ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುವುಕ್ಕೆ ಹಲವು ಉದಾಹರಣೆಗಳನ್ನು ಕೇಳಿದ್ದೇವೆ. ಅಂಥಹದ್ದೆ ಒಂದು ಘಟನೆ ಯುಎಸ್ನಲ್ಲಿ ನಡೆದಿದೆ. 87 ವರ್ಷದ ವೃದ್ಧರೊಬ್ಬರು ಮೊಮ್ಮಗಳ ಜತೆಯೇ ಪದವಿಯನ್ನು ಪಡೆದ ಅಪರೂಪದ ಘಟನೆ ನಡೆದಿದೆ. ರೆನೇ ನೀರಾ ಎನ್ನುವ 87 ವರ್ಷದ ವೃದ್ಧ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಮೊಮ್ಮಗಳು ಮೆಲಾನಿ ಸಲಾಜರ್ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾಳೆ. ಪದವಿ ಪ್ರದಾನ ಸಮಾರಂಭದಲ್ಲಿ ರೆನೇ ನೀರಾ ಗಾಲಿ ಕುರ್ಚಿಯಲ್ಲಿ ಕುಳಿತು ಪದವಿ ಪ್ರಮಾಣಪತ್ರ ಪಡೆದಿದ್ದಾರೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಓದುವ ಹಂಬಲದಿಂದ 2016ರಲ್ಲಿ ಕಾಲೇಜು ಸೇರಿದ್ದ ರೆನೇ ನೀರಾ ಅವರಿಗೆ ಓದುವ ಹಂಬಲ ಹೆಚ್ಚಾಗಿಯೇ ಇತ್ತು.
ಅಜ್ಜ ಮೊಮ್ಮಗಳು ಒಂದೇ ಸಮಯದಲ್ಲಿ ಪದವಿ ಪ್ರಮಾಣ ಪತ್ರ ಪಡೆದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಗತ್ತಿನ ಹಲವೆಡಯಿಂದ ವೃದ್ಧನ ಇಚ್ಛಾ ಶಕ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಯುಟಿಎಸ್ಎ ಲಿಬರಲ್ ಮತ್ತು ಫೈನ್ ಆರ್ಟ್ ಕಾಲೇಜಿನಿಂದ ರೆನೇ ನೀರಾ ಪದವಿ ಪಡೆದಿದ್ದಾರೆ. ಈ ಬಗ್ಗೆ ಕಾಲೇಜ್ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು ಜಗತ್ತಿನ ಹಲವೆಡೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ICYMI: Something very special happened this weekend at #UTSA Commencement: Rene Neira, 87, crossed the stage with his granddaughter, Melanie Salazar. She received her B.A. in Comms. He will earn his B.A. in Economics. Family goals!
#UTSAGrad21 @UTSAHC @UTSACOLFA @UTSABusiness pic.twitter.com/jSsUSeyR4F
— UTSA (@UTSA) December 13, 2021
ಈ ಬಗ್ಗೆ ಅವರ ಮೊಮ್ಮಗಳು ಮಾತನಾಡಿ ರೆನೇ ನೀರಾ ಅವರು 1950ರಲ್ಲಿ ವಿಶ್ವವಿದ್ಯಾಲಯದಲ್ಲಿ ಓದುವನ್ನು ನಿಲ್ಲಿಸಿದ್ದರು. ಪತ್ನಿಯ ಮರಣದ ನಂತರ 2016ರಲ್ಲಿ ಯುಟಿಎಸ್ಎ ಲಿಬರಲ್ ಮತ್ತು ಫೈನ್ ಆರ್ಟ್ ಕಾಲೇಜಿಗೆ ಸೇರಿಕೊಂಡರು ಆಗ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಓದುವ ಆಸಕ್ತಿ ನಮಗೂ ಸ್ಪೂರ್ತಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: