Viral: ಅಂಟಾರ್ಟಿಕಾ ಮ್ಯಾರಥಾನ್ನಲ್ಲಿ ದಾಖಲೆ ನಿರ್ಮಿಸಿದ ಮಹಿಳೆ: ವಿವಿಧ ದೇಶಗಳಿಂದ ಅಭಿನಂದನೆಗಳ ಮಹಾಪೂರ
ಲಾಟ್ವಿಯಾದ ಎವಿಜಾ ಎನ್ನುವ 30 ವರ್ಷದ ಮಹಿಳೆ ಈ ಸಾಧನೆ ಮಾಡಿದ್ದಾರೆ. ಡಿಸೆಂಬರ್ 17ರಂದು ಈ ಮ್ಯಾರಥಾನ್ ಸ್ಪರ್ಧೆ ನಡೆದಿತ್ತು.
ಯುನಿಯನ್ ಗ್ಲೇಸಿಯರ್ನಲ್ಲಿ ನಡೆದ ಅಂಟಾರ್ಟಿಕಾ ಮ್ಯಾರಥಾನ್ ರೇಸ್ನಲ್ಲಿ ಮಹಿಳೆಯೊಬ್ಬರು 4 ಗಂಟೆಗಳಲ್ಲಿ ಮ್ಯಾರಥಾನ್ ಪೂರೈಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಲಾಟ್ವಿಯಾದ ಎವಿಜಾ ಎನ್ನುವ 30 ವರ್ಷದ ಮಹಿಳೆ ಈ ಸಾಧನೆ ಮಾಡಿದ್ದಾರೆ. ಡಿಸೆಂಬರ್ 17ರಂದು ಈ ಮ್ಯಾರಥಾನ್ ಸ್ಪರ್ಧೆ ನಡೆದಿತ್ತು. 2013ರಲ್ಲಿ ಯುಕೆ ಮೂಲದ ಪಿಯೋನ ಓಕ್ಸ್ ಅವರು 4ಗಂಟೆ 20ನಿಮಿಷ 2 ಸೆಕೆಂಡ್ಗಳಲ್ಲಿ ಮ್ಯಾರಥಾನ್ ಓಟ ಮುಗಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಎವಿಜಾ ಅವರು 4 ಗಂಟೆ 6ನಿಮಿಷ 17 ಸೆಕೆಂಡ್ಗಳಲ್ಲಿ ಮ್ಯಾರಥಾನ್ ಮುಗಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಯುಎಸ್ಎಯ ಗ್ರೇಸ್ ಯಾ ಎನ್ನುವವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಯುಕೆಯ ಜುಲಿಯಾ ಹಂಟರ್ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಸದ್ಯ ಎವಿಜಾ ಅವರ ಸಾಧನೆಗೆ ಜಗತ್ತಿನ ವಿವಿಧೆಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಕುರಿತು ರಾಯಿಟರ್ಸ್ ಸುದ್ದಿ ಸಂಸ್ಥೆ ವೀಡಿಯೋವನ್ನು ಹಂಚಿಕೊಂಡಿದೆ. ಮ್ಯಾರಥಾನ್ ಓಟದಲ್ಲಿ ಹಿಮತುಂಬಿದ ದಾರಿಯಲ್ಲಿ ಸಾಗಬೇಕು. ಓಟ ಮುಗಿಸಿ ಬಂದ ಎವಿಜಾ ಈಗ ನಾನು ಆಹಾರವನ್ನು ತಿನ್ನಬೇಕು ಎಂದು ನೆರೆದವರನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 60 ಸಾವಿರಕ್ಕೂ ಮಂದಿ ವೀಡಿಯೋ ವೀಕ್ಷಿಸಿದ್ದು, ಎವಿಜಾ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
Latvian Evija Reine set a new women’s record for the Antarctic Ice Marathon with a time of 4:06:11 hours pic.twitter.com/Ur7nS0Fcb7
— Reuters (@Reuters) December 20, 2021
Published On - 5:51 pm, Wed, 22 December 21