Viral Story: ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿಸಿದ ವ್ಯಕ್ತಿ
ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಅಸ್ಸಾಂನ ವ್ಯಕ್ತಿಯೊಬ್ಬರು ಸ್ಕೂಟರ್ ಖರೀದಿಸಿದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತು ಎಲ್ಲೆಡೆ ಪರಿಚಿತ. ಇಲ್ಲೊಂದು ಘಟನೆ ಅದನ್ನು ಮತ್ತೆ ಸಾಬೀತುಪಡಿಸಿದೆ. ಪುಟ್ಟ ಅಂಗಡಿಯ ಮಾಲೀಕರೊಬ್ಬರು ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು ಸ್ಕೂಟರ್ (Scooter) ಖರೀದಿಸಿದ್ದಾರೆ. ಬ್ರಾಂಡ್ ಮೊಬಿಲಿಟಿ ಸ್ಕೂಟರ್ಅನ್ನು ಅವರು ಖರೀದಿಸಿದ್ದಾರೆ. ಅದು ಹೇಗೆ ಎಂದರೆ ಎಲ್ಲವೂ ನಾಣ್ಯಗಳೇ (Coins)ಆಗಿವೆ. ಹೌದು, ಬುಟ್ಟಿಯಲ್ಲಿ ಚಿಲ್ಲರೆಯನ್ನು ತೆಗೆದುಕೊಂಡು ಹೋಗಿ ಶೋರೂಮ್ಗೆ ನೀಡಿ ಗಾಡಿಯನ್ನು ಖರೀದಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಅಸ್ಸಾಂನಲ್ಲಿ(Assam) ನಡೆದಿದೆ.
ಈ ಕುರಿತು ಪೇಸ್ಬುಕ್ ವೋಲ್ಗ್ ಮಾಡುವ ಹಿರಾಕ್ ಜೆ ದಾಸ್ ಎನ್ನುವವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಯುಟ್ಯೂಬ್ನಲ್ಲೂ ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ನಾಣ್ಯಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದು ಅದನ್ನು ಬುಟ್ಟಿಗೆ ಹಾಕಿ ನಂತರ ಅದನ್ನು ಎಣಿಸುವುದನ್ನು ಕಾಣಬಹದು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಎಷ್ಟೋ ಜನರಿಗೆ ಸ್ವಂತ ಹಣದಲ್ಲಿ ವಾಹನವನ್ನು ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದು ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲಿ ಅಸ್ಸಾಂನ ಮಧ್ಯಮ ವರ್ಗದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಸಂಪಾದನೆಯನ್ನು ಉಳಿಸಿ ಸ್ವಂತ ಸ್ಕೂಟಿಯನ್ನು ಖರೀದಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಕನಸನ್ನು ಕಾಣುವುದು ಸುಲಭ. ಅದನ್ನು ಈಡೇರಿಸಿಕೊಳ್ಳಲು ಕಷ್ಟಪಟ್ಟರೆ ಕನಸನ್ನು ನನಸಾಗಿಸಿಕೊಳ್ಳಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
93 ಮಿಲಿಯನ್ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯ ಹೊಟ್ಟೆಯಲ್ಲಿ ಡೈನೋಸರ್ ಮರಿ ಪತ್ತೆ
Published On - 2:41 pm, Fri, 18 February 22