ಕೊವಿಡ್ 19 ಆತಂಕ: ವಿಮಾನದಲ್ಲಿ, ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ

ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಟೇಕ್-ಆಫ್‌ಗೆ ಮುಂಚಿತವಾಗಿ ಡಿ-ಬೋರ್ಡಿಂಗ್ ಮಾಡಬಹುದು ಅಥವಾ ಅಶಿಸ್ತಿನ ಪ್ರಯಾಣಿಕರಂತೆ ಪರಿಗಣಿಸಬಹುದು ಎಂದು ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ ಬುಧವಾರ ಹೇಳಿದೆ.

ಕೊವಿಡ್ 19 ಆತಂಕ: ವಿಮಾನದಲ್ಲಿ, ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 08, 2022 | 6:56 PM

ದೆಹಲಿ: ದೇಶದ ಕೆಲವು ಭಾಗಗಳಲ್ಲಿ ಕೊವಿಡ್ (Covid 19) ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಮಾಸ್ಕ್‌ ಧರಿಸುವುದು (Mask) ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಟೇಕ್-ಆಫ್‌ಗೆ ಮುಂಚಿತವಾಗಿ ಡಿ-ಬೋರ್ಡಿಂಗ್ ಮಾಡಬಹುದು ಅಥವಾ ಅಶಿಸ್ತಿನ ಪ್ರಯಾಣಿಕರಂತೆ ಪರಿಗಣಿಸಬಹುದು ಎಂದು ನಾಗರಿಕ ವಿಮಾನಯಾನ ನಿಯಂತ್ರಕ (DGCA) ಬುಧವಾರ ಹೇಳಿದೆ. ಸಿಐಎಸ್‌ಎಫ್‌ನ ಸಿಬ್ಬಂದಿ ಮಾಸ್ಕ್‌ ನಿಯಮ ಪಾಲನೆಯ ಉಸ್ತುವಾರಿಯನ್ನು ಹೊಂದಿರುತ್ತಾರೆ ಎಂದು ಡಿಜಿಸಿಎ ಹೇಳಿದೆ.  ಕೊವಿಡ್ ಸುರಕ್ಷಾ ಕ್ರಮಗಳನ್ನು ಪಾಲಿಸಲು ನಿರಾಕರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದ ನಂತರ ಡಿಜಿಸಿಎ ಈ ಹೊಸ ಮಾರ್ಗಸೂಚಿ ಹೊರಡಿಸಿದೆ. ಯಾವುದೇ ಪ್ರಯಾಣಿಕರು ಪುನರಾವರ್ತಿತ ಎಚ್ಚರಿಕೆಗಳ ನಂತರವೂ ಸೂಚನೆಗಳನ್ನು ಅನುಸರಿಸದಿದ್ದಲ್ಲಿ, ನಿರ್ಗಮನದ ಮೊದಲು, ಅಗತ್ಯವಿದ್ದರೆ, ಅವನನ್ನು/ಅವಳನ್ನು ಡಿ-ಬೋರ್ಡಿಂಗ್ ಮಾಡಬೇಕು. ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಮಾಸ್ಕ್ ಧರಿಸಲು ನಿರಾಕರಿಸಿದರೆ ಅಥವಾ ಪುನರಾವರ್ತಿತ ಎಚ್ಚರಿಕೆಗಳ ನಂತರವೂ ಪ್ರಯಾಣಿಕರು ಕೊವಿಡ್-19 ಪ್ರೊಟೊಕಾಲ್ ಉಲ್ಲಂಘಿಸಿದರೆ, ಹಾರಾಟದ ಸಮಯದಲ್ಲಿ, ಅಂತಹ ಪ್ರಯಾಣಿಕರನ್ನು “ಅಶಿಸ್ತಿನ ಪ್ರಯಾಣಿಕರು” ಎಂದು ಪರಿಗಣಿಸಬಹುದು ಎಂದು ಡಿಜಿಸಿಎ ಬುಧವಾರ ಹೊರಡಿಸಿದ ಆದೇಶದಲ್ಲಿ ಹೇಳಿದೆ.

ನಿಗಾ ಮತ್ತು ಎಚ್ಚರಿಕೆಗಳನ್ನು ಹೆಚ್ಚಿಸುವಂತೆ ವಿಮಾನ ನಿಲ್ದಾಣ ಆಪರೇಟರ್ ಗಳಿಗೆ ಹೇಳಲಾಗಿದೆ. ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರಿಗೆ ದಂಡ ಅಥವಾ ಅಂಥಾ ವ್ಯಕ್ತಿಗಳನ್ನು ಭದ್ರತಾ ಏಜೆನ್ಸಿಗಳಿಗೆ ಒಪ್ಪಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಆದೇಶದಲ್ಲಿ ಹೇಳಿದೆ.

ಕೊವಿಡ್ ಸಾಂಕ್ರಾಮಿಕ ಇನ್ನೂ ಹೋಗಿಲ್ಲ, ಹಾಗಾಗಿ ಕೊವಿಡ್ ಪ್ರೋಟೊಕಾಲ್ ಗಳನ್ನು ತಪ್ಪದೇ ಪಾಲಿಸಬೇಕು. ಇದನ್ನು ಪಾಲಿಸದೇ ಇದ್ದವರ ವಿರುದ್ಧ ಆರೋಗ್ಯ ಸಚಿವಾಲಯ ಅಥವಾ ಡಿಜಿಸಿಎ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ಜೂನ್ 3ರಂದು ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಇದನ್ನೂ ಓದಿ
Image
ಕರ್ನಾಟಕದಲ್ಲಿ ಮತ್ತೆ ಶುರುವಾಯ್ತು ಕೊರೊನಾ 4ನೇ ಅಲೆ ಆತಂಕ! ಮಾರ್ಗಸೂಚಿ ಜಾರಿಗೆ ತಜ್ಞರ ಸಲಹೆ
Image
ರಾಜ್ಯದಲ್ಲಿ ಮತ್ತೆ ಹೆಚ್ಚಾದ ಕೊರೊನಾ; 4ನೇ ಅಲೆ ಭೀತಿ, ಇಂದು ಸಂಜೆ ಆರೋಗ್ಯ ಇಲಾಖೆಯಿಂದ ತಾಂತ್ರಿಕ ಸಲಹಾ ಸಮಿತಿ ಜೊತೆ ಮಹತ್ವದ ಸಭೆ
Image
ದೇಶದಲ್ಲಿ ಕೊವಿಡ್ ಪ್ರಕರಣಗಳ ಏರಿಕೆ; ಕಳವಳ ವ್ಯಕ್ತಪಡಿಸಿ 5 ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ

ನಿಯಮ ಪಾಲಿಸದೇ ಇರುವ ಪ್ರಯಾಣಿಕರನ್ನು ಹೊರದಬ್ಬಬಹುದು, “ನೊ-ಫ್ಲೈ” ಪಟ್ಟಿಗೆ ಸೇರಿಸಬಹುದು ಅಥವಾ ಮುಂದಿನ ಕ್ರಮಕ್ಕಾಗಿ ಭದ್ರತಾ ಏಜೆನ್ಸಿಗಳಿಗೆ ಹಸ್ತಾಂತರಿಸಬಹುದು ಎಂದು ನ್ಯಾಯಾಲಯವು ಹೇಳಿದೆ. “ನಮ್ಮ ದೃಷ್ಟಿಯಲ್ಲಿ ಈ ರೀತಿ ಆದೇಶವನ್ನು ನೀಡುವುದು ಸರಿಯಾದ ಹೆಜ್ಜೆಯಾಗಿದೆ, ಏಕೆಂದರೆ ಸಾಂಕ್ರಾಮಿಕ ರೋಗವು ಕಡಿಮೆಯಾಗಿಲ್ಲ ಮತ್ತು ಅದು ಮತ್ತೆ ಮತ್ತೆ ಬರುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 6:07 pm, Wed, 8 June 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್