Viral Video: ಡಿಜೆ ಹಾಡಿಗೆ ಅದ್ಭುತವಾಗಿ ಸ್ಟೆಪ್ ಹಾಕೊ ನಾಯಿ | ವಿಡಿಯೋ ವೈರಲ್

ವಿಡಿಯೋದಲ್ಲಿ ನಾಯಿ ಕಿವಿಗೆ ಹೆಡ್​ಪೋನ್ ಹಾಕಿಕೊಂಡಿದೆ. ಸುತ್ತಲೂ ಬಣ್ಣದ ಜಗಮಗಿಸುವ ಲೈಟ್​ಗಳು, ತನ್ನ ಕಾಲ ಕೆಳಗೆ ಗೊಂಬೆ ಇದೆ. ಹಾಡು ಪ್ಲೇ ಆಗುತ್ತಿದಂತೆ ನಾಯಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿತ್ತದೆ.

Viral Video: ಡಿಜೆ ಹಾಡಿಗೆ ಅದ್ಭುತವಾಗಿ ಸ್ಟೆಪ್ ಹಾಕೊ ನಾಯಿ | ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಾಯಿ
Image Credit source: Hindustan Times
Updated By: ವಿವೇಕ ಬಿರಾದಾರ

Updated on: May 22, 2022 | 12:03 PM

ನಿಯತ್ತಿಗೆ ಇನ್ನೊಂದು ಹೆಸರು ನಾಯಿ. ನಾಯಿಗೆ ಎಲ್ಲ ಪ್ರಾಣಿಗಿಂತಲೂ ನಿಯತ್ತು ಜಾಸ್ತಿ. ಹಾಗೇ ಈ ಸಾಕು ಪ್ರಾಣಿಗಳೊಂದಿಗೆ ಕಳೆಯುವ ಸಮಯ ಬಹಳ ಚೆನ್ನಾಗಿರುತ್ತದೆ. ಅವು ಮಾಡುವ ತುಂಟಾಟಗಳನ್ನು ನೋಡುವುದು ಚಂದ. ಅವುಗಳೊಂದಿಗೆ ಆಡುವುದು ಚಂದ. ಹೀಗೆ ನಾಯಿಯೊಂದು ಮಾಡುವ ತುಂಟಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್​ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ನಾಯಿ ಕಿವಿಗೆ ಹೆಡ್​ಪೋನ್ ಹಾಕಿಕೊಂಡಿದೆ. ಸುತ್ತಲೂ ಬಣ್ಣದ ಜಗಮಗಿಸುವ ಲೈಟ್​ಗಳು, ತನ್ನ ಕಾಲ ಕೆಳಗೆ ಗೊಂಬೆ ಇದೆ. ಹಾಡು ಪ್ಲೇ ಆಗುತ್ತಿದಂತೆ ನಾಯಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿತ್ತದೆ. ಮೊದಲು ಎರಡು ಕಾಲುಗಳನ್ನು ಮೇಲಕ್ಕ ಎತ್ತಿ ಡ್ಯಾನ್ಸ್ ಮಾಡುತ್ತದೆ. ನಂತರ ಒಂದೇ ಕಾಲಿನಿಂದ ಗೊಂಬೆಯನ್ನು ತುಳಿಯುತ್ತಾ ಕುಣಿಯುತ್ತದೆ. ನಂತರ ತನ್ನ ದೇಹವನ್ನು ಅಲಗಾಡಿಸುತ್ತಿದೆ. ಕೊನೆಗೆ ತನ್ನ ಬಾಲವನ್ನು ಅಲಗಾಡಿಸುತ್ತದೆ.

ಇದನ್ನು ಓದಿ: 40 ಗಂಟೆಗಳಲ್ಲಿ 23 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿ

ವಿಡಿಯೋ ನೋಡಲು ಬಹಳ ಚೆನ್ನಾಗಿದ್ದು, ವೀಕ್ಷಕರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿರುವ ಇನ್​ಸ್ಟಾಗ್ರಾಮ ಅಕೌಂಟರ್ ಹೋಲ್ಡರ್ ನಾಯಿ ಮಾಡುವ ನೃತ್ಯ ಬಂಗಿಗಳು ತಮಾಷೆಯಾಗಿವೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್​ ಲೈಕ್ಸ್​

ಎರಡು ದಿನಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಈ ಶ್ವಾನದ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈಗಾಗಲೇ 5.8 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಈ ವಿಡಿಯೋಕ್ಕೆ ಸಾಕಷ್ಟು ಲೈಕ್ ಮತ್ತು ಕಮೇಂಟ್​ಗಳು ಬರುತ್ತಿವೆ. ಅವನು ಮೋಹಕ ಎಂದು ಒಬ್ಬರು ಕಮೇಂಟ್ ಮಾಡಿದ್ದಾರೆ. ಕೆಲವರು ವೀಡಿಯೊವನ್ನು ಅವರ ಆಪ್ತರ ಗಮನಕ್ಕೆ ತರಲು ಅವರಿಗೆ ಟ್ಯಾಗ್ ಮಾಡಿದ್ದಾರೆ.

 

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ