ಬೆಂಗಳೂರು, ಏ.11: ವಂದೇ ಭಾರತ್ ಲೋಕೋ-ಪೈಲಟ್ (vande bharat loco pilot ) ಕಿಶನ್ ಲಾಲ್ ಅವರಿಗೆ ಅದ್ಧೂರಿಯಾಗಿ ಬೆಂಗಳೂರು ನಿಲ್ದಾಣದಲ್ಲಿ ಬೀಳ್ಕೊಡುಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಲೋಕೋ-ಪೈಲಟ್ ಕಿಶನ್ ಲಾಲ್ ಕಣ್ಣೀರು ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಅವರ ನಿವೃತ್ತಿ ಕ್ಷಣವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ . ಈ ಸಮಯದಲ್ಲಿ ಅವರ ಕುಟುಂಬ ಹಾಗೂ ಸಿಬ್ಬಂದಿಗಳು ಇದ್ದರು. ಈ ಬಗ್ಗೆ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.
34 ವರ್ಷಗಳ ಕಾಲ ಲೋಕೋ ಪೈಲಟ್ ಆಗಿ ಸೇವೆ ಸಲ್ಲಿಸಿದ ಕಿಶನ್ ಲಾಲ್ ಮಾರ್ಚ್ನಲ್ಲಿ ನಿವೃತ್ತರಾಗಿದ್ದರು. ಕಿಶನ್ ಲಾಲ್ ಅವರು ನಿರ್ವಹಿಸುತ್ತಿದ್ದ ರೈಲು ಚೆನ್ನೈನಿಂದ ಬೆಂಗಳೂರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಹೂವಿನ ಹಾರ ಮತ್ತು ಉಡುಗೊರೆಗಳನ್ನು ನೀಡಿ ಸ್ವಾಗತಿಸಿದರು. ಈ ಕ್ಷಣವನ್ನು ಕಂಡು ಕಿಶನ್ ಲಾಲ್ ಕಣ್ಣೀರು ಹಾಕಿದ್ದಾರೆ. ತಮ್ಮ ಹೆಚ್ಚಿನ ಸಮಯವನ್ನು ರೈಲಿನಲ್ಲೇ ಕಳೆದಿರುವ ಕಿಶನ್ ಲಾಲ್ಗೆ ಇದು ಸ್ಮರಣಿಯ ಕ್ಷಣ ಎಂದು ಹೇಳಲಾಗಿದೆ. ಅವರು ನೃತ್ಯ, ಸಂಗೀತ, ಸಿಬ್ಬಂದಿಗಳ ಪ್ರೀತಿ ಹಾಗೂ ಸ್ವಾಗತದ ರೀತಿಯನ್ನು ಕಂಡು ಕಣ್ಣೀರು ಹಾಕಿದ್ದಾರೆ.
ಇನ್ನು ಇನ್‌ಸ್ಟಾಗ್ರಾಮ್ ಫೋಸ್ಟ್ನಲ್ಲಿ ಶೀರ್ಷಿಕೆಯೊಂದನ್ನು ಬರೆದುಕೊಳ್ಳಲಾಗಿದೆ. “ಕಿಶನ್ ಲಾಲ್ ಸರ್ ನಿವೃತ್ತಿ ಜೀವನದ ಶುಭಾಶಯಗಳು. ಭಾರತೀಯ ರೈಲ್ವೇಯಲ್ಲಿ ನಿಮ್ಮ ಅದ್ಭುತ ಸೇವೆಗೆ ಧನ್ಯವಾದಗಳು ಸರ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ, ನೀವು ಅತ್ಯುತ್ತಮ ನಿವೃತ್ತ ಜೀವನವನ್ನು ಹೊಂದಿದ್ದರ, ನೀವು ಬೆಂಗಳೂರಿನ ಅತ್ಯುತ್ತಮ ಲೋಕೋ-ಪೈಲಟ್‌ಗಳಲ್ಲಿ ಒಬ್ಬರು ಸರ್, ನಾವು ನಿಮ್ಮನ್ನು ಈ ರೈಲು ಟ್ರ್ಯಾಕ್‌ಗಳಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ . ಆಲ್ ದಿ ಬೆಸ್ಟ್ ಸರ್. ಕಿಶನ್ ಸರ್ ಕೊನೆಯ ಬಾರಿಗೆ SBC-MAS-SBC ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ 20608/20607 ನಲ್ಲಿ ಕೆಲಸ ಮಾಡಿದ್ದಾರೆ”.
ಇದನ್ನೂ ಓದಿ: ಮಗು ಹೀಗೆ ಹುಟ್ಟಲು ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸ ತಿಂದಿದ್ದೆ ಕಾರಣ ಎಂದ ತಾಯಿ
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್‌ಗೆ ಕಾಮೆಂಟ್ ಕೂಡ ಮಾಡಿದ್ದಾರೆ. ಕಿಶನ್ ಲಾಲ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಒಬ್ಬ ಬಳಕೆದಾರ ಒಳ್ಳೆಯ ವಿಡಿಯೋ. ನಾನು ಅವರೊಂದಿಗೆ ಚೆನ್ನೈನಿಂದ ಬೆಂಗಳೂರಿಗೆ ಪ್ರಯಾಣಿಸಿದ ನೆನಪನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ