100ನೇ ವರ್ಷದ ಹುಟ್ಟುಹಬ್ಬದಂದು 90 ವರ್ಷದ ಹೆಂಡತಿಯನ್ನು ಮರುಮದುವೆಯಾದ ವೃದ್ಧ

ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತನ್ನ 100ನೇ ವರ್ಷದ ಜನ್ಮದಿನದ ಆಚರಣೆ ವೇಳೆ ತನ್ನ 90 ವರ್ಷದ ಹೆಂಡತಿಯನ್ನು ಮರು ಮದುವೆಯಾಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ. 

100ನೇ ವರ್ಷದ ಹುಟ್ಟುಹಬ್ಬದಂದು 90 ವರ್ಷದ ಹೆಂಡತಿಯನ್ನು ಮರುಮದುವೆಯಾದ ವೃದ್ಧ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Feb 18, 2022 | 5:18 PM

ಒಬ್ಬ ಮನುಷ್ಯನಿಗೆ 100ನೇ ವರ್ಷದ ಜನ್ಮದಿನವನ್ನು ತನ್ನ ತುಂಬು ಕುಟುಂಬದೊಂದಿಗೆ ಆಚರಿಸಿಕೊಳ್ಳುವುದು ವಿಶೇಷವೇ ಆಗಿರುತ್ತದೆ.  ಒಂದು ಶತಮಾನದ ಏಳು ಬೀಳುಗಳನ್ನು ದಾಟಿ ಕುಟುಂಬವನ್ನು ಕಟ್ಟಿ ನಿಲ್ಲಿಸುವುದು ಸುಲಭದ ಮಾತಲ್ಲ. ಹೀಗಿದ್ದಾಗ ಪಶ್ಚಿಮ ಬಂಗಾಳದ (West Bengal) ವ್ಯಕ್ತಿಯೊಬ್ಬ ತನ್ನ 100ನೇ ವರ್ಷದ ಜನ್ಮದಿನದ ಆಚರಣೆ ವೇಳೆ ತನ್ನ 90 ವರ್ಷದ ಹೆಂಡತಿಯನ್ನು ಮರು ಮದುವೆಯಾಗಿದ್ದಾರೆ (Re-marriage).  100 ವರ್ಷದ ಬಿಸ್ವಂತ್​ ಸರ್ಕಾರ್​​ ತನ್ನ 90 ವರ್ಷದ ಪತ್ನಿ ಸೌರ್ಧವನಿ ಸರ್ಕಾರ್​ ಅವರನ್ನು ಅದ್ದೂರಿಯಾಗಿ ಮತ್ತೆ ಮದುವೆಯಾಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ (Viral)​ ಆಗಿದೆ.

ಬಿಸ್ವಂತ್​ ಸರ್ಕಾರ್​  6 ಮಕ್ಕಳು, 23 ಮೊಮ್ಮಕ್ಕಳು, 10 ಮಂದಿ ಮರಿ ಮೊಮ್ಮಕ್ಕಳ ಹಾಗೂ 6 ಮಂದಿ ಸೊಸೆಯಂದಿರನ್ನು ಹೊಂದಿದ್ದಾರೆ. ಬಿಸ್ವಂತ್​ ಅವರ ಮರು ಮದುವೆ ಮದುವೆ ಮತ್ತು 100ನೇ ವರ್ಷದ ಜನ್ಮದಿನವನ್ನು ಕುಟುಂಬ ಅದ್ದೂರಿಯಾಗಿ ಆಚರಿಸಿದೆ.  ಬಿಸ್ವಂತ್​ ಅವರ ಮಕ್ಕಳು ಮತ್ತು ಅವರ ಕುಟುಂಬ ಪಶ್ಚಿಮ ಬಂಗಾಳ ಬಿಟ್ಟು ಬೇರೆ ರಾಜ್ಯಗಳಲ್ಲಿ ನೆಲೆಸಿದ್ದು ಇ ವಿಶೇಷ ದಿನವನ್ನು ಆಚರಿಸಲು ಹಳ್ಳಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಇಂಡಿಯಾ.ಕಾಮ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಶೇಷ ಅಚರಣೆಯ ಕುರಿತು ಬಿಸ್ವಂತ್​ ಅವರ ಕುಟುಂಬ ಮಾತನಾಡಿದ್ದು, ನಿಜವಾದ ಮದುವೆಯಲ್ಲಿ ಹೇಗೆ ವಧು ಗಂಡನ ಮನೆಗೆ ಪ್ರವೇಶಿಸುತ್ತಾಳೋ ಅದೆ ರೀತಿ ಮದುವೆಯನ್ನು ಮಾಡಲಾಗಿದೆ.  ವರನ ಮನೆಯಿಂದ 5 ಕಿಮೀ ದೂರದಿಂದ ವಧುವನ್ನು ಕರೆದುಕೊಂಡು ಬರುವಂತೆ ಮಾಡಿ, ಎಲ್ಲಾ ರೀತಿಯ ಸಂಪ್ರದಾಯಗಳನ್ನು ಆಚರಣೆ ಮಾಡುವ ಮೂಲಕ ಮದುವೆಯನ್ನು ಮಾಡಲಾಗಿದೆ. ವರನನ್ನು ಕುದುರೆಗಾಡಿಯಲ್ಲಿ ಕರೆತಂದು, ಹಾರ ಬದಲಾಯಿಸಿಕೊಳ್ಳುವ ರೀತಿಯಲ್ಲಿಯೇ ಆಚರಿಸಲಾಗಿದೆ ಎಂದಿದ್ದಾರೆ. ಸದ್ಯ ಈ ವಿಚಾರ  ಎಲ್ಲೆಡೆ ವೈರಲ್​ ಆಗಿದೆ.

 ಇದನ್ನೂ ಓದಿ:

Viral Story: ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಸ್ಕೂಟರ್​ ಖರೀದಿಸಿದ ವ್ಯಕ್ತಿ

Published On - 5:11 pm, Fri, 18 February 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್