77ರ ಹರೆಯದಲ್ಲೂ ಸ್ಕೇಟಿಂಗ್​ ಕಲಿಯುತ್ತಿರುವ ವೃದ್ಧ: ವೈರಲ್​ ಆದ ವೀಡಿಯೋ

| Updated By: Pavitra Bhat Jigalemane

Updated on: Dec 11, 2021 | 5:55 PM

77ವರ್ಷದ ಇಳಿವಯಸ್ಸಿನ ವೃದ್ದ ಸ್ಕೇಟಿಂಗ್​ ಕಲಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕೇವಲ ಇಳಿ ವಯಸ್ಸು ಮಾತ್ರವಲ್ಲದೆ ಇವರಿಗೆ ಕ್ಯಾನ್ಸರ್​ ರೋಗ ಕೂಡ ಇದೆ.

77ರ ಹರೆಯದಲ್ಲೂ ಸ್ಕೇಟಿಂಗ್​ ಕಲಿಯುತ್ತಿರುವ ವೃದ್ಧ: ವೈರಲ್​ ಆದ ವೀಡಿಯೋ
ಸ್ಕೇಟಿಂಗ್​ ಮಾಡುತ್ತಿರುವ ವೃದ್ಧ
Follow us on

ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುವುದು ತಿಳಿದಿರುವ ವಿಚಾರ. ಆದರೆ ಇಳಿ ವಯಸ್ಸಿನಲ್ಲಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವಾಗಲೂ ಜೀವನೋತ್ಸಾಹದಿಂದ ಹೊಸದೊಂದು ವಿಚಾರವನ್ನು ಕಲಿಯಬೇಕು ಎನ್ನುವ ಹುಮ್ಮಸ್ಸು ನಿಜಕ್ಕೂ ಎಲ್ಲರಿಗೂ ಮಾದರಿ. ಹೌದು, ಇಲ್ಲೊಬ್ಬರು 77ವರ್ಷದ ಇಳಿವಯಸ್ಸಿನ ವೃದ್ದ ಸ್ಕೇಟಿಂಗ್​ ಕಲಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕೇವಲ ಇಳಿ ವಯಸ್ಸು ಮಾತ್ರವಲ್ಲದೆ ಇವರಿಗೆ ಕ್ಯಾನ್ಸರ್​ ರೋಗ ಕೂಡ ಇದೆ. 4ನೇ ಹಂತದ ಪ್ರಾಸ್ಟೇಟ್​ಕ್ಯಾನ್ಸರ್​ ರೋಗ ಇದ್ದರೂ ಇವರಿಗೆ ಸ್ಕೇಟಿಂಗ್​ ಕಲಿಯುವ ಹಂಬಲ.

ಒನ್​ ​ಟ್ರಯಲ್​ ಸಂಸ್ಥೆಯ ಸಿಇಒ ರೆಬೆಕಾ ಬೆಸ್ಟಾಯಿನ್​ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ಕೇಟಿಂಗ್​ ಕಲಿಯುತ್ತಿರುವವರು ರೆಬೆಕಾ ಅವರ ತಂದೆ. ರೆಬೆಕಾ ಅವರ ತಂದೆಗೆ 77 ವರ್ಷ. ಈ ಕುರಿತು ಅವರು ಟ್ವಿಟರ್​ನಲ್ಲಿ ಐಸ್​ ಸ್ಕೇಟಿಂಗ್​ ತರಬೇತಿ ನೀಡುವ ಶಿಕ್ಷಕನೊಂದಿಗೆ ಸ್ಕೇಟಿಂಗ್​ ಮಾಡುವ ವೀಡಿಯೊ ಹಂಚಿಕೊಂಡು, ನನ್ನ ತಂದೆ ತನಗಿರುವ ಮಾರಣಾಂತಿಕ ಕಾಯಿಲೆಯನ್ನು ಮರೆತು ಸಂತಸದಿಂದ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನಗೆದ್ದಿದೆ. ವಯಸ್ಸಾದರೂ ಕುಂದದ ಜೀವನ ಪ್ರೀತಿ ಕಂಡು ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ನಲ್ಲಿ ವೀಡಿಯೋ 2.5ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದಿದೆ.

ಇದನ್ನೂ ಓದಿ: