ಆನೆಗಳು ನಿಜವಾಗಿಯೂ ಸಾದು ಪ್ರಾಣಿಗಳು. ಅವುಗಳು ಅಷ್ಟಾಗಿ ಯಾರಿಗೂ ತೊಂದರೆ ಕೊಡಲು ಹೋಗುವುದಿಲ್ಲ. ಸಿಟ್ಟು ಬಂದರೆ, ಮದವೇರಿದರೆ ಮಾತ್ರ ಮನುಷ್ಯರನ್ನು ಮಾತ್ರವಲ್ಲ, ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಎಸೆದು ರಂಪಾಟ ನಡೆಸುತ್ತವೆ. ಹೆಚ್ಚಿನವರು ಕಾಡಿನಲ್ಲಿರುವ ಆನೆಗಳು ಅಪಾಯಕಾರಿ, ಅದು ನಮಗೆ ತೊಂದರೆ ಕೊಡುತ್ತವೆ ಅಂತ ಭಾವಿಸುತ್ತಾರೆ. ಆದ್ರೆ ಆನೆಗಳು ಅಷ್ಟಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ. ಬದಲಿಗೆ ಕಾಡಿನ ಮಧ್ಯೆಯಲ್ಲಿರುವ ರಸ್ತೆಗಳಲ್ಲಿ ಹಣ್ಣು ತುಂಬಿದಂತಹ ಲಾರಿಗಳು ಓಡಾಡಿದರೆ ಅವುಗಳನ್ನು ಶಾಂತರೀತಿಯಲ್ಲೇ ಅಡ್ಡಗಟ್ಟಿ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಹೀಗೆ ಆನೆಗಳು ಲಾರಿಯಲ್ಲಿದ್ದ ಕಬ್ಬು, ಇತ್ಯಾದಿ ಹಣ್ಣುಗಳನ್ನು ತಿನ್ನುವಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಕಾಡಿನ ಮಧ್ಯೆ ಇರುವಂತಹ ರಸ್ತೆಯೊಂದರಲ್ಲಿ ಕೆಟ್ಟು ನಿಂತಿದ್ದ ಕಿತ್ತಳೆ ಹಣ್ಣು ತುಂಬಿದ್ದ ಟ್ರಕ್ ನಿಂದ ಆನೆಗಳ ಹಿಂಡೊಂದು, ನಮ್ಮ ಜಾಗದಲ್ಲಿ ಟ್ರಕ್ ನಿಲ್ಲಿಸಿದ್ದೀರಿ ಅಲ್ವಾ, ಅದಕ್ಕಾಗಿ ನಾವು ತೆರಿಗೆ ವಸೂಲಿ ಮಾಡ್ಲೇಬೇಕಲ್ವಾ ಎನ್ನುತ್ತಾ, ಯಾರಿಗೂ ತೊಂದರೆಯನ್ನು ಕೊಡದೆ ತಮ್ಮ ಪಾಡಿಗೆ ಟ್ರಕ್ನಲ್ಲಿದ್ದ ಕಿತ್ತಳೆ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿವೆ. ಈ ವಿಡಿಯೋ ಇದೀಗ ಎಲ್ಲರ ಮನ ಗೆದ್ದಿದೆ.
@westafrikanman ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ದಕ್ಷಿಣ ಆಫ್ರಿಕಾದ ಕಾಡೊಂದರ ಮಧ್ಯೆ ಕೆಟ್ಟು ನಿಂತಿದ್ದಂತಹ ಟ್ರಕ್ನಿಂದ ಆನೆಗಳು ಕಿತ್ತಳೆ ಹಣ್ಣುಗಳನ್ನು ತೆಗೆದುಕೊಂಡು ತಿನ್ನುತ್ತಿರುವಂತಹ ಮುದ್ದಾದ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಕಾಡಿನ ನಡುವೆ ಇರುವ ರಸ್ತೆಯ ಪಕ್ಕದಲ್ಲಿ ಕಿತ್ತಳೆ ಹಣ್ಣು ತುಂಬಿದ್ದ ಟ್ರಕ್ ಒಂದು ಕೆಟ್ಟು ನಿಂತಿರುತ್ತೆ. ಮತ್ತು ಆ ವಾಹನದ ಚಾಲಕ ಮತ್ತು ನಿರ್ವಾಹಕ ಕೆಟ್ಟು ಹೋಗಿದ್ದ ಟ್ರಕ್ ಚಕ್ರವನ್ನು ಸರಿ ಪಡಿಸುತ್ತಿರುತ್ತಾರೆ. ಅಷ್ಟು ಹೊತ್ತಿಗಾಗಲೇ ಅಲ್ಲಿಗೆ ಬಂದಂತಹ ಗಜರಾಜರ ಪಡೆಯೊಂದು ನಮ್ಮ ಜಾಗದಲ್ಲಿ ವಾಹನ ನಿಲ್ಲಿಸಿದ್ದೀರಿ ಅಲ್ವಾ, ಅದಕ್ಕಾಗಿ ನಾವು ತೆರಿಗೆ ವಸೂಲಿ ಮಾಡ್ಲೇಬೇಕಲ್ವಾ ಎನ್ನುತ್ತಾ, ಅಲ್ಲಿ ನಿಂತಿದ್ದ ಯಾರಿಗೂ ತೊಂದರೆಯನ್ನು ಕೊಡದೆ ತಮ್ಮ ಪಾಡಿಗೆ ಟ್ರಕ್ ನಿಂದ ಕಿತ್ತಳೆ ಹಣ್ಣುಗಳನ್ನು ತೆಗೆದು ತಿನ್ನುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: Viral Video: ಸ್ವಾಮಿ ನಿಷ್ಠೆ ಶ್ವಾನ: ಮಾಲೀಕನಿಗಾಗಿ ಪ್ರಾಣ ನೀಡಲು ಸಿದ್ಧ
ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಕಾಡಿನ ತೆರಿಗೆ ಸಂಗ್ರಾಹಕರುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪಾಪ ಆನೆಗಳು ಟ್ರಕ್ ಭಾರವನ್ನು ಕಡಿಮೆ ಮಾಡಲೆಂದು ಕಿತ್ತಳೆಯನ್ನು ತಿನ್ನುವ ಮೂಲಕ ಸಹಾಯ ಮಾಡುತ್ತಿದೆʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮನುಷ್ಯರು ಪ್ರಾಣಿಗಳಿಂದ ಎಲ್ಲವನ್ನು ಕಿತ್ತುಕೊಂಡಿದ್ದಾರೆ, ಈಗ ಆ ಪ್ರಾಣಿಗಳು ಆಹಾರವನ್ನು ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲʼ ಎಂದು ಹೇಳಿದ್ದಾರೆ. ಇನ್ನೂ ಹಲವರು ಈ ದೃಶ್ಯ ತುಂಬಾ ಮುದ್ದಾಗಿದೆ ಮತ್ತು ಹಾಸ್ಯಮಯವಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Mon, 22 January 24