Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಜಾತ ಶಿಶುವನ್ನು ಬಿಸಿಲಿನಲ್ಲಿ ಮಲಗಿಸಿ, ಹಾಲು ನೀಡದೆ, ಉಸಿರುಚೆಲ್ಲುವಂತೆ ಮಾಡಿದ ತಂದೆ

Viral News: ಈಗಷ್ಟೇ ಹುಟ್ಟಿದ ಮಗುವಿಗೆ ಹಾಲು ಕೊಡದೆ ಬಿಸಿಲಲ್ಲ ಮಲಗಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾದ ನ್ಯಾಯಾಲಯವು ಮ್ಯಾಕ್ಸಿಮ್ ಲ್ಯುಟಿ ಎಂಬಾತನಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಗುವಿನ ತಾಯಿ ಒಕ್ಸಾನಾ ಮಿರೊನೊವಾ ಮಾತನಾಡಿ, ಹೆರಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಎಷ್ಟೇ ಮನವಿ ಮಾಡಿದರೂ ಲ್ಯೂಟಿ ಒಪ್ಪಿರಲಿಲ್ಲ ಹಾಗಾಗಿ ಮಗು ಮನೆಯಲ್ಲೇ ಜನಿಸಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ನವಜಾತ ಶಿಶುವನ್ನು ಬಿಸಿಲಿನಲ್ಲಿ ಮಲಗಿಸಿ, ಹಾಲು ನೀಡದೆ, ಉಸಿರುಚೆಲ್ಲುವಂತೆ ಮಾಡಿದ ತಂದೆ
ಮಗು
Follow us
ನಯನಾ ರಾಜೀವ್
|

Updated on: Apr 17, 2024 | 11:36 AM

ಮ್ಯಾಕ್ಸಿಮ್ ಲ್ಯುಟಿ ಎಂಬಾತನ ಮಡದಿಗೆ ಮುದ್ದಾದ ಗಂಡು ಮಗು ಹುಟ್ಟಿತ್ತು. ಮಗು(Baby)ವಿಗೆ ಸೂರ್ಯನ ಕಿರಣಗಳು ತಾಕಿದರೆ ಅತಿಮಾನುಷ ಸಾಮರ್ಥ್ಯ ಆತನಿಗೆ ಬರುತ್ತದೆ ಎಂದು ನಂಬಿ ಹಾಲು ಕೊಡದೆ ಹಸುಗೂಸಿನ ಸಾವಿಗೆ ಕಾರಣವಾದ ವ್ಯಕ್ತಿಗೆ ನ್ಯಾಯಾಲಯವು 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರಷ್ಯಾ(Russia)ದಲ್ಲಿ ನಡೆದ ಘಟನೆ ಇದಾಗಿದೆ, ಸಾಮಾನ್ಯವಾಗಿ ಚಳಿಗಾಲದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಬೆಳಗ್ಗೆಯ ಎಳೆ ಬಿಸಿಲು ಮಗುವಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಇಡೀ ದಿನ ಮಗುವನ್ನು ಬಿಸಿಲಿಗೊಡ್ಡಿ ಜೀವ ತೆಗೆಯುವುದು ಎಂಥಾ ಮೂಡನಂಬಿಕೆ.

ದುರಂತವೆಂದರೆ ಮಗು ಅಪೌಷ್ಠಿಕತೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿತ್ತು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದೆ. ಆತ ಉದ್ದೇಶಪೂರ್ವಕವಾಗಿಯೇ ಗಂಭೀರವಾದ ದೈಹಿಕ ಹಾನಿಯನ್ನು ಮಾಡಿದ್ದಾನೆ ಎಂದು ನ್ಯಾಯಾಲಯವು ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಗುವಿನ ತಾಯಿ ಒಕ್ಸಾನಾ ಮಿರೊನೊವಾ ಮಾತನಾಡಿ, ಹೆರಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಎಷ್ಟೇ ಮನವಿ ಮಾಡಿದರೂ ಲ್ಯೂಟಿ ಒಪ್ಪಿರಲಿಲ್ಲ ಹಾಗಾಗಿ ಮಗು ಮನೆಯಲ್ಲೇ ಜನಿಸಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಹುಟ್ಟಿದ ಮಗುವಿಗೆ ಹಾಲು ನೀಡುವ ಬದಲು ಬಿಸಿಲಲ್ಲಿ ಮಲಗಿಸಿದ, ಶಿಶುವಿಗೆ ಹಣ್ಣುಗಳನ್ನು ತಿನ್ನಿಸಿದ್ದ. ಒಕ್ಸಾನಾ ಗಂಡನ ಕಣ್ಣು ತಪ್ಪಿಸಿ ಮಗುವಿಗೆ ಎದೆಹಾಲುಣಿಸಲು ಪ್ರಯತ್ನಿಸುತ್ತಿದ್ದಳು ಆದರೆ ಕೊನೆಗೆ ಆತನಿಗೆ ಹೆದರಿ ಹಿಂದೆ ಸರಿಯುತ್ತಿದ್ದಳು.

ಮತ್ತಷ್ಟು ಓದಿ: Video Viral: ಮಾನವನ ಮುಖವನ್ನು ಹೋಳುವ ಜೇಡ ಪತ್ತೆ; ವಿಡಿಯೋ ವೈರಲ್​​​​ ಅನೇಕ ಬಾರಿ ಒಕ್ಸಾನಾ ಗಂಡನನ್ನು ತೊರೆಯ ಬಯಸಿದ್ದಳು, ಈ ವಾರ ಶಿಕ್ಷೆಗೆ ಮುನ್ನ ತನ್ನ ಅಂತಿಮ ನ್ಯಾಯಾಲಯದ ವಿಚಾರಣೆಗೆ ಹಾಜರಾದಾಗ ಪ್ರಭಾವಿ ಅಂತಿಮವಾಗಿ ತನ್ನ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ