Varanasi Airport: ಈ ವಿಮಾನ ನಿಲ್ದಾಣದಲ್ಲಿ ಸಂಸ್ಕೃತ ಭಾಷೆಯಲ್ಲೂ ಕೇಳುತ್ತೆ ಅನೌನ್ಸ್ಮೆಂಟ್!
ವಾರಾಣಸಿ ವಿಮಾನ ನಿಲ್ದಾಣದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸಂಸ್ಕೃತ ಪ್ರಕಟಣೆಯನ್ನು ಒಳಗೊಂಡ ವಿಡಿಯೋ ಕ್ಲಿಪ್ ಹಂಚಿಕೊಳ್ಳಲಾಗಿದೆ.
ವಾರಾಣಸಿ: ವಾರಾಣಸಿಯ (Varanasi Airport) ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊವಿಡ್-19 ಬಗ್ಗೆ ಸಂಸ್ಕೃತ ಭಾಷೆಯಲ್ಲಿ ಪ್ರಕಟಣೆಗಳನ್ನು (Announcement) ಮಾಡಲಾಗುತ್ತಿದೆ. ಈ ಹಿಂದೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಕಟಣೆಗಳನ್ನು ಮಾಡಲಾಗುತ್ತಿತ್ತು. ಇದೀಗ ಹೊಸ ಸೇರ್ಪಡೆಯಾಗಿ ಸಂಸ್ಕೃತ (Sanskrit) ಭಾಷೆಯನ್ನು ಸೇರಿಸಲಾಗಿದೆ.
ವಾರಾಣಸಿ ವಿಮಾನ ನಿಲ್ದಾಣದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸಂಸ್ಕೃತ ಪ್ರಕಟಣೆಯನ್ನು ಒಳಗೊಂಡ ವಿಡಿಯೋ ಕ್ಲಿಪ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪ್ರಯಾಣಿಕರು ಚಲಿಸುತ್ತಿರುವಾಗ ವಿಮಾನ ನಿಲ್ದಾಣದಲ್ಲಿ ಸಂಸ್ಕೃತ ಘೋಷಣೆಯಾಗುತ್ತಿರುವುದನ್ನು ಕೇಳಬಹುದು. ಈಗ ವಾರಾಣಸಿ ವಿಮಾನ ನಿಲ್ದಾಣದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ನಂತರ, ಕೋವಿಡ್ ಮಾನದಂಡಗಳನ್ನು ಸಂಸ್ಕೃತದಲ್ಲಿಯೂ ಘೋಷಿಸಲಾಗುತ್ತಿದೆ.
It is pleasant that the announcement is being made in #Sanskrit at #Varanasi airport. This is a good effort to make Sanskrit the common language. This should happen at Varanasi railway station also. #संस्कृत @ShefVaidya @bibekdebroy @DrKirodilalBJP @RamcharanBohra @chitraaum pic.twitter.com/Mv0BqfKxJS
— Kosalendradas कोसलेन्द्रदास: (@Kosalendradas) June 18, 2022
ಕೆಲವು ನೆಟ್ಟಿಗರು ಈ ಕ್ರಮವನ್ನು ಸ್ವಾಗತಿಸಿದ್ದರೆ ಇನ್ನು ಕೆಲವರು ಜನರಿಗೆ ಸಂಸ್ಕೃತ ಹೇಗೆ ಅರ್ಥವಾಗುತ್ತದೆ? ಎಲ್ಲರಿಗೂ ಸಂಸ್ಕೃತ ಅರ್ಥವಾಗುವುದಿಲ್ಲ. ಪಾಲಿ ಮತ್ತು ಪ್ರಾಕೃತ ಭಾಷೆಯನ್ನು ಕೂಡ ಸೇರಿಸಿ ಎಂದು ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Bengaluru Airport: ಬೆಂಗಳೂರು ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ಹೊಸ ಅಂತಾರಾಷ್ಟ್ರೀಯ ಮಾರ್ಗಗಳು ಆರಂಭ
“ಈಗ ವಾರಾಣಸಿ ವಿಮಾನ ನಿಲ್ದಾಣದಲ್ಲಿ ಇಂಗ್ಲಿಷ್ ಮತ್ತು ಹಿಂದಿ ನಂತರ ಕೊವಿಡ್ ಮಾನದಂಡಗಳನ್ನು ಸಂಸ್ಕೃತದಲ್ಲಿಯೂ ಘೋಷಿಸಲಾಗುತ್ತಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ತಕ್ಷಣ, ಅವರು ಸಂಸ್ಕೃತ ಭಾಷೆಯ ಕೇಂದ್ರವನ್ನು ಪ್ರವೇಶಿಸಿದ ಅನುಭವವಾಗುತ್ತದೆ” ಎಂದು ವಾರಾಣಸಿ ವಿಮಾನ ನಿಲ್ದಾಣ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
ವಿಮಾನ ನಿಲ್ದಾಣದ ನಿರ್ದೇಶಕ ಆರ್ಯಮ ಸನ್ಯಾಲ್ ಪ್ರಕಾರ, ವಾರಣಾಸಿ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಕೇಂದ್ರವಾಗಿತ್ತು. ಹೀಗಾಗಿ, ಸಂಸ್ಕೃತ ಭಾಷೆಗೆ ಗೌರವವನ್ನು ನೀಡಲು ಈ ಹೊಸ ಸಂಪ್ರದಾಯವನ್ನು ಪ್ರಾರಂಭಿಸಲಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Wed, 22 June 22