Viral: 92ನೇ ವಯಸ್ಸಿನಲ್ಲಿ ತಂದೆಯಾದ ವೈದ್ಯ! ಪತ್ನಿಯ ವಯಸ್ಸು ಕೇಳಿದ್ರೆ ಅಚ್ಚರಿಯಾಗ್ತೀರಿ

ಆಸ್ಟ್ರೇಲಿಯಾದ 92 ವರ್ಷದ ವೈದ್ಯ ಜಾನ್ ಲೆವಿನ್ 37 ವರ್ಷದ ಪತ್ನಿಯಿಂದ IVF ಮೂಲಕ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಈ ಅಚ್ಚರಿಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳಿಲ್ಲದ ಕೊರಗು ಹಾಗೂ ಪಿತ್ರಾರ್ಜಿತ ಆಸ್ತಿಯ ಕಾರಣಕ್ಕೆ ದಂಪತಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಮಾಜದ ಟೀಕೆಗಳ ಹೊರತಾಗಿಯೂ, ಮಗುವಿನೊಂದಿಗೆ ನೆಮ್ಮದಿಯಾಗಿದ್ದಾರೆ.

Viral: 92ನೇ ವಯಸ್ಸಿನಲ್ಲಿ ತಂದೆಯಾದ ವೈದ್ಯ! ಪತ್ನಿಯ ವಯಸ್ಸು ಕೇಳಿದ್ರೆ ಅಚ್ಚರಿಯಾಗ್ತೀರಿ
ವೈರಲ್​ ಪೋಸ್ಟ್​​

Updated on: Oct 17, 2025 | 2:24 PM

ವರ್ಷಗಳು ಕಳೆದರೂ ಮಕ್ಕಳಿಲ್ಲ ಎಂಬ ಕೊರಗು ಇರುವ ಅದೆಷ್ಟೋ ದಂಪತಿಗಳು ಇದ್ದಾರೆ, ಆದರೆ ಮಕ್ಕಳ ಪಡೆಯಲು ಒಂದು ವಯಸ್ಸು ಎನ್ನುವುದು ಇರುತ್ತದೆ. ಆ ವಯಸ್ಸು ಮೀರಿಯೂ ಮಕ್ಕಳನ್ನು ಪಡೆದರೆ ಅದು ಅಚ್ಚರಿ ಎಂದು ಕಾಣುವುದಿಲ್ಲ, ಅಬ್ಬಬ್ಬಾ ಅಂದ್ರೆ ಲೇಟಾಗಿ ಮಕ್ಕಳು ಮಾಡಿಕೊಂಡ್ರು ಎಂದು ಜನ ಮಾತನಾಡಿಕೊಳ್ಳಬಹುದು. ಆದರೆ ಸಾಯುವ ವಯಸ್ಸಿನಲ್ಲಿಯೂ ಮಗು ಮಾಡಿಕೊಂಡ್ರೆ, ಅದು ದೊಡ್ಡ ಪವಾಡವೇ ಸರಿ. ಆಸ್ಟ್ರೇಲಿಯಾದಲ್ಲಿ ಅದೇ ರೀತಿಯ ಘಟನೆ ನಡೆದಿದೆ. ತನ್ನ 92ನೇ ವಯಸ್ಸಿನಲ್ಲಿ (92-Year-Old Doctor) ವೈದ್ಯರೊಬ್ಬರು ತಂದೆಯಾಗಿದ್ದಾರೆ. ಆಸ್ಟ್ರೇಲಿಯಾದ ವೈದ್ಯ ಜಾನ್ ಲೆವಿನ್ ತನ್ನ 37ನೇ ವಯಸ್ಸಿನ ಪತ್ನಿ ಯಾನ್ಯಿಂಗ್ ಲು. ಅವರಿಂದ ಮುದ್ದಾದ ಗಂಡು ಮಗುವನ್ನು ಪಡೆದಿದ್ದಾರೆ. ಇದೀಗ ಈ ಸುದ್ದಿ ಭಾರೀ ವೈರಲ್​ ಆಗಿದೆ.

ವೈದ್ಯ ಜಾನ್ ಲೆವಿನ್​​ಗೆ ಈಗಾಗಲೇ 65 ವರ್ಷದ ಮಗನಿದ್ದು,  ಅವರು ಮರಣಾಂತಿಕ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಮಗನ ಸಾವಿನ 5 ತಿಂಗಳ ನಂತರ ದಂಪತಿಗಳು ಗ್ಯಾಬಿ ಎಂಬ ಗಂಡು ಮಗುವನ್ನು ಪಡೆದಿದ್ದಾರೆ. ಡಾ. ಜಾನ್ ಲೆವಿನ್ ಅವರ ಮೊದಲ ಪತ್ನಿಯ ಮರಣದ ನಂತರ, ಯಾನ್ಯಿಂಗ್ ಲು ಅವರನ್ನು ಮದುವೆಯಾಗಿದ್ದಾರೆ. ಯಾನ್ಯಿಂಗ್ ಲು ಮೂಲತಃ ಚೀನಾದವರು. ಇಬ್ಬರೂ 2014 ರಲ್ಲಿ ವಿವಾಹವಾಗಿದ್ದಾರೆ.

ಇದನ್ನೂ ಓದಿ: ಕೆನಡಾದಲ್ಲಿ ಜೀವನ ಎಷ್ಟು ಕಷ್ಟ ಗೊತ್ತೇ? ಕ್ಯಾಬ್ ಡ್ರೈವರಾಗಿ ಕೆಲಸ ಮಾಡೋ ಮಿಲಿಟರಿ ವೈದ್ಯನ ವ್ಯಥೆಯ ಬಿಚ್ಚಿಟ್ಟ ಬೆಂಗಳೂರು ಮಹಿಳೆ

ಮದುವೆಯಾದ ಮೊದಲು ತಮಗೆ ಮಕ್ಕಳು ಬೇಡ ಎಂದು ನಿರ್ಧರಿಸಿದ್ದರು. ಆದರೆ, ಲಾಕ್‌ಡೌನ್ ನಂತರ, ಅವರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡ್ರು. ತನ್ನ ಪಿತ್ರಾರ್ಜಿತ ಆಸ್ತಿಗೆ ವಾರಸುದಾರ ಬೇಕು ಹಾಗೂ ಯಾನ್ಯಿಂಗ್ ಲು ಅವರಿಗೂ ಪಾಲು ನೀಡಬೇಕು ಎಂಬ ಕಾರಣಕ್ಕೆ ಮಗು ಬೇಕು ಎಂದು ನಿರ್ಧರಿಸಿ, ಯಾನ್ಯಿಂಗ್ ಐವಿಎಫ್ ತಂತ್ರಜ್ಞಾನದ ಸಹಾಯದಿಂದ ಗರ್ಭಿಣಿಯಾದರು. ಐವಿಎಫ್​​ನ​​ ಮೊದಲು ಪ್ರಯತ್ನದಲ್ಲಿ ಅವರು ಗರ್ಭ ಧರಿಸಿದರು. ಇದೀಗ ಅವರ ಮನೆಯಲ್ಲಿ ಆ ಮಗುವಿನಿಂದ ಸಂತೋಷ ಇದೆ. ಈ ಬಗ್ಗೆ ಸಮಾಜದಿಂದ ವಿಭಿನ್ನ ಟೀಕೆಗಳು ಬಂದವು, ಆದರೆ ಅದು ಯಾವುದಕ್ಕೂ ಯೋಚನೆ ಮಾಡದೆ, ಮಗುವಿನೊಂದಿಗೆ ಸಂತೋಷವಾಗಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:00 pm, Fri, 17 October 25