AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದಲ್ಲಿ ಜೀವನ ಎಷ್ಟು ಕಷ್ಟ ಗೊತ್ತೇ? ಕ್ಯಾಬ್ ಡ್ರೈವರಾಗಿ ಕೆಲಸ ಮಾಡೋ ಮಿಲಿಟರಿ ವೈದ್ಯನ ವ್ಯಥೆಯ ಬಿಚ್ಚಿಟ್ಟ ಬೆಂಗಳೂರು ಮಹಿಳೆ

ವಿದೇಶದಲ್ಲಿ ಓದಲು ಅಥವಾ ಕೆಲಸ ಮಾಡಲು ಹೋಗುವ ಮೊದಲು ವಾಸ್ತವಿಕತೆ ಬಗ್ಗೆ ತಿಳಿದುಕೊಳ್ಳಿ. ಕೆನಡಾದಲ್ಲಿ ಅಫ್ಘಾನ್ ವೈದ್ಯನೊಬ್ಬನ ಕಥೆ ಅಲ್ಲಿನ ಜೀವನ ವೆಚ್ಚದ ಬಗ್ಗೆ ಬೆಂಗಳೂರಿನ ಮೇಘನಾ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಹೆಚ್ಚು ಬಾಡಿಗೆ, ಕಡಿಮೆ ಸಂಪಾದನೆ, ವೃತ್ತಿ ಮುಂದುವರಿಸಲು ಕಷ್ಟ. ವಿದೇಶಿ ಜೀವನದ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.

ಕೆನಡಾದಲ್ಲಿ ಜೀವನ ಎಷ್ಟು ಕಷ್ಟ ಗೊತ್ತೇ? ಕ್ಯಾಬ್ ಡ್ರೈವರಾಗಿ ಕೆಲಸ ಮಾಡೋ ಮಿಲಿಟರಿ ವೈದ್ಯನ ವ್ಯಥೆಯ ಬಿಚ್ಚಿಟ್ಟ ಬೆಂಗಳೂರು ಮಹಿಳೆ
ವೈರಲ್​​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on: Oct 17, 2025 | 11:39 AM

Share

ವಿದೇಶದಲ್ಲಿ ಒಮ್ಮೆ ಕೆಲಸ ಸಿಕ್ಕರೆ ಲೈಫ್​​ ಬಿಂದಾಸ್, ಮನೆಯ ಕಷ್ಟ ಎಲ್ಲವೂ ಕಳೆಯುತ್ತದೆ ಎನ್ನುವವರು, ಹಾಗೂ ವಿದ್ಯಾಭ್ಯಾಸಕ್ಕೊಂದು ಮಕ್ಕಳನ್ನು ವಿದೇಶಕ್ಕೆ ಕಳಿಸುವ ಮೊದಲು ಈ ವಾಸ್ತವ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅದರಲ್ಲೂ ವಿದ್ಯಾರ್ಥಿಗಳು ಎಚ್ಚರದಿಂದ ಹೆಜ್ಜೆ ಇಡಬೇಕು. ವಿದೇಶದಲ್ಲಿ ಓದಲು ಹೋಗಿ ಅಲ್ಲಿ ಬದುಕಲು ಕಷ್ಟಪಡಬಾರದು. ಇಲ್ಲೊಂದು ಪೋಸ್ಟ್​ ಕೂಡ ಈ ವಿಚಾರವನ್ನೇ ಹೇಳುತ್ತದೆ ನೋಡಿ, ಬೆಂಗಳೂರು ಮೂಲದ ಮೇಘನಾ ಶ್ರೀನಿವಾಸ್ ಎಂಬುವವರು ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ನಲ್ಲಿ ಅಫ್ಘಾನಿಸ್ತಾನ ವೈದ್ಯನ ಬಗ್ಗೆ ಹೇಳಿದ್ದಾರೆ. ಓದಲು ತಾಯ್ನಾಡು ಬಿಟ್ಟು ವಿದೇಶಕ್ಕೆ ಬಂದು ಈ ವೈದ್ಯನ ಜೀವನ ಹೇಗಿದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಕೆನಾಡದಲ್ಲಿ ವಾಸವಾಗಿರುವ ಮೇಘನಾ ಶ್ರೀನಿವಾಸ್ (Meghana Srinivas) ಮಿಸ್ಸಿಸೌಗಾದಿಂದ ಟೊರೊಂಟೊಗೆ ಪ್ರಯಾಣಿಸುವಾಗ ಹೋಗಲು ಕ್ಯಾಬ್​ ಬುಕ್​ ಮಾಡಿದ್ದಾರೆ. ಈ ವೇಳೆ ಕ್ಯಾಬ್​​ ಡ್ರೈವರ್​​ ಜತೆಗೆ ಮಾತನಾಡಿಕೊಂಡು ಹೋಗುವಾಗ ಆತ ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಫ್ಘಾನಿಸ್ತಾನದ ಈ ವ್ಯಕ್ತಿ, ಕೆನಡಾದಲ್ಲಿ ಪದವಿ ಓದುತ್ತಿದ್ದು, ಜೀವನ ವೆಚ್ಚಕ್ಕಾಗಿ ಕ್ಯಾಬ್ ಓಡಿಸುತ್ತಿದ್ದಾರೆ ಎಂದು ಮೇಘನಾ ಶ್ರೀನಿವಾಸ್ ಹೇಳಿದ್ದಾರೆ. ವ್ಯಕ್ತಿ ಕ್ಯಾಬ್ ಓಡಿಸುವ ಮೂಲಕ $4,000 (₹ 3,52,758.40) ಗಳಿಸುತ್ತಿದ್ದಾರೆ. ಆದರೆ ಇವರ ಉಳಿದುಕೊಳ್ಳುವ ರೂಮ್​​ಗೆ ಸುಮಾರು $3,000 (₹ 2,63,880) ಪಾವತಿಸುತ್ತಾರೆ. ತಾನು ದುಡಿಯುವ ಅರ್ಧದಷ್ಟು ಹಣವನ್ನು ರೂಮ್​​​​ ಗೆ ನೀಡುತ್ತಾರೆ. ವಿದೇಶ ಜೀವನ ಎಷ್ಟು ಕಷ್ಟ ಇದೆ ನೋಡಿ ಎಂದು ಮೇಘನಾ ಹಂಚಿಕೊಂಡ ಪೋಸ್ಟ್​​​ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಮೇಘನಾ ಎಚ್​​ಡಿ (ಹಿಂದೂಸ್ಥಾನ ಟೈಮ್ಸ್​​) ಜತೆ ಈ ಬಗ್ಗೆ ಮಾತನಾಡಿದ್ದಾರೆ, ಈ ವೈದ್ಯ ವಿದ್ಯಾರ್ಥಿ ಜತೆಗೆ ಮಾತನಾಡಿದ ಕ್ಷಣದ ಬಗ್ಗೆ ನೆನಪಿಸಿಕೊಂಡಿದ್ದಾರೆ. “ಇವರು ಮೂಲತ ಅಫ್ಘಾನಿಸ್ತಾನದವರು, ಅವರು ಈ ಹಿಂದೆ ಯುಎಸ್ ಮತ್ತು ಕೆನಡಾಕ್ಕೆ ಮಿಲಿಟರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಈಗ ಕೆನಡಾದಲ್ಲಿ ಪಿಆರ್ ಆಗಿ ಕೆಲಸ ಮಾಡುತ್ತಿದ್ದಾರೆ, ಇಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಲು ವೈದ್ಯಕೀಯ ಪರವಾನಗಿ ಪಡೆಯಬೇಕು. ಅಲ್ಲಿಯವರೆಗೆ ಈ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಸ್ಟ್ 10 ಸೆಕೆಂಡುಗಳಲ್ಲಿ ಈ ಸುಂದರವಾದ ಕಾಡಿನಲ್ಲಿ ಅಡಗಿರುವ ಅಳಿಲನ್ನು ಹುಡುಕಿ

ಕೆನಡಾದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಮೇಘನಾ ಅವರು ವಿದೇಶಕ್ಕೆ ಬರುವ ಯುವಕರಿಗೆ ಕೆಲವೊಂದು ಕಿವಿಮಾತು ಹೇಳಿದ್ದಾರೆ. “ವಿದೇಶಕ್ಕೆ ಬರುವ ಮೊದಲು ಯೋಚನೆ ಮಾಡಿ ಬನ್ನಿ, ಬಂದ ಮೇಲೆ ಇಲ್ಲಿ ಕಷ್ಟಪಡಬಾರದು. ಅದಕ್ಕಾಗಿ ಮೊದಲೇ ಎಲ್ಲವನ್ನು ಯೋಜನೆ ಹಾಗೂ ಯೋಚನೆ ಮಾಡಿ ಬರುವುದು ಒಳ್ಳೆಯದು. ಕೆನಡಾಕ್ಕೆ ಬರುವ ಎಲ್ಲಾ ಭವಿಷ್ಯದ ವಿದ್ಯಾರ್ಥಿಗಳು ಮತ್ತು ಹೊಸಬರು ಇಲ್ಲಿ ಬಗ್ಗೆ ಒಮ್ಮೆ ವಿಚಾರಿಸಿ ನೋಡಿ. ಶಿಕ್ಷಣ ವ್ಯವಸ್ಥೆ ಅಥವಾ ನಗರಗಳ ಬಗ್ಗೆ ಮಾತ್ರವಲ್ಲದೆ ಇಲ್ಲಿನ ಜೀವನದ ವಾಸ್ತವಗಳ ಬಗ್ಗೆಯೂ ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ