ವಿಮಾನ ಪ್ರಯಾಣದ (Flight Journey) ವೇಳೆ ಪ್ರಯಾಣಿಕರಿಗೆ ಹಲವು ಸಲಹೆ ರೀತಿಯ ಸೂಚನೆಗಳನ್ನು ನೀಡಲಾಗುತ್ತದೆ. ಇದರಲ್ಲಿ, ಭದ್ರತೆ, ಸುರಕ್ಷತೆಗೆ ಸಂಬಂಧಿಸಿದ ಸೂಚನೆಗಳೂ ಒಳಗೊಂಡಿರುತ್ತವೆ. ಇವುಗಳನ್ನು ಪಾಲಿಸಬೇಕಾದ್ದು ಕಡ್ಡಾಯವೇನೋ ಸರಿ. ಇದರ ಹೊರತಾಗಿಯೂ ಇತರ ಪ್ರಯಾಣಿಕರಿಗೆ ತೊಂದರೆ, ಮುಜುಗರವಾಗದ ರೀತಿಯಲ್ಲಿ ಸಹ ಪ್ರಯಾಣಿಕರ ವರ್ತನೆ ಇರಬೇಕೆಂದು ಬೇರೆ ಹೇಳಬೇಕಿಲ್ಲವಲ್ಲ. ಆದರೆ, ಕೆಲವರು ಸಿಬ್ಬಂದಿ ನೀಡಿದ ಸಲಹೆ, ಸೂಚನೆಯನ್ನು ಉಲ್ಲಂಘಿಸಿ ಉದ್ಧಟತನ ಮೆರೆಯುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಜೋಡಿಯೊಂದು ವಿಮಾನ ಪ್ರಯಾಣದ ವೇಳೆ ಸೀಟ್ನಲ್ಲಿಯೇ ಮಲಗಿಕೊಂಡು ಸರಸ ಸಲ್ಲಾಪದಲ್ಲಿ ತೊಡಗಿದೆ!
ಪ್ರಪಂಚದ ಹೆಚ್ಚಿನ ದೇಶಗಳು ವಿಮಾನಯಾನದ ವಿಚಾರದಲ್ಲಿ ನಿಯಮಗಳನ್ನು ಬಹಳ ಕಟ್ಟುನಿಟ್ಟಾಗಿ ರೂಪಿಸಿರುತ್ತವೆ. ಆದರೆ ಅನೇಕ ಪ್ರಯಾಣಿಕರು ಪ್ರತಿದಿನ ಅವುಗಳನ್ನು ಉಲ್ಲಂಘಿಸುತ್ತಿರುವುದೂ ನಡೆಯುತ್ತಿದೆ. ಈಗ ವೈರಲ್ ಆಗಿರುವ ಚಿತ್ರದಲ್ಲಿರುವ ಜೋಡಿಯನ್ನು ನೋಡಿ. ಇವರು ವಿಮಾನದಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾರೆ. ಇದನ್ನು ಕಂಡ ಸಹ ಪ್ರಯಾಣಿಕರು ನಿಬ್ಬೆರಗಾಗಿ ಹೋಗಿದ್ದಾರೆ. ಸಹ ಪ್ರಯಾಣಿಕರೊಬ್ಬರು ಆ ಫೋಟೊಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Can’t believe my view on the plane
It was like this the whole 4 hour flight. 😆😆 pic.twitter.com/ruz39rLzDm— FLEA 🇭🇹 (@babyibeenajoint) April 5, 2024
ಈ ಜೋಡಿಗೆ ಯಾವ ಭಯ, ಮುಜುಗರ, ನಾಚಿಕೆಯೂ ಇರಲಿಲ್ಲ ಎಂಬುದು ಚಿತ್ರಗಳನ್ನು ನೋಡಿದರೆ ತಿಳಿಯಬಹುದಾಗಿದೆ. ಆಸನದ ಮೇಲೆ ಆರಾಮವಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ತಲ್ಲೀನರಾಗಿರುವುದು ಚಿತ್ರದಲ್ಲಿ ಕಾಣಿಸುತ್ತದೆ. FLEA ಹೆಸರಿನ ಎಕ್ಸ್ ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ‘ವಿಮಾನದಲ್ಲಿ ಕಂಡದ್ದನ್ನು ನಂಬಲು ಸಾಧ್ಯವಾಗಲಿಲ್ಲ. ಇಡೀ 4 ಗಂಟೆಗಳ ಹಾರಾಟವು ಹೀಗೆಯೇ ಇತ್ತು’ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಪಾರ್ಸೆಲ್ ನೀಡಲು ಬಂದು ಮನೆಯ ಹೊರಗಿದ್ದ ಬೆಲೆ ಬಾಳುವ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್
ಶೇರ್ ಆದ ಫೋಟೊಗಳನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಆದರೆ, ಈ ವಿಷಯ ಎಲ್ಲಿ? ಯಾವ ವಿಮಾನದಲ್ಲಿ ಆಗಿರುವುದು ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಮಾನದಲ್ಲಿ ಅಶ್ಲೀಲ ಕೃತ್ಯಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ವಿಮಾನಯಾನ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಇದನ್ನು ಉಲ್ಲಂಘಿಸುವ ಪ್ರಯಾಣಿಕರನ್ನು ವಿಮಾನ ಪ್ರಯಾಣದಿಂದ ನಿಷೇಧಿಸಬಹುದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ