Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾರಿನಲ್ಲಿ ಪರಪುರುಷನೊಂದಿಗೆ ಪತ್ನಿ ತಿರುಗಾಟ; ನಡು ರಸ್ತೆಯಲ್ಲೇ ಬ್ಯಾಟ್ ನಿಂದ ಥಳಿಸಿದ ಪತಿ

Video: ಕಾರಿನಲ್ಲಿ ಪರಪುರುಷನೊಂದಿಗೆ ಪತ್ನಿ ತಿರುಗಾಟ; ನಡು ರಸ್ತೆಯಲ್ಲೇ ಬ್ಯಾಟ್ ನಿಂದ ಥಳಿಸಿದ ಪತಿ

ಅಕ್ಷತಾ ವರ್ಕಾಡಿ
|

Updated on:Apr 18, 2024 | 11:07 AM

ಪತ್ನಿ ಬೇರೊಬ್ಬ ಪುರುಷನೊಂದಿಗೆ ಕಾರಿನಲ್ಲಿ ಒಟ್ಟಿಗೆ ತಿರುಗಾಡುತ್ತಿರುವುದನ್ನು ನೋಡಿದ್ದಾನೆ. ಇದರಿಂದ ಆತನ ಕೋಪ ನೆತ್ತಿಗೇರಿದ್ದು, ನೇರವಾಗಿ ಬ್ಯಾಟಿನಿಂದ ಕಾರಿನ ಗಾಜು ಹೊಡೆದು ಪತ್ನಿಯನ್ನು ಕಾರಿನಿಂದ ಎಳೆದೊಯ್ದು ನಡು ರಸ್ತೆಯಲ್ಲೇ ಸ್ಥಳೀಯ ಮುಂದೆ ಮನಬಂದಂತೆ ಥಳಿಸಿದ್ದಾನೆ.

ಹರಿಯಾಣ: ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಪತ್ನಿ ತಿರುಗಾಟ ನಡೆಸುತ್ತಿರುವುದನ್ನು ಕಂಡು ಪತಿ ನಡು ರಸ್ತೆಯಲ್ಲೇ ಪತ್ನಿಗೆ ಮನಬಂದಂತೆ ಥಳಿಸಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ. ಪಂಚಕುಲದ ಸೆಕ್ಟರ್ 26ರ ಉದ್ಯಾನವನದಲ್ಲಿ ಪತ್ನಿ ಬೇರೊಬ್ಬ ಪುರುಷನೊಂದಿಗೆ ಕಾರಿನಲ್ಲಿ ಒಟ್ಟಿಗೆ ಇರುವುದನ್ನು ಕಂಡು ಕೋಪಗೊಂಡ ಗಂಡ ನೇರವಾಗಿ ಬಂದು ಬ್ಯಾಟಿನಿಂದ ಕಾರಿನ ಗಾಜನ್ನು ಹೊಡೆದಿದ್ದಾನೆ. ಇದಲ್ಲದೇ ಪತ್ನಿಯನ್ನು ಕಾರಿನಿಂದ ಎಳೆದೊಯ್ದು ನಡು ರಸ್ತೆಯಲ್ಲೇ ಸ್ಥಳೀಯ ಮುಂದೆ ಮನಬಂದಂತೆ ಥಳಿಸಿದ್ದಾನೆ. ಸದ್ಯ ಈ ಘಟನೆಯನ್ನು ಸ್ಥಳೀಯರು ಮೊಬೈಲ್​ ಫೋನಿನಲ್ಲಿ ರೆಕಾರ್ಡ್​​​ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಪೊಲೀಸರು ಘಟನೆಯ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಪತ್ನಿಯ ದೂರಿನ ಆಧಾರದ ಮೇಲೆ ಪಂಚಕುಲದ ಸೆಕ್ಟರ್ 26ರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ಪತಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪೊಲೀಸರನ್ನೇ ಕನ್ಫ್ಯೂಸ್ ಮಾಡುತ್ತಿದೆ ಈ ಹಕ್ಕಿ; ಇಂಟ್ರೆಸ್ಟಿಂಗ್ ವಿಡಿಯೋ  ಇಲ್ಲಿದೆ ನೋಡಿ

Published on: Apr 17, 2024 12:09 PM