viral: ಒಂದೇ ದಿನ ಪದವಿ ಪ್ರಮಾಣಪತ್ರ ಪಡೆದ ಅಜ್ಜ-ಮೊಮ್ಮಗಳು

87 ವರ್ಷದ ವೃದ್ಧರೊಬ್ಬರು ಮೊಮ್ಮಗಳ ಜತೆಯೇ ಪದವಿಯನ್ನು ಪಡೆದ ಅಪರೂಪದ ಘಟನೆ ನಡೆದಿದೆ. ರೆನೇ ನೀರಾ ಎನ್ನುವ 87 ವರ್ಷದ ವೃದ್ಧ  ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

viral: ಒಂದೇ ದಿನ ಪದವಿ ಪ್ರಮಾಣಪತ್ರ ಪಡೆದ ಅಜ್ಜ-ಮೊಮ್ಮಗಳು
ಒಂದೇ ದಿನ ಪದವಿ ಪಡೆದ ಅಜ್ಜ, ಮೊಮ್ಮಗಳು
Follow us
TV9 Web
| Updated By: Pavitra Bhat Jigalemane

Updated on: Dec 22, 2021 | 1:27 PM

ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುವುಕ್ಕೆ ಹಲವು ಉದಾಹರಣೆಗಳನ್ನು ಕೇಳಿದ್ದೇವೆ. ಅಂಥಹದ್ದೆ ಒಂದು ಘಟನೆ ಯುಎಸ್​ನಲ್ಲಿ ನಡೆದಿದೆ. 87 ವರ್ಷದ ವೃದ್ಧರೊಬ್ಬರು ಮೊಮ್ಮಗಳ ಜತೆಯೇ ಪದವಿಯನ್ನು ಪಡೆದ ಅಪರೂಪದ ಘಟನೆ ನಡೆದಿದೆ. ರೆನೇ ನೀರಾ ಎನ್ನುವ 87 ವರ್ಷದ ವೃದ್ಧ  ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಮೊಮ್ಮಗಳು ಮೆಲಾನಿ ಸಲಾಜರ್​ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾಳೆ. ಪದವಿ ಪ್ರದಾನ ಸಮಾರಂಭದಲ್ಲಿ  ರೆನೇ ನೀರಾ ಗಾಲಿ ಕುರ್ಚಿಯಲ್ಲಿ ಕುಳಿತು  ಪದವಿ ಪ್ರಮಾಣಪತ್ರ ಪಡೆದಿದ್ದಾರೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಓದುವ ಹಂಬಲದಿಂದ 2016ರಲ್ಲಿ ಕಾಲೇಜು ಸೇರಿದ್ದ ರೆನೇ ನೀರಾ ಅವರಿಗೆ ಓದುವ ಹಂಬಲ ಹೆಚ್ಚಾಗಿಯೇ ಇತ್ತು. 

ಅಜ್ಜ ಮೊಮ್ಮಗಳು ಒಂದೇ ಸಮಯದಲ್ಲಿ ಪದವಿ ಪ್ರಮಾಣ ಪತ್ರ ಪಡೆದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಗತ್ತಿನ ಹಲವೆಡಯಿಂದ ವೃದ್ಧನ ಇಚ್ಛಾ ಶಕ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ.  ಯುಟಿಎಸ್​ಎ ಲಿಬರಲ್​ ಮತ್ತು ಫೈನ್​ ಆರ್ಟ್​ ಕಾಲೇಜಿನಿಂದ ರೆನೇ ನೀರಾ ಪದವಿ ಪಡೆದಿದ್ದಾರೆ. ಈ ಬಗ್ಗೆ ಕಾಲೇಜ್​ ತನ್ನ ಫೇಸ್ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದು ಜಗತ್ತಿನ ಹಲವೆಡೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಗ್ಗೆ ಅವರ ಮೊಮ್ಮಗಳು ಮಾತನಾಡಿ ರೆನೇ ನೀರಾ ಅವರು 1950ರಲ್ಲಿ ವಿಶ್ವವಿದ್ಯಾಲಯದಲ್ಲಿ ಓದುವನ್ನು ನಿಲ್ಲಿಸಿದ್ದರು. ಪತ್ನಿಯ ಮರಣದ ನಂತರ 2016ರಲ್ಲಿ  ಯುಟಿಎಸ್​ಎ ಲಿಬರಲ್​ ಮತ್ತು ಫೈನ್​ ಆರ್ಟ್​ ಕಾಲೇಜಿಗೆ ಸೇರಿಕೊಂಡರು ಆಗ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಓದುವ ಆಸಕ್ತಿ ನಮಗೂ ಸ್ಪೂರ್ತಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ:

ಪುಟ್ಟ ಬಾಲಕಿಯೊಂದಿಗೆ ವ್ಯಾಯಾಮ ಮಾಡಿದ ನಾಯಿ; ವಿಡಿಯೋ ವೈರಲ್

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್