viral Video: ಕನ್ನಡಿಗರೇ ನಾಚುವಂತೆ ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡುವ ಜರ್ಮನ್ ಪ್ರಜೆಗಳು

| Updated By: ವಿವೇಕ ಬಿರಾದಾರ

Updated on: Sep 25, 2022 | 10:36 PM

ಮೈಸೂರಿನಲ್ಲಿ ವಿದೇಶಿ ಮಹಿಳೆಯೊಬ್ಬರು ಆಟೋ ಡ್ರೈವರ್​ನೊಂದಿಗೆ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

viral Video: ಕನ್ನಡಿಗರೇ ನಾಚುವಂತೆ ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡುವ ಜರ್ಮನ್ ಪ್ರಜೆಗಳು
ಕನ್ನಡದಲ್ಲಿ ಮಾತನಾಡುತ್ತಿರುವ ಜರ್ಮನ್​ ಮಹಿಳೆ
Follow us on

ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದು ಸಾಕಷ್ಟು ವರ್ಷಗಳಾಗಿದ್ದರೂ ಕನ್ನಡ ಬರುವುದಿಲ್ಲ ಎಂದು ಸಾಕಷ್ಟು ಜನರು ಹೇಳುವುದನ್ನು ಕೇಳಿದ್ದೇವೆ. ಇನ್ನೂ ಕೆಲವರು ಕರ್ನಾಟಕದಲ್ಲಿ ಹುಟ್ಟಿ ಬೆಳೆದರೂ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ. ಇಂತವರ ಮಧ್ಯೆ ವಿದೇಶದಿಂದ ಬಂದ ಕೆಲವರು ಕನ್ನಡದಲ್ಲಿ ಮಾತನಾಡುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ನೇರವಾಗಿ ನೋಡಿದ್ದೇವೆ. ಇಂತಹವರನ್ನು ನೋಡಿದಾಗ ಹೆಮ್ಮೆಯಾಗುತ್ತಾದೆ.

ಇದೆ ರೀತಿಯಾಗಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ವಿದೇಶಿ ಮಹಿಳೆಯೊಬ್ಬಳು ನಿರರ್ಗಳವಾಗಿ ಕನ್ನಡವನ್ನು ಮಾತನಾಡುವುದನ್ನು ನೋಡಬಹುದಾಗಿದೆ. ಜರ್ಮನ್ ಪ್ರಜೆಗಳಾದ ಜೆನ್ನಿಫರ್ ಮತ್ತು ಆಕೆಯ ಸ್ನೇಹಿತ ಎಜ್ರಾ ಬಹಳ ಸುಂದರವಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ.

ವಿಡಿಯೋ ಚಿತ್ರಿಕರಣಗೊಂಡಿದ್ದು ಮೈಸೂರಿನಲ್ಲಿ. ವಿಡಿಯೋದಲ್ಲಿ ಎಜ್ರಾ ಚಾಲಕನಾಗಿ ಮತ್ತು ಜೆನ್ನಿಫರ್ ಪ್ರಯಾಣಿಕರಾಗಿದ್ದಾರೆ. ನಗರದಲ್ಲಿ ತನ್ನ ಮೊದಲ ದಿನ ಜೆನ್ನಿಫರ್ ಆಟೋ ಡ್ರೈವರ್‌ನೊಂದಿಗೆ ಕನ್ನಡದಲ್ಲಿ ಮಾತನಾಡಲು ಹೆಣಗಾಡುತ್ತಾರೆ: “ನಾನು ದೇವರಾಜ ಮಾರ್ಕೆಟ್‌ಗೆ ಹೋಗಬೇಕು ಎಂದು ಬಹಳ ಕಷ್ಟದಿಂದ ಹೇಳುತ್ತಾರೆ.

ಆದರೆ ಒಂದು ತಿಂಗಳ ನಂತರ ಜೆನ್ನಿಫರ್ ಕನ್ನಡವನ್ನು ನಿರರ್ಗಳವಾಗಿ ಮಾತಾಡುತ್ತಾರೆ. ಆಟೋ ಚಾಲಕನಿಗೆ ದೇವರಾಜ ಮಾರ್ಕೆಟ್‌ಗೆ ಹೋಗಬೇಕು ಎಂದಾಗ, ಚಾಲಕ ದುಬಾರಿ ಬೆಲೆಯನ್ನು ಹೇಳಿದಾಗ, ಅವಳು ಕೋಪದಿಂದ ಹೇಳುತ್ತಾಳೆ: ‘ಏ ಹುಚ್ಚಾ? ಕಮ್ಮಿ ಮಾಡಿ! ನಿಮಗೆ ಹುಚ್ಚು ಹಿಡಿದಿದೆಯೇ? ದರವನ್ನು ಕಡಿಮೆ ಮಾಡಿ.” ಎಂದು ನಿರರ್ಗಳವಾಗಿ ಮಾತಾಡುತ್ತಾರೆ.

ಇದಕ್ಕೆ ಪ್ರತಿಯಾಗಿ ಎಜ್ರಾ ಕೂಡ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಜರ್ಮನ್ ಪ್ರಜೆಯಾಗಿರುವ ಜೆನ್ನಿಫರ್ ಈ ಹಿಂದೆ ಮೈಸೂರಿನ ದೇವಸ್ಥಾನದ ಹೊರಗೆ ತೆಂಗಿನಕಾಯಿ ಮಾರುತ್ತಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಶರದ್​ ಚಂದ್ರ ಎಂಬವರು ವಿಡಿಯೋವನ್ನು ಟ್ವೀಟರ್​ನಲ್ಲಿ ಟ್ವೀಟ್​ ಮಾಡಿದ್ದಾರೆ. ಸಾಕಷ್ಟು ಮೆಚ್ಚುಗೆ ಮತ್ತು ಶೇರ್​ ಮಾಡಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್​ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ