ತಣ್ಣೀರು ಸ್ನಾನ ಒಳ್ಳೆಯದಾ? ಬಿಸಿ ನೀರಾ?; ಈ ರೀತಿಯ ಸ್ನಾನದಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?
ನೀವು ಬಿಸಿ ನೀರಿನಿಂದ ಸ್ನಾನ ಮಾಡಬೇಕೇ? ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕೆ? ಎಂಬ ಬಗ್ಗೆ ಚರ್ಚೆ ಮುಂದುವರೆದಿದೆ. ನಿಯಮಿತವಾಗಿ ಟಬ್ನಲ್ಲಿ ಸ್ನಾನ ಮಾಡುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯ ಕಡಿಮೆಯಾಗುತ್ತದೆ.
ಸ್ನಾನ ಮಾಡುವುದರಿಂದ ದೇಹ ಸ್ವಚ್ಛವಾಗಿರುವುದು ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯವಾದುದು. ಹಾಗಾದರೆ ತಣ್ಣೀರಿನಲ್ಲಿ ಸ್ನಾನ (Cold Water Bath) ಮಾಡುವುದು ಒಳಿತಾ? ಅಥವಾ ಬಿಸಿ ನೀರಿನಲ್ಲಿ ಸ್ನಾನ (Hot Water Bath) ಮಾಡುವುದು ಒಳ್ಳೆಯದಾ? ಎಂಬ ಸಂಶಯಗಳು ಎದುರಾಗುವುದು ಸಹಜ. ನೀವು ಬಿಸಿ ನೀರಿನಿಂದ ಸ್ನಾನ ಮಾಡಬೇಕೇ? ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕೆ? ಎಂಬ ಬಗ್ಗೆ ಚರ್ಚೆ ಮುಂದುವರೆದಿದೆ. ನಿಯಮಿತವಾಗಿ ಟಬ್ನಲ್ಲಿ ಸ್ನಾನ ಮಾಡುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯ ಕಡಿಮೆಯಾಗುತ್ತದೆ. ಈ ಬಗ್ಗೆ ಹಾರ್ಟ್ ಜರ್ನಲ್‌ನಲ್ಲಿ ಅಧ್ಯಯನದ ವರದಿಯೊಂದು ಪ್ರಕಟವಾಗಿದ್ದು, ನಿಯಮಿತ ಟಬ್ ಸ್ನಾನವು ಹೃದಯರಕ್ತನಾಳದ ಕಾಯಿಲೆಯಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ತೀರಾ ಬಿಸಿ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ.
ತಣ್ಣೀರಿನ ಸ್ನಾನದ ಪ್ರಯೋಜನಗಳೇನು?: ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನ ಪ್ರಕಾರ, ತಣ್ಣನೆಯ ನೀರಿನ ಸ್ನಾನದಿಂದ ಹೃದಯ ಬಡಿತ, ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತದೆ. ತಣ್ಣೀರು ಸ್ನಾನ ಮಾಡುವ ಜನರಿಗೆ ಅನಾರೋಗ್ಯ ಕಡಿಮೆ ಎಂದು ಹೇಳಲಾಗುತ್ತದೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತಣ್ಣೀರಿನ ಸ್ನಾನ ರಕ್ತದ ಸಂಚಲನ ಸುಧಾರಿಸುತ್ತದೆ. ವ್ಯಾಯಾಮದ ನಂತರ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಸ್ನಾಯುಗಳಿಗೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ.
ಬಿಸಿ ನೀರಿನ ಉಪಯೋಗಗಳೇನು?: ಬಿಸಿ ನೀರಿನಿಂದ ಸ್ನಾನ ಮಾಡಿದರೆ ಎಷ್ಟು ಅನಾನುಕೂಲಗಳಿವೆಯೋ ಅಷ್ಟೇ ಉಪಯೋಗಗಳೂ ಇವೆ. ದೇಹದಲ್ಲಿ ಹೆಚ್ಚಾದ ಕೊಬ್ಬಿನ ಅಂಶ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶಗಳಿಂದ ಜನರ ಜೀವಿತಾವಧಿಯೇ ಕಡಿಮೆಯಾಗುತ್ತಿದೆ. ನೀವು ದಿನವೂ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯದ ತೊಂದರೆ ಮತ್ತು ಪಾರ್ಶ್ವವಾಯುವಿನ ಸಮಸ್ಯೆ ಕಡಿಮೆಯಾಗುತ್ತದೆ. ಪ್ರತಿ ದಿನ ಬಿಸಿ ನೀರಿನ ಸ್ನಾನ ಮಾಡುವ ಜನರಲ್ಲಿ ಆರೋಗ್ಯ ಸಮಸ್ಯೆಗಳು ತುಂಬಾ ಕಡಿಮೆ ಎಂದು ಅಧ್ಯಯನವೊಂದು ಹೇಳಿದೆ. ದಿನವೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಮೈ ಕೈ ನೋವು ದೂರವಾಗಿ ಚೆನ್ನಾಗಿ ನಿದ್ರೆ ಬರುತ್ತದೆ.
ಪ್ರತಿದಿನ ಸ್ನಾನ ಮಾಡಬೇಕೆ ಅಥವಾ ಬೇಡವೇ?: ಸುಮಾರು ಮೂರನೇ ಎರಡರಷ್ಟು ಅಮೆರಿಕನ್ನರು ಪ್ರತಿದಿನ ಸ್ನಾನ ಮಾಡುತ್ತಾರೆ. ಆಸ್ಟ್ರೇಲಿಯಾದಲ್ಲಿ ಇದು ಶೇ.80ಕ್ಕಿಂತ ಹೆಚ್ಚಿದೆ. ಆದರೆ ಚೀನಾದಲ್ಲಿ ಶೇ. 50ರಷ್ಟು ಜನರು ವಾರಕ್ಕೆ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾರೆ. ಆದರೆ, ಭಾರತದಲ್ಲಿ ಪ್ರತಿದಿನ ಸ್ನಾನ ಮಾಡುವುದು ರೂಢಿಯಾಗಿದೆ. ಸಂಪ್ರದಾಯಸ್ಥ ಭಾರತೀಯರ ಮನೆಗಳಲ್ಲಿ ಸ್ನಾನ ಮಾಡದೆ ಪೂಜೆ ಮಾಡುವಂತಿಲ್ಲ, ಅಡುಗೆ ಮನೆಗೂ ಪ್ರವೇಶಿಸುವಂತಿಲ್ಲ.
ಬಹಳಷ್ಟು ಜನರಿಗೆ ಈಗಲೂ ಸಹ ಅತ್ಯಂತ ಸುಡುವ ನೀರಿನಲ್ಲಿ ಸ್ನಾನ ಮಾಡುವುದೆಂದರೆ ಬಹಳ ಇಷ್ಟ. ಇದರಿಂದ ಅವರ ಚರ್ಮಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಅತ್ಯಂತ ಬಿಸಿ ನೀರಿನ ಬದಲು ಕೇವಲ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ಅತಿಯಾದ ಸುಡುವ ನೀರನ್ನು ದೀರ್ಘಕಾಲ ಮೈ ಮೇಲೆ ಹಾಕಿಕೊಳ್ಳುತ್ತಾ ಹೋದರೆ ದೇಹದಲ್ಲಿರುವ ಜೀವಕೋಶಗಳು ತಮ್ಮ ನೈಸರ್ಗಿಕ ಸತ್ವಗಳು ಹಾಳಾಗುತ್ತವೆ. ಅತಿ ಬಿಸಿ ನೀರಿನಿಂದ ಚರ್ಮದ ಮೇಲ್ಮೈ ಒಣಗಿ, ತೇವಾಂಶ ಕಡಿಮೆಯಾಗುತ್ತದೆ.
ಇದನ್ನೂ ಓದಿ: Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ
Weight Loss Tips: ಬೇಗ ತೂಕ ಕಡಿಮೆಯಾಗಲು ಮೊಟ್ಟೆ ತಿನ್ನಬೇಕಾ? ಪನೀರ್ ಒಳ್ಳೆಯದಾ?