ಪ್ರೀತಿಯಿಂದ ಸಾಕಿರುವ ನಾಯಿ ಮನೆಯವರ ಮಾತನ್ನು ಚಾಚು ತಪ್ಪದೆ ಪಾಲಿಸುತ್ತದೆ. ನಾಯಿಯ ಒಳ್ಳೆ ಬುದ್ದಿಗೆ ಮನೆಯವರು ಕೂಡಾ ತುಂಬಾ ಮುದ್ದಾಗಿ ಸಾಕುತ್ತಾರೆ. ಮಗುವಂತೆ ಪೋಷಿಸುತ್ತಾರೆ. ಶ್ವಾನ ಕೂಡಾ ಮನೆಯವರೊಂದಿಗೆ ಅಷ್ಟೇ ಪ್ರೀತಿಯಿಂದ ಬೆರೆತು ಹೋಗಿರುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕೂಡಾ ಶ್ವಾನ ಮತ್ತು ಮುದ್ದಾದ ಮಗುವಿನ ಆಟದ ದೃಶ್ಯ. ಪುಟ್ಟ ಹುಡುಗಿ ಮತ್ತು ಪ್ರೀತಿಯಿಂದ ಸಾಕಿದ ನಾಯಿ ಜೊತೆಯಾಗಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಪುಟ್ಟ ಬಾಲಕಿ ಮನೆಯಲ್ಲಿ ವ್ಯಾಯಾಮ ಮಾಡುತ್ತಿರುತ್ತಾಳೆ. ಅವಳ ಜೊತೆಗೆ ಶ್ವಾನ ಕೂಡಾ ವ್ಯಾಯಾಮ ಮಾಡಿದೆ. ಆಕೆ ಮಾಡಿದಂತೆ ನಾಯಿಯೂ ಕೂಡಾ ವ್ಯಾಯಾಮ ಮಾಡಿದೆ. ಬ್ಯುಟೆಂಗೆಬೀಡೆನ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2 ಮಿಲಿಯನ್ಗೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿ, ಖುಷಿ ವ್ಯಕ್ತಪಡಿಸಿದ್ದಾರೆ. ನಾಯಿ ಮತ್ತು ಬಾಲಕಿ ನಡುವಿನ ಬಾಂಧವ್ಯವನ್ನು ವೈರಲ್ ಆಗಿರುವ ವಿಡಿಯೋ ಸಾರುತ್ತದೆ.
1 ನಿಮಿಷದ ವಿಡಿಯೋದಲ್ಲಿ ಪುಟ್ಟ ಹುಡುಗಿ, ತನ್ನ ಸಾಕು ನಾಯಿಯೊಂದಿಗೆ ಕೆಲವು ಅದ್ಭುತ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಇಬ್ಬರೂ ಈ ವ್ಯಾಯಾಮಗಳನ್ನು ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು, ಇದು ಮನರಂಜನೀಯವಾಗಿದೆ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕಲ್ಮಶವಿಲ್ಲದ ಮುಗ್ಧ ಪ್ರೀತಿ ವಿಡಿಯೋದಲ್ಲಿ ಕಾಣಬಹುದು ಅಂತ ಹೇಳಿದ್ದಾರೆ.
A girl and her dog.. ? pic.twitter.com/W4bj8YJwOM
— Buitengebieden (@buitengebieden_) December 16, 2021
ಇದನ್ನೂ ಓದಿ