30 ರೈಲು ಚಾಲಕಿ ಹುದ್ದೆಗೆ 28 ಸಾವಿರ ಅರ್ಜಿ: ಸೌದಿಯನ್ನು ಕಾಡುತ್ತಿದೆ ನಿರುದ್ಯೋಗ ಸಮಸ್ಯೆ
ಸೌದಿಯಲ್ಲಿ ಮಹಿಳಾ ಉದ್ಯೋಗಾಕಾಂಕ್ಷಿಗಳೂ ಹೆಚ್ಚುತ್ತಿದ್ದಾರೆ. ಇದಕ್ಕೆ ತಕ್ಕ ನಿದರ್ಶನ ಎಂಬಂತೆ 30 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ 28 ಸಾವಿರ ಮಂದಿ ಮಹಿಳೆಯರು ಅರ್ಜಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ.
ಸೌದಿ ಅರೇಬಿಯಾ (Saudi Arabia) ಉದ್ಯೋಗಕ್ಕೆ ಹೆಸರುವಾಸಿಯಾಗಿದೆ. ಭಾರತದಿಂದ ಅದೆಷ್ಟೋ ಜನರು ಉದ್ಯೋಗ(Employment) ಅರಸಿ ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೌದಿಯಲ್ಲಿ ಮಹಿಳೆಯರಿಗೂ ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ದೊರೆತ ಕಾರಣ ಮಹಿಳಾ ಉದ್ಯೋಗಾಕಾಂಕ್ಷಿಗಳೂ ಹೆಚ್ಚುತ್ತಿದ್ದಾರೆ. ಈ ನಡುವೆ ನಿರುದ್ಯೋಗದ ಸಮಸ್ಯೆ ಎದುರಾಗಿದೆ. ಇದಕ್ಕೆ ತಕ್ಕ ನಿದರ್ಶನ ಎಂಬಂತೆ 30 ರೈಲು ಚಾಲಕಿ (Train Driver) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ 28 ಸಾವಿರ ಮಂದಿ ಮಹಿಳೆಯರು ಅರ್ಜಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ. ಈ ಮೂಲಕ ಸೌದಿ ಅರೇಬಿಯಾದಲ್ಲಿ ಮಹಿಳೆಯರೂ ಕೂಡ ಉದ್ಯೋಗ ಕ್ಷೇತ್ರದತ್ತ ಮುಖ ಮಾಡಿದ್ದು ಸೌದಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದೇ ಹೇಳಬಹುದಾಗಿದೆ. ಆದರೆ ನಿರುದ್ಯೋಗ ಸಮಸ್ಯೆ ಇದಕ್ಕೆ ಅಡ್ಡವಾಗುತ್ತಿದೆ ಜಾಹೀರಾತಿನಲ್ಲಿ 30 ರೈಲು ಚಾಲಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಬರೋಬ್ಬರಿ 28 ಸಾವಿರ ಮಹಿಳೆಯರು ಕೆಲಸಕ್ಕೆ ಅರ್ಜಿ ಹಾಕಿದ್ದಾರೆ.
ಮಕ್ಕಾ ಮತ್ತು ಮದೀನಾ ನಡುವಿನ ಬುಲೆಟ್ ಟ್ರೈನ್ ಚಲಾಯಿಸಲು ಮಹಿಳೆಯರನ್ನು ಹುಡುಕಲಾಗುತ್ತಿದೆ. ಪ್ರಸ್ತುತ ಸೌದಿಯಲ್ಲಿ 80 ಮಂದಿ ಪುರುಷರು ಬುಲೆಟ್ ಟ್ರೈನ್ಅನ್ನು ಚಲಾಯಿಸುತ್ತದ್ದಾರೆ. ಇನ್ನು 50 ಮಂದಿ ಅಧಿಸೂಚನೆಯ ಅಡಿಯಲ್ಲಿದ್ದು, ಈಗ 30 ಮಹಿಳೆಯರನ್ನು ಉದ್ಯೋಗಕ್ಕೆ ತೆಗದುಕೊಳ್ಳಲು ಸ್ಪಾನಿಶ್ನ ರೈಲ್ವೇ ಆಪರೇಟರ್ ರೇನ್ಫಾ ನಿರ್ಧರಿಸಿದೆ . ಆಯ್ಕೆಯಾದ 30 ಮಹಿಳೆಯರು ಒಂದು ತಿಂಗಳ ತರಬೇತಿ ನಂತರ ಮೆಕ್ಕಾ ಮತ್ತು ಮದೀನಾ ನಡುವೆ ಬುಲೆಟ್ ಟ್ರೈನ್ಅನ್ನು ಓಡಿಸಲಿದ್ದಾರೆ ಎಂದು ರೇನ್ಫಾ ತಿಳಿಸಿದೆ.
ಸೌದಿಯಲ್ಲಿ ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಿತ್ತು. ಪುರುಷ ಪ್ರಧಾನ ಸಾಮಾಜವನ್ನು ನಡೆಸಿಕೊಂಡು ಬರುತ್ತಿರುವ ಸೌದಿಯ ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ಶಿಕ್ಷಕ ವೃತ್ತಿಗಳಲ್ಲಿ ಮಾತ್ರ ಉದ್ಯೋಗ ಮಾಡಬಹುದಿತ್ತು. 2018ರ ಬಳಿಕ ವಾಹನ ಚಲಾಯಿಸಲು ಅನುಮತಿ ನೀಡಲಾಗಿತ್ತು. ಆ ಬಳಿಕ ಮಹಿಳೆಯರು ವಾಹನ ಚಾಲಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ರೈಲ್ವೇ ಚಾಲಕಿಯರಾಗಿಯೂ ಕೆಲಸ ಮಾಡಲು ಅವಕಾಶ ದೊರಕಿದೆ. ಆದರೆ 30 ಹುದ್ದೆಗಳಿಗೆ 28 ಸಾವಿರ ಅರ್ಜಿಗಳು ಬಂದಿರುವುದು ನಿರುದ್ಯೋಗದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಆದರೂ ಮಹಿಳೆಯರಿಗೂ ಸಾರ್ವಜನಿಕವಾಗಿ ಬಂದು ದುಡಿಯಲು ಅವಕಾಶ ಕೊಟ್ಟ ಕಾರಣ ಸೌದಿಯಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಿದೆ ಎನ್ನಬಹುದು.
ಇದನ್ನೂ ಓದಿ:
HIV: ಸ್ಟೆಮ್ ಸೆಲ್ ಕಸಿ ಮೂಲಕ ಏಡ್ಸ್ನಿಂದ ಗುಣಮುಖರಾದ ಮೊಟ್ಟ ಮೊದಲ ಮಹಿಳೆ