HIV: ಸ್ಟೆಮ್ ಸೆಲ್ ಕಸಿ ಮೂಲಕ ಏಡ್ಸ್​​ನಿಂದ ಗುಣಮುಖರಾದ ಮೊಟ್ಟ ಮೊದಲ ಮಹಿಳೆ

ಲ್ಯುಕೇಮಿಯಾ ಹೊಂದಿರುವ ಮಹಿಳೆಯಲ್ಲಿ ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗಾಗಿ ದಾನಿಯೊಬ್ಬರಿಂದ ಹೊಕ್ಕಳಬಳ್ಳಿಯ ರಕ್ತವನ್ನು ಬಳಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಆ ಮಹಿಳೆ ಎಚ್ಐವಿಯಿಂದ ಗುಣಮುಖರಾಗಿದ್ದಾರೆ. ಹೊಕ್ಕಳಬಳ್ಳಿಯ ರಕ್ತವನ್ನು ಎಚ್‌ಐವಿ ಗುಣಪಡಿಸಲು ಬಳಸಿದ ಮೊದಲ ರೀತಿಯ ಚಿಕಿತ್ಸೆ ಇದಾಗಿದೆ.

HIV: ಸ್ಟೆಮ್ ಸೆಲ್ ಕಸಿ ಮೂಲಕ ಏಡ್ಸ್​​ನಿಂದ ಗುಣಮುಖರಾದ ಮೊಟ್ಟ ಮೊದಲ ಮಹಿಳೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 18, 2022 | 1:28 PM

ನವದೆಹಲಿ: ಅಮೆರಿಕದ ಮಹಿಳೆಯೊಬ್ಬರು HIV (ಏಡ್ಸ್​)ಯಿಂದ ಗುಣಮುಖರಾಗಿದ್ದಾರೆ. ಇವರು ಹೆಚ್​ಐವಿಯಿಂದ ಗುಣಮುಖರಾದ ವಿಶ್ವದ ಮೂರನೇ ವ್ಯಕ್ತಿ ಮತ್ತು ಮೊದಲ ಮಹಿಳೆಯಾಗಿದ್ದಾರೆ. ಲ್ಯುಕೇಮಿಯಾ ರೋಗಿಯಾಗಿದ್ದ ಈ ಮಹಿಳೆಗೆ ಬೇರೊಬ್ಬರಿಂದ ಏಡ್ಸ್​​ನ (AIDS) ವೈರಸ್‌ಗೆ ನೈಸರ್ಗಿಕ ಪ್ರತಿರೋಧವನ್ನು ಒಡ್ಡುವ ಸ್ಟೆಮ್ ಸೆಲ್​ ಕಸಿ ಮಾಡಲಾಗಿತ್ತು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಬಿಬಿಸಿ ಡಾಟ್ ಕಾಂ ಪ್ರಕಾರ, ಅವರು ಕಳೆದ 14 ತಿಂಗಳುಗಳಿಂದ ಏಡ್ಸ್​​ನಿಂದ ಮುಕ್ತರಾಗಿದ್ದಾರೆ. ಆಕೆಗೆ ಹೊಕ್ಕುಳಬಳ್ಳಿಯ ರಕ್ತ ಕಸಿ ಮಾಡಲಾಗಿದ್ದು, ಅದರಿಂದ ಆಕೆಗೆ ಯಾವುದೇ ಅಪಾಯವಾಗಿಲ್ಲ. ಆದರೆ, ತಜ್ಞರ ಪ್ರಕಾರ ಎಚ್ಐವಿ ಹೊಂದಿರುವ ಹೆಚ್ಚಿನ ರೋಗಿಗಳಿಗೆ ಹೊಕ್ಕಳ ರಕ್ತ ಕಸಿ ಮಾಡಿದರೆ ಅಪಾಯವೇ ಹೆಚ್ಚು. ಆದರೆ, ಈ ಮಹಿಳೆ ಕ್ಯಾನ್ಸರ್ ರೋಗಿಯೂ ಆಗಿದ್ದರಿಂದ ಅವರಿಗೆ ಈ ಚಿಕಿತ್ಸೆ ನೀಡಲಾಗಿತ್ತು

2007ರಲ್ಲಿ ತಿಮೋತಿ ರೇ ಬ್ರೌನ್ ಎಂಬುವವರು ಮೊದಲ ಬಾರಿಗೆ HIVಯಿಂದ ಗುಣಮುಖರಾಗಿದ್ದರು. ಅವರು ನೈಸರ್ಗಿಕವಾಗಿ ಎಚ್‌ಐವಿ ನಿರೋಧಕವಾಗಿರುವ ದಾನಿಯಿಂದ ಕಸಿ ಮಾಡಿಸಿಕೊಂಡಿದ್ದರು. ಹೊಕ್ಕುಳಬಳ್ಳಿಯ ರಕ್ತವು ವಯಸ್ಕ ಕಾಂಡಕೋಶಗಳಿಗಿಂತ ಹೆಚ್ಚು ವ್ಯಾಪಕವಾಗಿ ಲಭ್ಯವಿದ್ದರೂ, ಅದಕ್ಕೆ ದಾನಿ ಮತ್ತು ಸ್ವೀಕರಿಸುವವರ ನಡುವಿನ ಹೊಂದಾಣಿಕೆಯ ಅಗತ್ಯವಿರುವುದಿಲ್ಲ.

ರೀಜೆನೆರೇಟಿವ್ ಮೆಡಿಸಿನ್ ಸಂಶೋಧಕ, ಸ್ಟೆಮ್ ಆರ್​ಎಕ್ಸ್ ಬಯೋಸೈನ್ಸ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್​ನ ಡಾ. ಪ್ರದೀಪ್ ಮಹಾಜನ್ ಅವರ ಪ್ರಕಾರ, “ಜೀನ್‌ನಲ್ಲಿಯೇ ನೈಸರ್ಗಿಕ ರೂಪಾಂತರ ಹೊಂದಿರುವ ಕೆಲವು ಜನರು ಜಗತ್ತಿನಲ್ಲಿದ್ದಾರೆ. ಅದರಿಂದ ಅವರಿಗೆ ಹೆಚ್​ಐವಿಯ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಹಾಗೇ ಅವರು ಎಂದಿಗೂ HIV ಸೋಂಕಿಗೆ ಒಳಗಾಗುವುದಿಲ್ಲ.

“ಈಗ, ವಿಜ್ಞಾನಿಗಳು ಲ್ಯುಕೇಮಿಯಾ ಹೊಂದಿರುವ ಮಹಿಳೆಯಲ್ಲಿ ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗಾಗಿ ದಾನಿಯೊಬ್ಬರಿಂದ ಹೊಕ್ಕಳಬಳ್ಳಿಯ ರಕ್ತವನ್ನು ಬಳಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಆ ಮಹಿಳೆ ಎಚ್ಐವಿಯಿಂದ ಗುಣಮುಖಳಾಗಿದ್ದಾರೆ. ಏಕೆಂದರೆ ದಾನಿಯ ಹೊಕ್ಕಳಬಳ್ಳಿಯ ರಕ್ತವು ಮೇಲೆ ತಿಳಿಸಿದ ರೂಪಾಂತರವನ್ನು ಹೊಂದಿತ್ತು. ಇದು ಕಸಿ ಮಾಡಿದ ನಂತರ ಮಹಿಳೆಯ HIV ಸೋಂಕನ್ನು ಗುಣಪಡಿಸಲು ಸಹಾಯಕವಾಯಿತು. ಹೊಕ್ಕಳಬಳ್ಳಿಯ ರಕ್ತವನ್ನು ಎಚ್‌ಐವಿ ಗುಣಪಡಿಸಲು ಬಳಸಿದ ಮೊದಲ ರೀತಿಯ ಚಿಕಿತ್ಸೆ ಇದಾಗಿದೆ ಎಂದು ಡಾ. ಮಹಾಜನ್ ಹೇಳಿದ್ದಾರೆ.

ಆದರೆ, ಹೊಕ್ಕಳಬಳ್ಳಿಯ ರಕ್ತದಲ್ಲಿನ ರೂಪಾಂತರವನ್ನು ಎಚ್ಐವಿ ಚಿಕಿತ್ಸೆಗೆ ಬಳಸುವ ಮೊದಲು ಅದನ್ನು ಪರೀಕ್ಷಿಸುವುದು ಮುಖ್ಯವಾಗಿದೆ ಎಂದು ಡಾ. ಮಹಾಜನ್ ಪ್ರತಿಪಾದಿಸಿದ್ದಾರೆ.

ಏಡ್ಸ್​​ನ ಲಕ್ಷಣಗಳು:

ಹೆಚ್‌ಐವಿ ಕಂಡುಬರುವಾಗ ಹಲವಾರು ರೋಗಲಕ್ಷಣಗಳು ಕಂಡುಬರುತ್ತವೆ. ಈ ಕಾಯಿಲೆಗೆ ಒಳಗಾದ ಎಲ್ಲರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಪ್ರತಿ ವ್ಯಕ್ತಿಯು ಎದುರಿಸುವ ರೋಗಲಕ್ಷಣಗಳು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಅವರಿಗೆ ಇರುವ ರೋಗದ ಹಂತವನ್ನು ಅವಲಂಬಿಸಿರುತ್ತದೆ. ಕೆಲವು ಸಾಮಾನ್ಯ ರೋಗಲಕ್ಷಣಗಳು ಎಂದರೆ ಜ್ವರ, ಶೀತ, ಸ್ನಾಯು ನೋವು, ಗಂಟಲು ನೋವು ಮತ್ತು ಬಾಯಿ ಹುಣ್ಣುಗಳನ್ನು ಒಳಗೊಂಡಿರುತ್ತದೆ. ಈ ರೋಗಲಕ್ಷಣಗಳು ಕೆಲವು ದಿನಗಳಿಂದ ವಾರಗಳವರೆಗೆ ಇರುತ್ತದೆ. ಇನ್ನೂ ಕೆಲವರಿಗೆ ಹೆಚ್‌ಐವಿಯ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಏಡ್ಸ್ ಗಾಳಿಯ ಮೂಲಕ ಹರಡಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ, ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವಗಳು ಮತ್ತು ಎದೆ ಹಾಲಿನಂತಹ ಕೆಲವು ದೇಹದ ದ್ರವಗಳೊಂದಿಗೆ ನೇರ ಸಂಪರ್ಕದ ಮೂಲಕ ಹೆಚ್‌ಐವಿ ಹರಡುತ್ತದೆ ಎಂಬುದು ನಾವು ಮರೆಯುವಂತಿಲ್ಲ.

ಇದನ್ನೂ ಓದಿ: Bone Cancer: ಮೂಳೆಗಳ ಕ್ಯಾನ್ಸರ್​ನ ಲಕ್ಷಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

World AIDS Day 2021: ಏಡ್ಸ್​ನ ರೋಗಲಕ್ಷಣ, ಹರಡುವಿಕೆ ಮತ್ತು ಚಿಕಿತ್ಸೆಯ ಕುರಿತು ಇಲ್ಲಿದೆ ಮಾಹಿತಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್