ವಿದೇಶಿಗರು ಭಾರತದ ಸಂಸ್ಕೃತಿಯ ಜೊತೆಗೆ ಭಾರತದ ಸಿನಿಮಾಗಳ ಹಾಡನ್ನು ಕೂಡ ತಮ್ಮ ಮದುವೆ ಕಾರ್ಯಕ್ರಮಗಳಲ್ಲಿ ಅವಳವಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಖತ್ ವೈರಲ್ ಆಗುತ್ತಿದೆ. ವಿದೇಶಿಗರು ನಮ್ಮ ಮದುವೆಗಳಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಇತರ ಭಾಷೆಗಳ ಸಿನಿಮಾದ ಹಾಡುಗಳನ್ನು ಹಾಕುತ್ತಿದ್ದಾರೆ. ಇದೀಗ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ವಿದೇಶಿ ಮಧು ತನ್ನ ಮದುವೆಯ ಸಮಯದಲ್ಲಿ ಬಾಲಿವುಡ್ ಹಾಡಿ ಸಖತ್ ಡ್ಯಾನ್ಸ್ ಮಾಡಿದ್ದಾಳೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಲಾಸ್ ಏಂಜಲೀಸ್ ಮೂಲದ ಅನಿಶಾ ಕೇ ಎಂಬ ವಧು ಇತರ ನರ್ತಕಿರೊಂದಿಗೆ ಬಾಲಿವುಡ್ ನ ಚಿಕ್ನಿ ಚಮೇಲಿ ಮತ್ತು ಶರರಾ ಶರಾರ ಎಂಬ ಹಿಟ್ ಐಟಂ ಸಾಂಗ್ ಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ತನ್ನ ಮದುವೆಯ ಸಮಯದಲ್ಲಿ ತನ್ನ ತಂದೆಯ ಆಸೆಯಂತೆ ತಂದೆಯ ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದೀಗ ಎಲ್ಲ ಕಡೆ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಮತ್ತೆ ವೈರಲ್ ಆಗುತ್ತಿದೆ ಈ ಫೋಟೋ , ಇದು ಅಮಿತಾಬ್ ಬಚ್ಚನ್ ಅಲ್ಲ
ಮದುಮಗಳು ಈ ಹಾಡಿಗೆ ಕತ್ರಿನಾ ಕೈಫ್ ಅವರಂತೆಯೇ ಹೆಜ್ಜೆ ಹಾಕಿದ್ದಾರೆ. ನಂತರ ಅವರು ಶಮಿತಾ ಶೆಟ್ಟಿ ಅವರ ಐಟಂ ಶರರಾ ಶರರಾ ಹಾಡಿಗೂ ಕೂಡ ಹೆಜ್ಜೆ ಹಾಕಿದ್ದಾರೆ. ಅತಿಥಿಗಳು ಚಪ್ಪಾಳೆ ತಟ್ಟಿ ಅವರನ್ನು ಇನ್ನಷ್ಟು ಪ್ರೋತ್ಸಾಹ ನೀಡಿದ್ದಾರೆ. ಒಂದು ಆಕರ್ಷಕವಾದ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ . ವಧು ಆಫ್-ವೈಟ್ ಕಸೂತಿ ಲೆಹೆಂಗಾವನ್ನು ಧರಿಸಿದ್ದರೆ, ವಧುವಿನ ಗೆಳತಿಯರು ವಿವಿಧ ಬಣ್ಣಗಳ ಲೆಹೆಂಗಾಗಳನ್ನು ಧರಿಸಿದ್ದಾರೆ. ಒಟ್ಟಿನಲ್ಲಿ ಭಾರತ ಸಂಸ್ಕೃತಿಯ ಜೊತೆಗೆ ಭಾರತ ಸಿನಿಮಾ ಹಾಡಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ ವಿದೇಶಿಗರು.
ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Wed, 22 June 22