ಸಾಧನೆಗೆ ವಯಸ್ಸಿನ ಹಂಗಿಲ್ಲ, ವಯಸ್ಸು ಎಷ್ಟೇ ದಾಟಿದರು, ಎಷ್ಟೇ ಸಣ್ಣದಾದರೂ ಸಾಧನೆ ಸಾಧ್ಯವಾಗುವುದು ಮಾತ್ರ ದೃಢ ಸಂಕಲ್ಪದಿಂದಲೇ ಆಗಿದೆ. ಇಲ್ಲೊಬ್ಬ 9 ವರ್ಷದ ಬಾಲಕ ಅತೀ ಕಿರಿಯ ಪ್ರಮಾಣೀಕೃತ ಯೋಗ ಟೀಚರ್ (Yoga Teacher) ಎನಿಸಿಕೊಂಡಿದ್ದಾನೆ. ಅಲ್ಲದೆ ಅತಿ ಕಿರಿಯ ಯೋಗ ಟೀಚರ್ ಎನಿಸಿಕೊಳ್ಳುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್(Guinness World Record) ನಿರ್ಮಿಸಿದ್ದಾನೆ. ಈ ಕುರಿತು ಗಿನ್ನೀ ಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಯುಟ್ಯೂಬ್ (YouTube) ನಲ್ಲಿ ಮಾಹಿತಿ ಹಂಚಿಕೊಂಡಿದೆ.
ರೆಯಾಶ್ ಸುರಾನಿ ಎನ್ನುವ 9 ವರ್ಷದ ಬಾಲಕ ಈ ಸಾಧನೆ ಮಾಡಿದ್ದಾನೆ. ಗಿನ್ನೀಸ್ವರ್ಲ್ಡ್ ರೆಕಾರ್ಡ್ ಹಂಚಿಕೊಂಡಿರುವ ವಿಡಿಯೋದಲ್ಲಿ ಬಾಲಕ ಮೊದಲು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ನಂತರ ಯೋಗದ ಬಗೆಗೆ ಆತನಿಗಿರುವ ಆಸಕ್ತಿಯ ಬಗ್ಗೆ ಹೇಳುತ್ತಾನೆ. ಯೋಗವನ್ನು ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ ಎನ್ನುವ ರೆಯಾಶ್ ಯೋಗದಿಂದ ಇಂಟರ್ನೆಟ್ ಮತ್ತುಏರ್ಕೂಲರ್ಗಳಿಲ್ಲದೆಯೂ ಬದುಕಬಹುದು ಎಂದಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ಯುಟ್ಯೂಬ್ನಲ್ಲಿ ಹಂಚಿಕೊಂಡ ವಿಡಿಯೋ 500 ಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದ್ದು, ಬಾಲಕನ ಸಾಧನೆ ನೋಡಿ ನೆಟ್ಟಿಗರು ಶ್ಲಾಘಿಸಿದ್ದಾರೆ.
ರೆಯಾಶ್ ಆನಂದ ಶೇಖರ್ ಯೋಗ ಶಾಲೆಯಲ್ಲಿ 200 ಗಂಟೆಗಳ ಯೋಗ ತರಬೇತಿಯನ್ನು ಪಡೆದು ನಂತರ ಪ್ರಮಾಣಪತ್ರವನ್ನು ಪಡೆದಿದ್ದಾರೆ. ವರ್ಲ್ಡ್ ರೆಕಾರ್ಡ್ ವರದಿಯ ಪ್ರಕಾರ ರೆಯಾಶ್ ತನ್ನ 4ನೇ ವಯಸ್ಸಿಗೇ ಯೋಗದ ತರಬೇತಿ ಪಡೆಯಲು ಆರಂಭಿಸಿದ್ದನು. ಸದ್ಯ ಅತೀ ಕಿರಿಯ ಯೋಗ ಟೀಚರ್ ಬಗ್ಗೆ ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಕಿತ್ತು ತಿನ್ನುವ ಬಡತನವಿದ್ದರೂ ಆಹಾರಕ್ಕೆ ಹಣ ನೀಡಲು ಮುಂದಾದ ವೃದ್ಧೆ: ಸ್ವಾಭಿಮಾನದ ಬದುಕು ಎಂದ ನೆಟ್ಟಿಗರು
Published On - 3:43 pm, Sat, 19 February 22