ಹಾರುತ್ತಿದ್ದ ವಿಮಾನದ ಕಾಕ್ಪಿಟ್ಗೆ ನುಗ್ಗಿ ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕ: ವಿಡಿಯೋ ವೈರಲ್
ಸುಮಾರು 30 ಸಾವಿರಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನೆ ತೆರೆಯಲು ಯತ್ನಿಸಿದ್ದಾನೆ. ಇದರಿಂದ ವಿಮಾನವನ್ನು ಟೆಕ್ಸಾಸ್ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ.
ಟೇಕ್ಆಪ್ ಆದ ವಿಮಾನದಲ್ಲಿ(Flight) ಪ್ರಯಾಣಿಕನೊಬ್ಬ ಕಾಕ್ಪಿಟ್(Cockpit) ಪ್ರವೇಶಿಸಿ ಹಾರುತ್ತಿದ್ದ ವಿಮಾನದ ಬಾಗಿಲನ್ನು ತೆಗೆಯಲು ಯತ್ನಿಸಿದ ಘಟನೆ ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ನಡೆದಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನು ತೆರೆಯಲು ಯತ್ನಿಸಿದ್ದಾನೆ. ಇದರಿಂದ ವಿಮಾನವನ್ನು ಕಾನ್ಸಾಸ್ನಲ್ಲಿ (Kansas) ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಸದ್ಯ ವಿಮಾನದಲ್ಲಿ ಅಶಿಸ್ತು ಪ್ರದರ್ಶಿಸಿದ ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
passengers held the individual and a flight attendant used a coffee pot to subdue him as the plane descended rapidly. the man was bleeding as the police in this video are taking him off the flight after landing in Kansas #AA1775 pic.twitter.com/HL2JnyYglw
— Mouaz Moustafa (@SoccerMouaz) February 13, 2022
1775 ಸಂಖ್ಯೆ ವಿಮಾನ ಲಾಸ್ ಎಂಜಲೀಸ್ನಿಂದ ವಾಷಿಂಗ್ಟನ್ಗೆ ಪ್ರಯಾಣಿಸುತ್ತಿತ್ತು. ಪ್ರಯಾಣಿಕನ ಅಶಿಸ್ತು ವರ್ತನೆಯಿಂದ ಮಧ್ಯದಲ್ಲಿಯೇ ಏಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿ ಆತ ಕಾಕ್ಪಿಟ್ಗೆ ಪ್ರವೇಶಿಸಿ ಬಾಗಿಲನ್ನು ತೆರೆಯುತ್ತಿರುವ ದೃಶ್ಯವನ್ನು ಸಹಪ್ರಯಾಣಿಕರು ಸೆರೆಹಿಡಿದಿದ್ದು, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ಈ ಕುರಿತು ಫೆಡರಲ್ ಬ್ಯೂರೂ ಇನ್ವೆಸ್ಟಿಗೇಷನ್ ಅಧಿಕಾರಿಗಳು ಘಟನೆಯನ್ನು ದೃಢೀಕರಿಸಿದ್ದು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:
ಸಮುದ್ರದ ಮಧ್ಯೆ ಧಗಧಗನೆ ಹೊತ್ತಿ ಉರಿಯಿತು ಲ್ಯಾಂಬೋರ್ಗಿನಿ, ಆಡಿ ಸೇರಿ ಸಾವಿರಾರು ಕಾರುಗಳಿದ್ದ ಹಡಗು!