಾಭಿವ್ಯಕ್ತಿ ಎಂಥವರಲ್ಲೂ ಮುಗುಳ್ನಗೆ ತರುತ್ತದೆ. ಕಾವ್ಯಾ ಮಾರನ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಆಗಿದ್ದಾರೆ. ಪಂಜಾಬ್ ತಂಡಕ್ಕೆ ಪ್ರೀತಿ ಜಿಂಟಾ ಹೇಗೋ, ಎಸ್​ಆರ್​ಎಚ್​ಗೆ ಕಾವ್ಯಾ ಇದ್ದಾರೆ. ಈಕೆಗೆ ಕೊಡಗಿನ ನಂಟಿರುವ ಇಂಟರೆಸ್ಟಿಂಗ್ ಸಂಗತಿ ಇದೆ.

ಯಾರು ಈ ಕಾವ್ಯಾ ಮಾರನ್?

ಕಾವ್ಯಾ ಮಾರನ್ ಅವರು ಸನ್ ಗ್ರೂಪ್​ನ ಮುಖ್ಯಸ್ಥ ಕಲಾನಿದಿ ಮಾರನ್ ಅವರ ಏಕೈಕ ಪುತ್ರಿ. ಓದಿದ್ದು ಚೆನ್ನೈನ ಸ್ಟೆಲ್ಲಾ ಮೇರೀಸ್ ಕಾಲೇಜಿನಲ್ಲಿ. ಬ್ರಿಟನ್​ನ ವಾರ್ವಿಕ್ ಬಿಸಿನೆಸ್ ಸ್ಕೂಲ್​ನಲ್ಲಿ ಎಂಬಿಎ ಮಾಡಿದ್ದಾರೆ. ಅಪ್ಪನ ಬಿಸಿನೆಸ್ ಸಾಮ್ರಾಜ್ಯಕ್ಕೆ ಇವರೇ ಮುಂದಿನ ವಾರಸುದಾರೆ.

ಇದನ್ನೂ ಓದಿ: 35 ಬಾಲ್​ಗೆ 83 ರನ್ ಬಾರಿಸಿದ ದಿನೇಶ್ ಕಾರ್ತಿಕ್​ಗೆ ವಿಶ್ವಕಪ್​ನಲ್ಲಿ ಸ್ಥಾನ? ಕೋಚ್ ಹೇಳಿದ್ದಿಷ್ಟು

2018ರಲ್ಲಿ ಇವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ಸಿಇಒ ಆಗಿ ನೇಮಕ ಮಾಡಲಾಯಿತು. ಅಲ್ಲಿಂದೀಚೆ ಈ 31 ವರ್ಷದ ಹುಡುಗಿ ದೇಶದ ಕ್ರಿಕೆಟ್ ಪ್ರೇಮಿಗಳ ಮನಸೂರೆ ಮಾಡಿದ್ದಾಳೆ.

ಕೊಡಗಿನ ನಂಟಿರುವ ಕಾವ್ಯಾ

ಕಾವ್ಯಾ ಮಾರನ್ ಅವರ ತಾಯಿ ಕಾವೇರಿ ಕೊಡಗಿನವರು. ಈ ಮಟ್ಟಿಗೆ ಕಾವ್ಯಾ ಮಾರನ್ ಅವರಲ್ಲಿ ಕನ್ನಡ ನೆಲದ ರಕ್ತ ಹರಿಯುತ್ತಿದೆ. ಇವರು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಕುಟುಂಬಕ್ಕೆ ಸೇರಿದವರು.

ಇದನ್ನೂ ಓದಿ: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?

ಕಾವ್ಯಾ ಮಾರನ್ ಅವರ ತಂದೆ ಕಲಾನಿದಿ ಮಾರನ್ ಸನ್ ಗ್ರೂಪ್ ಸಂಸ್ಥಾಪಕರಾದರೆ ಅವರ ಸಹೋದರ ದಯಾನಿದಿ ಮಾರನ್ ಮಾಜಿ ಕೇಂದ್ರ ಸಚಿವರಾಗಿದ್ದಾರೆ. ಇವರ ತಂದೆ ಮುರಸೋಲಿ ಮಾರನ್ ಕೂಡ ಕೇಂದ್ರ ಸಚಿವರಾಗಿದ್ದವರು. ಎಂ ಕರುಣಾನಿಧಿ ಅವರ ಸೋದರಿಯ ಮರಿಮಗಳು ಕಾವ್ಯಾ ಮಾರನ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ