AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾನಲ್ಲಿ ಶೂನ್ಯ-ಕೋವಿಡ್ ನೀತಿ ಜಾರಿಯಲ್ಲಿದ್ದರೂ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ!

ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ಸ್ಥಳೀಯವಾಗಿ ಹಬ್ಬಿರುವ 40 ಕೋವಿಡ್-19 ಸೋಂಕಿನ ಪ್ರಕರಣಗಳನ್ನು ಚೀನಾನಲ್ಲಿ ಪತ್ತೆ ಮಾಡಲಾಗಿದೆಯೆಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಶುಕ್ರವಾರ ಹೇಳಿದೆ.

ಚೀನಾನಲ್ಲಿ ಶೂನ್ಯ-ಕೋವಿಡ್ ನೀತಿ ಜಾರಿಯಲ್ಲಿದ್ದರೂ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ!
ಚೀನಾನಲ್ಲಿ ಕೋವಿಡ್-19 ಪ್ರಕರಣಗಳು ಮತ್ತೇ ಹೆಚ್ಚುತ್ತಿವೆ
Follow us
TV9 Web
| Updated By: shivaprasad.hs

Updated on: Feb 19, 2022 | 7:37 AM

ಚೀನಾ ‘ಶೂನ್ಯ ಕೋವಿಡ್’ ನೀತಿಯ (Zero-Covid Policy) ಪಾಲಿಸುತ್ತಿರುವ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರೂ ದೇಶದ ಹಲವಾರು ನಗರಗಳಲ್ಲಿ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ 40 ಸ್ಥಳೀಯವಾಗಿ ಹರಡುವ (locally transmitted) ಕೋವಿಡ್-19 ಪ್ರಕರಣಗಳು ಅಲ್ಲಿ ವರದಿಯಾಗಿವೆ. ಹೈಲಾಂಗ್‌ಜಿಯಾಂಗ್ (Heilongjiang) ಸೇರಿದಂತೆ ಬಹಳಷ್ಟು ನಗರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಬೀಜಿಂಗ್ (Beijing), ಹೈಲಾಂಗ್‌ಜಿಯಾಂಗ್ ಮತ್ತು ಇತರ ಹಲವಾರು ನಗರಗಳಲ್ಲಿ ಕೋವಿಡ್ ಪ್ರಕರಣಗಳು ಈಗಲೂ ನಿಯಂತ್ರಣದಲ್ಲಿಲ್ಲ. ಹಾಗೆಯೇ, ಶೆನ್‌ಜೆನ್, ಗುವಾಂಗ್‌ಝೌ, ಯುನ್‌ಫು, ಹುಯಿಜೌ, ಹೆಯುವಾನ್, ಮೀಝೌ, ಬೈಸ್, ನ್ಯಾನಿಂಗ್ ಮತ್ತು ಶಾಯೊಂಗ್, ಮತ್ತು ಚೀನಾದ ಮೂರು ದಕ್ಷಿಣ ಪ್ರಾಂತ್ಯಗಳ ಒಳಭಾಗ-ಗುವಾಂಗ್‌ಡಾಂಗ್, ಗುವಾಂಗ್ಕ್ಸಿ ಮತ್ತು ಹುನಾನ್ ಮೊದಲಾದ ಒಂಬತ್ತು ನಗರಗಳಲ್ಲಿ ಸೋಂಕಿನ ಪ್ರಕರಣಗಳು ತ್ವರಿತ ಗತಿಯಲ್ಲಿ (rapidly) ಹೆಚ್ಚುತ್ತಿವೆ.

ಚೀನಾದ ವಸಂತಕಾಲ ಹಬ್ಬ ಹತ್ತಿರದಲ್ಲೇ ಇರುವುದರಿಂದ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುತ್ತಾರೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ನೆರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಪಿಡುಗು ಮತ್ತೇ ಹಬ್ಬುವ ಅಪಾಯ ಗೋಚರಿಸುತ್ತಿದೆ. ಕಳೆದ ವರ್ಷವೂ ಇದೇ ಹಬ್ಬದ ಸೀಸನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡಿತ್ತು.

ತಂಡೋಪತಂಡವಾಗಿ ಪ್ರಯಾಣಿಕರು ಆಗಮಿಸುವುದರಿಂದ ಖಂಡಿತವಾಗಿಯೂ ಸಾಂಕ್ರಾಮಿಕದ ಹರಡುವ ಅಪಾಯವನ್ನು ಹೆಚ್ಚಿದೆ. ಕಳೆದ ವರ್ಷ ಸೋಂಕು ಹೆಚ್ಚಿದ್ದರಿಂದ ಅನೇಕ ಜನರು ಮನೆಗೆ ಹಿಂತಿರುಗಲು ಸಾಧ್ಯವಾಗದೆ ತಾವು ಅಗಮಿಸಿದ ಸ್ಥಳದಲ್ಲೇ ಉಳಿಯಲು ನಿರ್ಧರಿಸಿದ್ದರು.

ಇದಲ್ಲದೆ, ಕ್ಸಿಕ್ಸಿಯಾ ಪ್ರಾಂತ್ಯದದ ಅಧಿಕಾರಿಗಳು ಸೋಂಕನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕ್ರಮ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಶೆನ್ಜೆನ್ ಮತ್ತು ಬೈಸ್ ನಗರದಂತಹ ಮಧ್ಯಮ ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳಿಂದ ಹಿಂದಿರುಗುವ ಜನರ ಮೇಲೆ ವಿಶೇಷ ಗಮನ ಇಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ ಕಛೇರಿ, ಜಿಜಿಯಾ ಪ್ರಾಂತ್ಯವು ಇತ್ತೀಚೆಗೆ ಹಳ್ಳಿಗಳಲ್ಲಿರುವ ವಿವಿಧ ಕಮಾಂಡ್ ಮತ್ತು ಕಂಟ್ರೋಲ್ ವಿಭಾಗಳಿಗೆ ನಿರ್ದೇಶನಗಳನ್ನು ನೀಡಿದೆ. ಹಾಗೆಯೇ ಕ್ಸಿಕ್ಸಿಯಾ ಕೌಂಟಿಯಲ್ಲಿನ ಪಟ್ಟಣ ಪ್ರದೇಶಗಳಿಗೆ ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಹಲವಾರು ಸದಸ್ಯ ಘಟಕಗಳಿಗೂ ಸೂಚನೆಗಳನ್ನು ರವಾನಿಸಲಾಗಿದೆ.

ನ್ಯಾನ್ಯಾಂಗ್ ನಗರ, ಹೆನಾನ್ ಪ್ರಾಂತ್ಯವು ಕೋವಿಡ್-19 ಹಾಟ್‌ಸ್ಪಾಟ್‌ಗಳಿಂದ ಹಿಂದಿರುಗುವ ಜನರನ್ನು ಅವರ ಸಂವಹನಗಳ ದಾಖಲೆಗಳ ನಿರ್ವಹಣೆ, ಆರ್‌ಟಿ-ಪಿಸಿಆರ್ ವರದಿಗಳನ್ನು ಪರಿಶೀಲಿಸುವುದು ಮತ್ತು ವಿಶೇಷ ವರದಿಗಳನ್ನು ಕೋವಿಡ್-19 ಪ್ರಧಾನ ಕಛೇರಿಗೆ ಕಳುಹಿಸುವುದು ಸೇರಿದಂತೆ ಕಠಿಣ ಸ್ವರೂಪದ ತಪಾಸಣೆಯನ್ನು ನಡೆಸುವ ಮೂಲಕ ಪ್ರದೇಶದಲ್ಲಿ ಸೋಂಕನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಲಿದೆ. ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ಸ್ಥಳೀಯವಾಗಿ ಹಬ್ಬಿರುವ 40 ಕೋವಿಡ್-19 ಸೋಂಕಿನ ಪ್ರಕರಣಗಳನ್ನು ಚೀನಾನಲ್ಲಿ ಪತ್ತೆ ಮಾಡಲಾಗಿದೆಯೆಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಶುಕ್ರವಾರ ಹೇಳಿದೆ.

ಜಿನ್ಹುವಾ ಸುದ್ದಿಸಂಸ್ಥೆಯ ವರದಿಯ ಪ್ರಕಾರ ಬೆಳಕಿಗೆ ಬಂದಿರುವ ಪ್ರಕರಣಗಳ ಪೈಕಿ 22 ಮಂಗೋಲಿಯಾ ಒಳಭಾಗದಲ್ಲಿ, ಒಂಬತ್ತು ಲಿಯಾನಿಂಗ್‌ನಲ್ಲಿ, ತಲಾ ನಾಲ್ಕು ಜಿಯಾಂಗ್ಸು ಮತ್ತು ಗುವಾಂಗ್‌ಡಾಂಗ್‌ನಲ್ಲಿ ಹಾಗೆಯೇ ಯುನ್ನಾನ್‌ನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಶಾಂಘೈನಲ್ಲಿ ಮುಖ್ಯ ಭೂಭಾಗದ ಹೊರಗಿನಿಂದ ಆಗಮಿಸಿರುವವರಲ್ಲಿ ಆರು ಹೊಸ ಶಂಕಿತ ಪ್ರಕರಣಗಳು ವರದಿಯಾಗಿವೆ. ಆದರೆ ಕೋವಿಡ್-19 ನಿಂದ ಯಾವುದೇ ಹೊಸ ಸಾವಿನ ಪ್ರಕರಣ ಶುಕ್ರವಾರ ವರದಿಯಾಗಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ : ಕೊವಿಡ್ ಸಾಂಕ್ರಾಮಿಕ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಿ: ಹಾಂಗ್ ಕಾಂಗ್​​ಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸಲಹೆ