Viral: ಬೆಂಗಳೂರಿನ 18 ಕಿ.ಮೀ ಪ್ರಯಾಣವು ಮುಂಬೈನ 120 ಕಿ.ಮೀ ಪ್ರಯಾಣಕ್ಕೆ ಸಮ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಬೆಂಗಳೂರಿಗ

ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯ. ಟ್ರಾಫಿಕ್ ನಲ್ಲಿ ಸಿಲುಕಿ ತಮಗಾದ ಕಹಿ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿದೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿಯೊಬ್ಬರು ತಮ್ಮ 18 ಕಿಮೀ ಪ್ರಯಾಣದ ಅನುಭವವನ್ನು ಮುಂಬೈನ ಪ್ರಯಾಣಕ್ಕೆ ಹೋಲಿಸಿ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನ 18 ಕಿ.ಮೀ ಪ್ರಯಾಣವು ಮುಂಬೈನ 120 ಕಿ.ಮೀ ಪ್ರಯಾಣಕ್ಕೆ ಸಮ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಬೆಂಗಳೂರಿಗ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 09, 2025 | 12:05 PM

ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್ ಹೀಗೆನ್ನುತ್ತಿದ್ದಂತೆ ಕಣ್ಣ ಮುಂದೆ ಬರುವುದೇ ಮಾಯಾನಗರಿ ಬೆಂಗಳೂರು (Bengaluru). ಬೆಂಗಳೂರಲ್ಲಂತೂ ಟ್ರಾಫಿಕ್‌ ಜಾಮ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು, ಬೆಳಗ್ಗೆ ಕೆಲಸ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್‌ ಆಗುವಂತಹ ಪೀಕ್‌ ಟೈಮ್‌ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಈ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒಬ್ಬರಿಗೆ ಒಂದೊಂದು ರೀತಿಯ ಅನುಭವವಾಗಿರುತ್ತದೆ. ಇಲ್ಲಿನ ಸಂಚಾರ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ 18 ಕಿ.ಮೀ ಪ್ರಯಾಣವನ್ನು ಮುಂಬೈನ (Mumbai) 120 ಕಿ.ಮೀ ಪ್ರಯಾಣಕ್ಕೆ ವ್ಯಕ್ತಿಯೊಬ್ಬರು ಹೋಲಿಸಿದ್ದಾರೆ. ಈ ನಗರದ ಸಂಚಾರ ದುಃಸ್ವಪ್ನದ ಬಗ್ಗೆ ನಗರ ನಿವಾಸಿಯೊಬ್ಬರು ಹತಾಶೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ  ಬೆಂಗಳೂರಿಗರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ.

ಬೆಂಗಳೂರಿನ ಟ್ರಾಫಿಕ್‌ನ ವಾಸ್ತವತೆ ಇದು ಎಂದ ವ್ಯಕ್ತಿ

ರಾಜೀವ್‌ ಮಂತ್ರಿ (Rajeev mantri) ಹೆಸರಿನ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರಿನ ಸಂಚಾರ ದಟ್ಟನೆಯನ್ನು ಮುಂಬೈ ಪ್ರಯಾಣಕ್ಕೆ ಹೋಲಿಸಿದ್ದಾರೆ. ಬೆಂಗಳೂರಿನ ಸಂಚಾರ ತುಂಬಾ ನಿರಾಶಾದಾಯಕವಾಗಿದೆ, ಯಶವಂತಪುರದಿಂದ ಜಯನಗರಕ್ಕೆ (18 ಕಿ.ಮೀ) ಹೋಗುವುದು ನವಿ ಮುಂಬೈನಿಂದ ಪುಣೆಗೆ (120 ಕಿ.ಮೀ) ಹೋದಂತೆ. ಸರಿಪಡಿಸಲಾಗದ, ಬೃಹತ್ ವಿಪತ್ತು! ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ:ಪಣತ್ತೂರು ರಸ್ತೆ ‘ಡರ್ಟ್ ಬೈಕ್’: ಬೆಂಗಳೂರಿನ ರಸ್ತೆ ಸ್ಥಿತಿ ಹೇಗಿದೆ ನೋಡಿ

ನವೆಂಬರ್ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ಭಾಗದಲ್ಲಿ ಮೆಟ್ರೋ ಇದೆ, ಆದ್ದರಿಂದ ಸಂಚಾರ ದಟ್ಟಣೆಯ ಬಗ್ಗೆ ದೂರು ನೀಡುವುದು ಹಾಸ್ಯಾಸ್ಪದ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕಾರನ್ನು ನಿಲ್ಲಿಸಿ, ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರ ಯಶವಂತಪುರದಿಂದ ಜಯನಗರಕ್ಕೆ ಮೆಟ್ರೋ ಕೇವಲ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಯಾವುದೇ ಇಂಟರ್ಚೇಂಜ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:03 pm, Sun, 9 November 25