ಮೊಸಳೆಯನ್ನು ದೂರದಿಂದ ನೋಡಿದರೆ ಸಾಕು ನಿಂತಲ್ಲೆ ಕೈ ಕಾಲುಗಳು ನಡುಗುವುದಕ್ಕೆ ಶುರು ಮಾಡುತ್ತವೆ. ಹೀಗಿರುವಾಗ ಫ್ಲೋರಿಡಾದಲ್ಲಿ ಮಾಜಿ ಯೋಧನೊಬ್ಬ ಮೊಸಳೆಯನ್ನು ಹಿಡಿಯುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಮೊಸಳೆಯನ್ನು ಹಿಡಿದು ಕೆರೆ ಬಳಿ ಬಿಟ್ಟಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಡಸ್ಟ್ ಬಿನ್ ಸಹಾಯದಿಂದ ಮಾಜಿ ಯೋಧ ಯುಜೀನ್ ಬೊಝಿ ಎಂಬುವವರು ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಮೊಸಳೆಯನ್ನು ಸೆರೆಹಿಡಿಯಲು ಕೆಲ ಸಮಯ ಡಸ್ಟ್ ಬಿನ್ ಹಿಡಿದು ಪರದಾಡುತ್ತಾರೆ.
ಮಾಜಿ ಯೋಧ ಯುಜೀನ್ ಬೊಝಿ ತನ್ನ ತೋಟದಲ್ಲಿ ಮೊಸಳೆಯಿಂದ ಪಾರಾಗಲು ಡಸ್ಟ್ ಬಿನ್ ಬಳಸುತ್ತಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವ ರಕ್ಷಣೆಗಾಗಿ ಕಸದ ತೊಟ್ಟಿ ಸಹಾಯದಿಂದ 6 ಅಡಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಡಸ್ಟ್ ಬಿನ್ ಹತ್ತಿರ ಇಟ್ಟಾಗ ಮೊಸಳೆ ಜೋರಾಗಿ ಸದ್ದು ಮಾಡಿ ಹಿಂದಕ್ಕೆ ಚಲಿಸುತ್ತದೆ. ಕೆಲ ಸೆಕೆಂಡುಗಳ ಕಾಲ ಕೋಪದಿಂದ ಒದ್ದಾಡುತ್ತದೆ. ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಪ್ರಯತ್ನ ಬಿಡದ ಮಾಜಿ ಯೋಧ ಕೊನೆಗೂ ಕಸದ ತೊಟ್ಟಿ ಸಹಾಯದಿಂದ ಮೊಸಳೆಯನ್ನು ಹಿಡಿಯುತ್ತಾರೆ.
ಮೊಸಳೆ ಒಳಗೆ ಹೋಗುತ್ತಿದ್ದಂತೆ ಕಸದ ತೊಟ್ಟಿಯನ್ನು ನೇರವಾಗಿ ಇಡುತ್ತಾರೆ. ತಕ್ಷಣ ಡಸ್ಟ್ ಬಿನ್ ಮುಚ್ಚಳವನ್ನು ಮುಚ್ಚುತ್ತಾರೆ. ನಂತರ ಮೊಸಳೆಯನ್ನು ಬಿಡಲು ಕೆರೆಯ ಬಳಿ ಕಸದ ತೊಟ್ಟಿಯನ್ನು ತರುತ್ತಾರೆ. ಕಸದ ತೊಟ್ಟಿಯನ್ನು ಕೆಳಗೆ ಇಡುತ್ತಿದ್ದಂತೆ ಭಯದಿಂದ ಹಿಂದಕ್ಕೆ ಓಡಿ ಬರುತ್ತಾರೆ. ಈ ಎಲ್ಲಾ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.
Man catches alligator with garbage bin! pic.twitter.com/d2E1euQgYk
— Ahadun Ahad (@AhadunAhad11111) October 2, 2021
ಇದನ್ನೂ ಓದಿ
ಶ್ವೇತಾ ಚಂಗಪ್ಪ ಮನೆಯಲ್ಲಿ ರವಿಚಂದ್ರನ್; ಮಜಾ ಟಾಕೀಸ್ ರಾಣಿ ಮಗನ ಜತೆ ‘ಕ್ರೇಜಿ ಸ್ಟಾರ್’ ವಿಡಿಯೋ ವೈರಲ್