9ನೇ ವಯಸ್ಸಿಗೆ ಯೋಗ ಟೀಚರ್​ ಆಗುವ ಮೂಲಕ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ ನಿರ್ಮಿಸಿದ ​ ಬಾಲಕ

ಇಲ್ಲೊಬ್ಬ 9 ವರ್ಷದ ಬಾಲಕ  ಅತೀ ಕಿರಿಯ ಪ್ರಮಾಣೀಕೃತ ಯೋಗ ಟೀಚರ್​ ಎನಿಸಿಕೊಂಡಿದ್ದಾನೆ. ಅಲ್ಲದೆ ಅತಿ ಕಿರಿಯ ಯೋಗ ಟೀಚರ್​ ಎನಿಸಿಕೊಳ್ಳುv ಮೂಲಕ  ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್​ ನಿರ್ಮಿಸಿದ್ದಾನೆ.

9ನೇ ವಯಸ್ಸಿಗೆ ಯೋಗ ಟೀಚರ್​ ಆಗುವ ಮೂಲಕ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ ನಿರ್ಮಿಸಿದ ​ ಬಾಲಕ
ರೆಯಾಶ್​ ಸುರಾನಿ
Follow us
TV9 Web
| Updated By: Pavitra Bhat Jigalemane

Updated on:Feb 19, 2022 | 3:44 PM

ಸಾಧನೆಗೆ ವಯಸ್ಸಿನ ಹಂಗಿಲ್ಲ, ವಯಸ್ಸು ಎಷ್ಟೇ ದಾಟಿದರು, ಎಷ್ಟೇ ಸಣ್ಣದಾದರೂ ಸಾಧನೆ ಸಾಧ್ಯವಾಗುವುದು ಮಾತ್ರ ದೃಢ ಸಂಕಲ್ಪದಿಂದಲೇ ಆಗಿದೆ. ಇಲ್ಲೊಬ್ಬ 9 ವರ್ಷದ ಬಾಲಕ  ಅತೀ ಕಿರಿಯ ಪ್ರಮಾಣೀಕೃತ ಯೋಗ ಟೀಚರ್ (Yoga Teacher)​ ಎನಿಸಿಕೊಂಡಿದ್ದಾನೆ. ಅಲ್ಲದೆ ಅತಿ ಕಿರಿಯ ಯೋಗ ಟೀಚರ್​ ಎನಿಸಿಕೊಳ್ಳುವ ಮೂಲಕ  ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್(Guinness World Record)​ ನಿರ್ಮಿಸಿದ್ದಾನೆ. ಈ ಕುರಿತು ಗಿನ್ನೀ ಸ್ ​ವರ್ಲ್ಡ್​​ ರೆಕಾರ್ಡ್​ ಸಂಸ್ಥೆ ತನ್ನ ಯುಟ್ಯೂಬ್ ​(YouTube) ನಲ್ಲಿ ಮಾಹಿತಿ ಹಂಚಿಕೊಂಡಿದೆ.

ರೆಯಾಶ್​ ಸುರಾನಿ ಎನ್ನುವ 9 ವರ್ಷದ ಬಾಲಕ ಈ ಸಾಧನೆ ಮಾಡಿದ್ದಾನೆ. ಗಿನ್ನೀಸ್​ವರ್ಲ್ಡ್​​ ರೆಕಾರ್ಡ್​ ಹಂಚಿಕೊಂಡಿರುವ ವಿಡಿಯೋದಲ್ಲಿ  ಬಾಲಕ ಮೊದಲು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ನಂತರ ಯೋಗದ ಬಗೆಗೆ ಆತನಿಗಿರುವ ಆಸಕ್ತಿಯ ಬಗ್ಗೆ ಹೇಳುತ್ತಾನೆ. ಯೋಗವನ್ನು ಮಾಡುವುದನ್ನು ನಾನು ಎಂಜಾಯ್​ ಮಾಡುತ್ತೇನೆ ಎನ್ನುವ ರೆಯಾಶ್​ ಯೋಗದಿಂದ ಇಂಟರ್​ನೆಟ್​ ಮತ್ತುಏರ್​ಕೂಲರ್​ಗಳಿಲ್ಲದೆಯೂ ಬದುಕಬಹುದು ಎಂದಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್​ ವೈರಲ್​ ಆಗಿದೆ. ಯುಟ್ಯೂಬ್​ನಲ್ಲಿ ಹಂಚಿಕೊಂಡ ವಿಡಿಯೋ 500 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಬಾಲಕನ ಸಾಧನೆ ನೋಡಿ ನೆಟ್ಟಿಗರು ಶ್ಲಾಘಿಸಿದ್ದಾರೆ.

ರೆಯಾಶ್​ ಆನಂದ ಶೇಖರ್​ ಯೋಗ ಶಾಲೆಯಲ್ಲಿ 200 ಗಂಟೆಗಳ ಯೋಗ ತರಬೇತಿಯನ್ನು ಪಡೆದು ನಂತರ ಪ್ರಮಾಣಪತ್ರವನ್ನು ಪಡೆದಿದ್ದಾರೆ.  ವರ್ಲ್ಡ್​ ರೆಕಾರ್ಡ್​ ವರದಿಯ ಪ್ರಕಾರ ರೆಯಾಶ್​ ತನ್ನ 4ನೇ ವಯಸ್ಸಿಗೇ ಯೋಗದ ತರಬೇತಿ ಪಡೆಯಲು ಆರಂಭಿಸಿದ್ದನು.  ಸದ್ಯ ಅತೀ ಕಿರಿಯ ಯೋಗ ಟೀಚರ್​ ಬಗ್ಗೆ ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಕಿತ್ತು ತಿನ್ನುವ ಬಡತನವಿದ್ದರೂ ಆಹಾರಕ್ಕೆ ಹಣ ನೀಡಲು ಮುಂದಾದ ವೃದ್ಧೆ: ಸ್ವಾಭಿಮಾನದ ಬದುಕು ಎಂದ ನೆಟ್ಟಿಗರು

Published On - 3:43 pm, Sat, 19 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ