
ಆನೆಗಳು (Elephants) ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಸೋಶಿಯಲ್ ಮೀಡಿಯಾದಲ್ಲಿ ಗಜರಾಜನ ಆಟ ತುಂಟಾಟದ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲಿ ತನ್ನ ಸ್ನೇಹಿತನ ಜತೆಗೆ ಆನೆಯೊಂದು ತುಂಟಾಟವಾಡುವುದರಲ್ಲಿ ಬ್ಯುಸಿಯಾಗಿದೆ. ಗಜರಾಜನು ಸೊಂಡಿಲಿನಿಂದ ನೀರು ಎರಚುತ್ತಾ ಶ್ವಾನದೊಂದಿಗೆ ಆಟ ಆಡಿದೆ. ಮುಗ್ಧ ಜೀವಿಗಳ ಈ ಪರಿಶುದ್ಧ ಗೆಳೆತನಕ್ಕೆ ನೆಟಿಗರು ಫುಲ್ ಫಿದಾ ಆಗಿದ್ದಾರೆ.
ಮೈಸೂರುಕೆಎ09ವೈಲ್ಡ್ ಲೈಫ್ (MYSOREKA09WILDLIFE) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮಾಣಿಕ್ಯ ತನ್ನ ಸ್ನೇಹಿತ ಡಾಲಿ ಜತೆಗೆ ಆಟ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಆನೆಯೊಂದು ತನ್ನ ಸೊಂಡಿಲಿನಿಂದ ಶ್ವಾನಕ್ಕೆ ನೀರು ಎರಚುತ್ತಾ ತುಂಟಾಟ ಆಡಿದೆ. ಗಜರಾಜನು ನೀರು ಎರಚುತ್ತಿದ್ದಂತೆ ಓಡಲು ಮುಂದಾಗಿರುವುದು ನೀವು ನೋಡಬಹುದು. ಅಲ್ಲೇ ಇದ್ದವರು ಈ ದೃಶ್ಯ ನೋಡಿ ನಗುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬುದ್ಧಿವಂತಿಕೆಯಿಂದ ಹೊರ ತೆಗೆದ ಆನೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾಗಿದೆ ಎಂದರೆ, ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಸುಮಧುರ ಗೆಳೆತನ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Mon, 16 February 26