ನ್ಯಾನೋ ಕಾರನ್ನು ಹೆಲಿಕಾಪ್ಟರನ್ನಾಗಿಸಿದ ಮೆಕ್ಯಾನಿಕ್: ಮದುವೆ ಮನೆಗಳ ಬೇಡಿಕೆಯ ವಾಹನವಾದ ನ್ಯಾನೋ ಕಾರ್ ಹೆಲಿಕಾಪ್ಟರ್
ಲ್ಲೊಬ್ಬರು ನ್ಯಾನೋ ಕಾರನ್ನು ಹೆಲಿಕ್ಯಾಪ್ಟರ್ ಆಗಿ ಪರಿವರ್ತಿಸಿದ್ದು, ಮದುವೆಗಾಗಿ ಬಾಡಿಗೆ ನೀಡುತ್ತಿದ್ದಾರೆ. ಸದ್ಯ ಈ ನ್ಯಾನೋ ಕಾರಿನ ಹೆಲಿಕ್ಯಾಪ್ಟರ್ ಸಖತ್ ವೈರಲ್ ಆಗಿದೆ. ಮದುವೆ ಮನೆಗಳಲ್ಲಿ ಬಹು ಬೇಡಿಕೆಯ ವಾಹನವಾಗಿದೆ.
ಭಾರತೀಯ ಮದುವೆ (Wedding) ಸಮಾರಂಭಗಳಲ್ಲಿ ವಧು ವರರನ್ನು ಕರೆತರಲು ವಿವಿಧ ರೀತಿಯ ಪ್ಲಾನ್ ಮಾಡುತ್ತಾರೆ. ಕುದುರೆಗಳ ಮೇಲೆ ವರನನ್ನು ಕರೆತರುವುದು, ವಧುವನ್ನು ಪಲ್ಲಕ್ಕಿಯ ಮೇಲೆ ಕರೆತರುವುದು ಹೀಗೆ ವಿಭಿನ್ನ ರೀತಿಯ ಕಲ್ಪನೆಯಲ್ಲಿ ಮಂಟಪಕ್ಕೆ ವಧುವರರ ಆಗಮನವಾಗುತ್ತದೆ. ಆದರೆ ಇದಕ್ಕೆಲ್ಲಾ ಹಣವೂ ಅಷ್ಟೇ ಖರ್ಚಾಗುತ್ತದೆ. ಆದರೆ ಇಲ್ಲೊಬ್ಬರು ನ್ಯಾನೋ ಕಾರನ್ನು(Nano Car) ಹೆಲಿಕಾಪ್ಟರ್ (Helicopter) ಆಗಿ ಪರಿವರ್ತಿಸಿದ್ದು, ಮದುವೆಗಾಗಿ ಬಾಡಿಗೆ ನೀಡುತ್ತಿದ್ದಾರೆ. ಸದ್ಯ ಈ ನ್ಯಾನೋ ಕಾರಿನ ಹೆಲಿಕಾಪ್ಟರ್ ಸಖತ್ ವೈರಲ್ ಆಗಿದೆ. ಮದುವೆ ಮನೆಗಳಲ್ಲಿ ಬಹು ಬೇಡಿಕೆಯ ವಾಹನವಾಗಿದೆ.
ಇದನ್ನು ಬಿಹಾರದ ಬಾಗಹಾ ಪ್ರದೇಶದ ಮೆಕ್ಯಾನಿಕ್ ಗುಡ್ಡು ಶರ್ಮಾ ಎನ್ನುವವರು ಈ ಹೊಸ ರೂಪದ ವಾಹನವನ್ನು ತಯಾರಿಸಿದ್ದಾರೆ. 2 ಲಕ್ಷ ರೂಗಳನ್ನು ಖರ್ಚು ಮಾಡಿ ನ್ಯಾನೋ ಕಾರನ್ನುಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದು, ಒಂದು ದಿನಕ್ಕೆ ಈ ನ್ಯಾನೋಹೆಲಿಕಾಪ್ಟರ್ನ ಬಾಡಿಗೆ 15 ಸಾವಿರ ರೂ ಆಗಿದೆ. ಸದ್ಯ ಬಿಹಾರದ ಸುತ್ತ ಮುತ್ತ ಪ್ರದೇಶಗಳಲ್ಲಿ ಈ ನ್ಯಾನೋ ಕಾರಿನ ಹೆಲಿಕಾಪ್ಟರ್ಗೆ ಸಖತ್ ಬೇಡಿಕೆ ಬಂದಿದೆ. ಈಗಾಗಲೇ ಈಹೆಲಿಕಾಪ್ಟರ್ ಅನ್ನು 19 ಜನ ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದ್ದು, ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಕುರಿತು ಗುಡ್ಡು ಶರ್ಮಾ ಮಾತನಾಡಿ, ಡಿಜಿಟಲ್ ಇಂಡಿಯಾ ಪರಿಕಲ್ಪನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅನ್ವಯವಾಗುತ್ತದೆ. ಅಲ್ಲದೆ ಸ್ವಾವಲಂಬಿ ಭಾರತಕ್ಕೆ ಇದು ಉತ್ತಮ ಉದಾಹರಣೆಯಾಗಲಿದೆ. ಒಂದೂವರೆ ಲಕ್ಷ ರೂಗಳಲ್ಲಿ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತನೆ ಮಾಡಲಾಗಿದೆ. ಅದಕ್ಕೆ ಅಲಂಕರಿಸಿ, ಚೆಂದಗೊಳಿಸಿ ಬಾಡಿಗೆಗೆ ನೀಡುವಂತೆ ಮಾಡಲು 2 ಲಕ್ಷ ರೂ ವೆಚ್ಚವಾಗಿದೆ ಎಂದಿದ್ದಾರೆ. ಸದ್ಯ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿರುವ ವಿಭಿನ್ನ ವಾಹನಕ್ಕೆ ಮದುವೆಗಳಲ್ಲಿ ಭಾರೀ ಬೇಡಿಕೆ ಬರುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ಹಾರುತ್ತಿದ್ದ ವಿಮಾನದ ಕಾಕ್ಪಿಟ್ಗೆ ನುಗ್ಗಿ ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕ: ವಿಡಿಯೋ ವೈರಲ್