ಮಗನಿಗಾಗಿ ಗುಜರಿ ವಸ್ತುಗಳಿಂದ ನಾಲ್ಕು ಚಕ್ರದ ವಾಹನ ತಯಾರಿಸಿದ ವ್ಯಕ್ತಿ : ವಾಹನ ಮೆಚ್ಚಿಕೊಂಡ ಆನಂದ್ ಮಹೀಂದ್ರಾರಿಂದ ಬೊಲೇರೋ ಗಿಫ್ಟ್
ಆನಂದ್ ಮಹಿಂದ್ರಾ ಅವರು ಈ ವಾಹನವನ್ನು ನೋಡಿ ಮೆಚ್ಚಿಕೊಂಡಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜನರ ಕ್ರಿಯೇಟಿವಿಟಿ, ಜಾಣ್ಮೆಯನ್ನು ನಾನು ಸದಾ ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಗುಜರಿ ವಸ್ತುಗಳನ್ನು ಬಳಸಿ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ. ಹಳೆಯ ಕಾರಿನ ಭಾಗಗಳನ್ನು ಬಳಸಿ ಈ ವಾಹನವನ್ನು ತಯಾರಿಸಲಾಗಿದೆ. ಮಗನ ಆಸೆ ಪೂರೈಸಲು ತಯಾರಿಸಿದ ಈ ವಾಹನ ಈಗ ಮಹೇಂದ್ರ ಗ್ರುಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಹಿಸ್ಟಾರಿಕಾನೋ ಎನ್ನುವ ಯುಟ್ಯೂಬ್ ಚಾನೆಲ್ ಪ್ರಕಾರ ಈ ವಾಹನವನ್ನು ದತ್ತಾತ್ರೆಯ ಲೊಹರ್ ಎನ್ನುವ ವ್ಯಕ್ತಿ ತಯಾರಿಸಿದ್ದಾರೆ. ಅಲ್ಪ ವಿದ್ಯಾಭ್ಯಾಸವನ್ನು ಹೊಂದಿದ್ದ ದತ್ತಾತ್ರೆಯ ಎನ್ನುವವರು ಮಗನ ಗಾಡಿಯ ಆಸೆ ಪೂರೈಸಲು ವಿಭಿನ್ನವಾಗಿ ಯೋಚಿಸಿ, ಗುಜರಿ ವಸ್ತುಗಳಿಂದ ವಾಹನ ತಯಾರಿಸಿದ್ದಾರೆ. ಆನಂದ್ ಮಹಿಂದ್ರಾ ಅವರು ಈ ವಾಹನವನ್ನು ನೋಡಿ ಮೆಚ್ಚಿಕೊಂಡಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜನರ ಕ್ರಿಯೇಟಿವಿಟಿ, ಜಾಣ್ಮೆಯನ್ನು ನಾನು ಸದಾ ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ದತ್ತಾತ್ರೆಯ ಲೋಹರ್ ಅವರು ತಯಾರಿಸಿದ ವಾಹನದ ಕುರಿತು 45 ಸೆಕೆಂಡ್ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ ವೀಡಿಯೋದಲ್ಲಿ ವಾಹನವು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಕೇವಲ 60 ಸಾವಿರ ರೂ.ಗಳಲ್ಲಿ ತಯಾರಾದ ಈ ವಾಹನವು ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಕಂಡುಬರುವ ಕಿಕ್ ಸ್ಟಾರ್ಟ್ ವಿಧಾನವನ್ನು ಹೊಂದಿದೆ.
This clearly doesn’t meet with any of the regulations but I will never cease to admire the ingenuity and ‘more with less’ capabilities of our people. And their passion for mobility—not to mention the familiar front grille pic.twitter.com/oFkD3SvsDt
— anand mahindra (@anandmahindra) December 21, 2021
ಇನ್ನೊಂದು ವೀಡಿಯೋದಲ್ಲಿ ದತ್ತಾತ್ರೆಯ ಅವರು ನಿರ್ಮಿಸಿದ ಗಾಡಿಯು ಉಳಿದ ವಾಹನಗಳಂತೆ ನಿಯಮವನ್ನು ಹೊಂದಿಲ್ಲದ ಕಾರಣ ಸ್ಥಳೀಯ ಅಧಿಕಾರಿಗಳು ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಿಲ್ಲ. ಈ ಕಾರಣಕ್ಕಾಗಿ ಆನಂದ್ ಮಹೀಂದ್ರಾ ಅವರು ಬೊಲೆರೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ದತ್ತಾತ್ರೆಯ ಅವರು ತಯಾರಿಸಿದ ವಾಹನವನ್ನು ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಇತರರಿಗೆ ಸ್ಪೂರ್ತಿಯಾಗುವಂತೆ ಪ್ರದರ್ಶಿಲಾಗುವುದು ಎಂದು ತಿಳಿಸಿದ್ದಾರೆ. ಆನಂದ್ ಮಹೀಂದ್ರಾ ಅವರ ಟ್ವೀಟ್ ನೆಟ್ಟಿಗರನ್ನು ಆಕರ್ಷಿಸಿದ್ದು 14 ಸಾವಿರಕ್ಕೂ ಹೆಚ್ಚು ಲೈಕ್ ಮತ್ತು 1300ಕ್ಕೂ ಅಧಿಕ ರೀಟ್ವೀಟ್ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ:
Viral Video: ಕುಕ್ಕರ್ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್
Published On - 11:06 am, Thu, 23 December 21