93 ಮಿಲಿಯನ್ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯ ಹೊಟ್ಟೆಯಲ್ಲಿ ಡೈನೋಸರ್ ಮರಿ ಪತ್ತೆ
ಪಳಯುಳಿಕೆ ಮೊಸಳೆಯ ಹೊಟ್ಟೆಯಲ್ಲಿ ಡೈನೋಸರ್ ಮರಿ ಇರುವುದುನ್ನು ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಮಾಡಿದ್ದಾರೆ. 93 ಮಿಲಿಯನ್ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯಲ್ಲಿ ಡೈನೋಸರ್ ಮರಿ ಇರುವುದನ್ನು ಕಂಡುಹಿಡಿಯಲಾಗಿದೆ.
ಪಳಯುಳಿಕೆ ಮೊಸಳೆಯ (Fossil Crocodile) ಹೊಟ್ಟೆಯಲ್ಲಿ ಡೈನೋಸರ್ ಮರಿ (Baby Dinosaur )ಇರುವುದುನ್ನು ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಮಾಡಿದ್ದಾರೆ. 93 ಮಿಲಿಯನ್ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯಲ್ಲಿ ಡೈನೋಸರ್ ಮರಿ ಇರುವುದನ್ನು ಕಂಡುಹಿಡಿಯಲಾಗಿದೆ. ಈ ಮೊಸಳೆಯ ಪಳಯುಳಿಕೆಯನ್ನು 2010ರಲ್ಲಿ ಪತ್ತೆ ಮಾಡಲಾಗಿತ್ತು. ಅದರ ಮೇಲೆ ಅಧ್ಯಯನ ನಡೆಸಿದ ಆಸ್ಟ್ರೇಲಿಯನ್ ಏಜ್ ಆಫ್ ಡೈನಾಸರಸ್ ಮ್ಯೂಸಿಯಂ ಮತ್ತು ಯುನಿವರ್ಸಿಟಿ ಆಫ್ ನ್ಯೂ ಇಂಗ್ಲೆಂಡ್ ನ ವಿಜ್ಞಾನಿಗಳು ಡೈನೋಸರ್ ಮರಿ ಇರುವುದನ್ನು ಪತ್ತೆ ಮಾಡಿದ್ದಾರೆ. ಅದನ್ನು ಅಧಿಕೃತವಾಗಿ ಕಾನ್ಫ್ರಾಕ್ಟೋಸುಚಸ್ ಸೌರೋಕ್ಟೋನೋಸ್ (Confractosuchus sauroktonos) ಎಂದು ಕರೆಯಲಾಗಿದೆ. ಇದನ್ನು ಮಧ್ಯ ಕ್ವೀನ್ಸ್ಲ್ಯಾಂಡ್ನಲ್ಲಿ ಕಂಡುಹಿಡಿಯಲಾಗಿದೆ.
ಪಳಯುಳಿಕೆ ಮೊಸಳೆಯ ಹೊಟ್ಟೆಯಲ್ಲಿರುವ ಕೊನೆಯ ಆಹಾರವಾದ ಡೈನೋಸಾರ್ ಮರಿಯ ಆಧಾರದ ಮೇಲೆ ಪಳಯುಳಿಕೆಯು 93 ಮಿಲಿಯನ್ ವರ್ಷಗಳಷ್ಟು ಹಿಂದಿನದು ಎಂದು ಗುರುತಿಸಿದ್ದಾರೆ. ಕಾನ್ಫ್ರಾಕ್ಟೋಸುಚಸ್ ಸೌರೋಕ್ಟೋನೋಸ್ ಎನ್ನುವುದನ್ನು ಡೈನೋಸಾರ್ಅನ್ನು ಕೊಲೆ ಮಾಡಿದ ಮೊಸಳೆ ಎಂದು ಅನುವಾದಿಸಲಾಗಿದೆ. 2 ರಿಂದ 2.5 ಮೀ ಉದ್ದದ ಜೀವಿಯನ್ನು ಮುರಿದ ಮೊಸಳೆ ಎಂದು ಹೇಳಲಾಗಿದೆ.
ಚಿಕ್ಕ ಡೈನೋಸಾರ್ ಮೊಸಳೆಯ ಹೊಟ್ಟೆಗೆ ಕೊನೆಯ ಆಹಾರವಾಗಿದೆ. ಆದರೆ ಅಷ್ಟು ಸ್ವಲ್ಪ ಆಹಾರ ಮೊಸಳೆಯ ಹೊಟ್ಟೆಗೆ ಸಾಕಾಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ಕುತೂಹಲವನ್ನು ಮೂಡಿಸಿದೆ. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನವನ್ನು ಮುಂದುವರೆಸಿದ್ದಾರೆ ಎಂದು ಇಂಡಿಯಾ ಟೈಮ್ಸ್. ಕಾಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:
ಜಗತ್ತಿನ ಅತಿ ಹೆಚ್ಚು ತೂಕದ ಸ್ಟ್ರಾಬೆರಿ ಬೆಳೆದು ಗಿನ್ನಿಸ್ ದಾಖಲೆ ಮಾಡಿದ ವ್ಯಕ್ತಿ
Published On - 1:11 pm, Fri, 18 February 22