ಡೌನ್ ಆಯಿತೇ ಟ್ವಿಟರ್: ನೆಟ್ ಜಗತ್ತಿನಲ್ಲಿ ಮೆಸೇಜ್ಗಳ ಮಹಾಪೂರ
ಟ್ವಿಟರ್ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್ಗಳು ಬಂದಿವೆ ಎಂದು ಡೌನ್ಡಿಟೆಕ್ಟರ್ ವರದಿ ತಿಳಿಸಿದೆ
ಟ್ವಿಟರ್ ವೆಬ್ಸೈಟ್ ಮತ್ತು ಆ್ಯಪ್ ಕೆಲ ಸಮಯ ಡೌನ್ ಇತ್ತು ಎಂದು ಸಾವಿರಾರು ಜನರು ಆನ್ಲೈನ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಡೌನ್ಡಿಟೆಕ್ಟರ್ (www.downdetector.com) ವೆಬ್ಸೈಟ್ ವರದಿ ಮಾಡಿದೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಪೋಸ್ಟ್ಗಳು ಮತ್ತು ಸ್ವತಃ ತನಗೆ ಬರುವ ದೂರುಗಳನ್ನು ಆಧರಿಸಿ ಡೌನ್ಡಿಟೆಕ್ಟರ್ ವೆಬ್ಸೈಟ್ ವರದಿಯನ್ನು ಪ್ರಕಟಿಸಿದೆ. ಟ್ವಿಟರ್ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್ಗಳು ಬಂದಿವೆ ಎಂದು ಡೌನ್ಡಿಟೆಕ್ಟರ್ ವರದಿ ತಿಳಿಸಿದೆ. ಯಾವುದೇ ಟ್ವೀಟ್ ಲೋಡ್ ಮಾಡಲು, ಹೊಸದಾಗಿ ಟ್ವೀಟ್ ಮಾಡಲು ಅಥವಾ ಬೇರೆಯವರ ಪ್ರೊಫೈಲ್ಗಳನ್ನು ನೋಡಲು ಅವಕಾಶ ಸಿಗುತ್ತಿಲ್ಲ. ಲಿಂಕ್ಗಳೂ ಕೆಲಸ ಮಾಡುತ್ತಿಲ್ಲ ಎಂದು ಜನರು ದೂರುತ್ತಿದ್ದರು.
ಕೆಲವರಿಗೆ ಸಮ್ಥಿಂಗ್ ವೆಂಟ್ ರಾಂಗ್ ಮತ್ತು ಟ್ರೈ ರಿಲೋಡಿಂಗ್ (Something went wrong and Try reloading) ಮೆಸೇಜ್ಗಳು ಹಲವರಿಗೆ ಕಾಣಿಸಿದವು ಎಂದು ಹಲವರು ವರದಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದ ಈ ದೈತ್ಯ ಕಂಪನಿಯಲ್ಲಿ ಸಮಸ್ಯೆ ಆಗಿದೆ ಎನ್ನುವುದು ಇದೇ ಮೊದಲ ಬಾರಿಗೆ ಹೊರಗೆ ಬಂದಿದ್ದಲ್ಲ. ಕಳೆದ ಶುಕ್ರವಾರವು ಟ್ವಿಟರ್ನಲ್ಲಿ ತಾಂತ್ರಿಕ ಸಮಸ್ಯೆ ವರದಿಯಾಗಿತ್ತು. ಅದನ್ನು ಸರಿಪಡಿಸಿದ್ದಾಗಿ ಕಂಪನಿಯು ಹೇಳಿಕೆ ನೀಡಿತ್ತು.
ತೊಂದರೆಯಾಗಿರುವುದರ ಬಗ್ಗೆ ಒಪ್ಪಿಕೊಂಡು ಟ್ವಿಟರ್ ತನ್ನ ಅಧಿಕೃತ ಖಾತೆಯಿಂದ ಕ್ಷಮೆಯಾಚಿಸಿದೆ. ‘ಈಗ ಎಲ್ಲವೂ ಸರಿಯಾಗಿದೆ’ ಎಂದು ಟ್ವಿಟರ್ ಟ್ವೀಟ್ ಮಾಡಿದೆ. 2021ರ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಟ್ವಿಟರ್ನ ಸಕ್ರಿಯ ಬಳಕೆದಾರರ ಸಂಖ್ಯೆಯು 2.17 ಕೋಟಿಗೆ ಏರಿಕೆಯಾಗಿತ್ತು. ಟ್ವಿಟರ್ನ ಬೆಳವಣಿಗೆಯು ವಾರ್ಷಿಕ ಸರಾಸರಿ ಶೇ 13ರಷ್ಟು ಹೆಚ್ಚಾಗುತ್ತಿದೆ. ಇದು ಅಮೆರಿಕ ಷೇರುಪೇಟೆ ಹೂಡಿಕೆದಾರರ ನಿರೀಕ್ಷೆಗಳಿಗಿಂತಲೂ ಕಡಿಮೆ ಎಂದು ಅಮೆರಿಕದ ಷೇರು ದಲ್ಲಾಳಿಗಳು ಹೇಳಿದ್ದಾರೆ. ಟ್ವಿಟರ್ನ ತಾಂತ್ರಿಕ ಸಮಸ್ಯೆ ಬಹಿರಂಗಗೊಂಡ ನಂತರ ಟ್ವಿಟರ್ ಕಂಪನಿಯ ಷೇರುಗಳ ಮೌಲ್ಯ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಶೇ 0.21ರಷ್ಟು ಕುಸಿತ ಕಂಡಿತ್ತು.
User reports indicate Twitter is having problems since 11:09 AM EST. https://t.co/qqqwagygy9 RT if you’re also having problems #Twitterdown
— Downdetector (@downdetector) February 17, 2022
ಇದನ್ನೂ ಓದಿ: IPL 2021 Auction: ಟ್ವಿಟರ್ನಲ್ಲಿ ಅರ್ಜುನ್ ತೆಂಡೂಲ್ಕರ್ ಟ್ರೆಂಡಿಂಗ್, ಯಾವ ತಂಡಕ್ಕೆ ಸಚಿನ್ ಪುತ್ರ?