ಸಮುದ್ರದ ಮಧ್ಯೆ ಧಗಧಗನೆ ಹೊತ್ತಿ ಉರಿಯಿತು ಲ್ಯಾಂಬೋರ್ಗಿನಿ, ಆಡಿ ಸೇರಿ ಸಾವಿರಾರು ಕಾರುಗಳಿದ್ದ ಹಡಗು!

ಈ ದುರಂತದ ವೇಳೆ ಹಡಗಿನಲ್ಲಿ ಒಟ್ಟು 1,100 ಫೋಕ್ಸ್​ವ್ಯಾಗನ್ ಕಾರುಗಳಿದ್ದವು. ಇದರ ಜೊತೆಗೆ ಒಟ್ಟಾರೆ 3,965 ಐಷಾರಾಮಿ ಕಾರುಗಳಿದ್ದವು.

ಸಮುದ್ರದ ಮಧ್ಯೆ ಧಗಧಗನೆ ಹೊತ್ತಿ ಉರಿಯಿತು ಲ್ಯಾಂಬೋರ್ಗಿನಿ, ಆಡಿ ಸೇರಿ ಸಾವಿರಾರು ಕಾರುಗಳಿದ್ದ ಹಡಗು!
ಸಮುದ್ರದಲ್ಲಿ ಹೊತ್ತಿ ಉರಿದ ಹಡಗು
Follow us
| Updated By: ಸುಷ್ಮಾ ಚಕ್ರೆ

Updated on:Feb 18, 2022 | 6:06 PM

ನವದೆಹಲಿ: ಫೋಕ್ಸ್‌ವ್ಯಾಗನ್ ಸಮೂಹದ (Volkswagen Group vehicles) ಸಾವಿರಾರು ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಫೆಲಿಸಿಟಿ ಏಸ್ ಎಂಬ ಬೃಹತ್ ಸರಕು ಹಡಗು ಬುಧವಾರ ಮಧ್ಯಾಹ್ನ ಅಟ್ಲಾಂಟಿಕ್ ಮಹಾಸಾಗರದ ಅಜೋರ್ಸ್ ದ್ವೀಪಗಳ ಬಳಿ ಹೊತ್ತಿ ಉರಿದಿದೆ. ಹಡಗಿಗೆ ಬೆಂಕಿ ಹೊತ್ತಿಕೊಂಡಾಗ ಫೋಕ್ಸ್​ವ್ಯಾಗನ್ ಜೊತೆಗೆ ಪೋರ್ಷೆ (Porsche), ಆಡಿ (Audi) ಮತ್ತು ಲಂಬೋರ್ಘಿನಿ (Lamborghini), ಬೆಂಟ್ಲಿ (Bentley) ಮುಂತಾದ ಐಷಾರಾಮಿ ಕಾರುಗಳು ಆ ಹಡಗಿನಲ್ಲಿದ್ದವು ಎಂದು ತಿಳಿದುಬಂದಿದೆ. ಈಗಾಗಲೇ ಆಟೋಮೊಬೈಲ್ ವಲಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಈ ದೊಡ್ಡ ಅವಘಡ ಸಂಭವಿಸಿದೆ. ಈ ಹಡಗಿನಲ್ಲಿದ್ದ 100ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಟೆಕ್ಸಾಸ್‌ನ ಪೋರ್ಟ್ ಆಫ್ ಹೂಸ್ಟನ್‌ಗೆ ಕೊಂಡೊಯ್ಯಲಾಗುತ್ತಿತ್ತು. ಈ ದುರಂತದ ವೇಳೆ ಹಡಗಿನಲ್ಲಿ ಒಟ್ಟು 1,100 ಫೋಕ್ಸ್​ವ್ಯಾಗನ್ ಕಾರುಗಳಿದ್ದವು. ಇದರ ಜೊತೆಗೆ ಒಟ್ಟಾರೆ 3,965 ಐಷಾರಾಮಿ ಕಾರುಗಳಿದ್ದವು.

ನೌಕಾಪಡೆಯ ಹೇಳಿಕೆಯ ಪ್ರಕಾರ, ಹಡಗಿನ 22 ಸಿಬ್ಬಂದಿಯನ್ನು ಪೋರ್ಚುಗೀಸ್ ನೌಕಾಪಡೆ ಮತ್ತು ವಾಯುಪಡೆಯ ಸಹಾಯದಿಂದ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳೀಯ ಹೋಟೆಲ್‌ಗೆ ಕರೆದೊಯ್ಯಲಾಗಿದೆ. ಈ ಬೃಹತ್ ಹಡಗಿನಲ್ಲಿ ಒಟ್ಟು 3,965 ಫೋಕ್ಸ್‌ವ್ಯಾಗನ್ AG ವಾಹನಗಳು ಇದ್ದವು. ಜರ್ಮನಿಯ ಫೋಲ್ಫ್ಸ್‌ಬರ್ಗ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಕಾರುಗಳ ಸಮೂಹ ಕಂಪನಿ ತನ್ನ ಫೋಕ್ಸ್‌ವ್ಯಾಗನ್ ಬ್ರಾಂಡ್ ಅನ್ನು ತಯಾರಿಸುತ್ತದೆ.

ಪೋರ್ಷೆಯ ವಕ್ತಾರರಾದ ಲ್ಯೂಕ್ ವಂಡೆಜಾಂಡೆ ಈ ಕುರಿತು ಮಾತನಾಡಿದ್ದು, ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಸುಮಾರು 1,100 ಪೋರ್ಷೆ ಕಾರುಗಳಿದ್ದವು. ಈ ಘಟನೆಯಿಂದ ತೊಂದರೆಗೊಳಗಾದ ಗ್ರಾಹಕರನ್ನು ಅವರ ಆಟೋಮೊಬೈಲ್ ಡೀಲರ್‌ಗಳು ಸಂಪರ್ಕಿಸುತ್ತಿದ್ದಾರೆ. ಫೆಲಿಸಿಟಿ ಏಸ್ ಎಂಬ ವ್ಯಾಪಾರಿ ಹಡಗಿನ 22 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಮುದ್ರದಲ್ಲಿ ಹಡಗಿನ ಮೂಲಕ ಕಾರುಗಳನ್ನು ಕೊಂಡೊಯ್ಯುವಾಗ ಅವಘಡ ಸಂಭವಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2019ರಲ್ಲಿ ಗ್ರ್ಯಾಂಡೆ ಅಮೇರಿಕಾ ಬೆಂಕಿಗೆ ಸಿಲುಕಿ ಮುಳುಗಿದಾಗ, ಆಡಿ ಮತ್ತು ಪೋರ್ಷೆ ಸೇರಿದಂತೆ 2,000ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸಮುದ್ರದಲ್ಲಿ ಮುಳುಗಿದ್ದವು.

ಫೆಲಿಸಿಟಿ ಏಸ್ ಎಂಬ ಹಡಗು ಫೆಬ್ರವರಿ 10ರಂದು ಜರ್ಮನಿಯ ಎಂಡೆನ್‌ನಿಂದ ಹೊರಟು ಬುಧವಾರ ಯುಎಸ್‌ನ ರೋಡ್ ಐಲ್ಯಾಂಡ್‌ನ ಡೇವಿಸ್‌ವಿಲ್ಲೆಗೆ ಆಗಮಿಸಬೇಕಿತ್ತು. ಪೋರ್ಚುಗೀಸ್ ದ್ವೀಪ ಪ್ರದೇಶವಾದ ಅಜೋರ್ಸ್‌ನ ಟೆರ್ಸಿರಾ ದ್ವೀಪದಿಂದ ಸುಮಾರು 200 ಮೈಲುಗಳಷ್ಟು ದೂರದಲ್ಲಿದ್ದಾಗ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಕಾಣಿಸಿಕೊಂಡ ಕೂಡಲೇ ಪೋರ್ಚುಗೀಸ್ ಪಡೆಗಳು ಸಿಬ್ಬಂದಿಯನ್ನು ಸ್ಥಳಾಂತರಿಸಿದರು.

ಇಲ್ಲಿಯವರೆಗೆ 1,100 ಫೋಕ್ಸ್​ವ್ಯಾಗನ್, 650 ಆಡಿ, 189 ಬೆಂಟ್ಲಿಗಳು ಸೇರಿದಂತೆ ಸುಮಾರು 3,965 ವಾಹನಗಳು ಆ ಹಡಗಿನಲ್ಲಿತ್ತು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Shocking Video: ಬೈಕ್​ಗಳಿಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದವರ ಮೇಲೆ ಹರಿದ ಐಷಾರಾಮಿ ಕಾರು; ಶಾಕಿಂಗ್ ವಿಡಿಯೋ ವೈರಲ್

ಶುಕ್ರವಾರ ಬೆಂಗಳೂರಿನ ಗ್ಯಾರೇಜೊಂದರಲ್ಲಿ ಬೆಂಕಿ ಆಕಸ್ಮಿಕ, 4 ಕಾರು 3 ಬೈಕ್ ಅಗ್ನಿಗಾಹುತಿ

Published On - 6:03 pm, Fri, 18 February 22

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?