AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬುದ್ಧಿವಂತಿಕೆಯಿಂದ ಹೊರ ತೆಗೆದ ಆನೆ

ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋಗಳು ಭಯಾನಕವೆನಿಸಿದರೆ, ಇನ್ನು ಕೆಲ ದೃಶ್ಯಗಳು ನಗೆಗಡಲಲ್ಲಿ ತೇಲಿಸಿ ಬಿಡುತ್ತವೆ. ಇದೀಗ ಕಲ್ಲಂಗಡಿ ಹಣ್ಣು ತಿನ್ನಲು ಆನೆ ನಡೆಸುತ್ತಿರುವ ಕಸರತ್ತಿನ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Video: ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬುದ್ಧಿವಂತಿಕೆಯಿಂದ ಹೊರ ತೆಗೆದ ಆನೆ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Jan 26, 2026 | 2:59 PM

Share

ಬದುಕಿನಲ್ಲಿ ಏನೇ ಸಮಸ್ಯೆಗಳು ಬರಲಿ, ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ಬಹಳ ಮುಖ್ಯ. ಪ್ರಾಣಿಗಳ ಕೆಲ ವಿಡಿಯೋಗಳು ಇದಕ್ಕೆ ಉದಾಹರಣೆಯಂತಿರುತ್ತವೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಮಾತು ಸತ್ಯ ಎನಿಸದೇ ಇರದು. ಆನೆಯೊಂದು (elephant) ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬಹಳ ಬುದ್ಧಿವಂತಿಕೆಯನ್ನು ತೆಗೆಯುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಆನೆಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಲೆಕ್ ಚೈಲರ್ಟ್ (lek chailert) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಆನೆಯೊಂದು ರಂಧ್ರದಲ್ಲಿ ಸಿಲುಕಿ ಕೊಂಡಿರುವ ಕಲ್ಲಂಗಡಿ ಹಣ್ಣನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿರುವ ದೃಶ್ಯವನ್ನು ಕಾಣಬಹುದು. ಸೊಂಡಿಲನ್ನು ಬಳಸಿ ಕಲ್ಲಂಗಡಿ ಹಣ್ಣನ್ನು ತೆಗೆಯಲು ಪ್ರಯತ್ನಿಸಿದ್ದು ಕೊನೆಗೆ ಈ ಪ್ರಯತ್ನದಲ್ಲಿ ಗೆದ್ದಿದೆ. ಹೊರತೆಗೆದ ಕಲ್ಲಂಗಡಿ ಹಣ್ಣನ್ನು ಬಾಯಿ ಚಪ್ಪರಿಸಿಕೊಂಡು ತಿಂದ ಆನೆಯನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Lek Chailert (@lek_chailert)

ಇದನ್ನೂ ಓದಿ: ಸೈಕಲ್ ಏರಿ ಹೊರಟ ಮಾಲೀಕನನ್ನು ತಡೆದು ನಿಲ್ಲಿಸಿದ ಗಜರಾಜ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬಹಳ ಬುದ್ಧಿವಂತ ಆನೆ ಎಂದಿದ್ದಾರೆ. ಮತ್ತೊಬ್ಬರು, ಸೃಷ್ಟಿಯಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅತಂತ್ಯ ಶಕ್ತಿಶಾಲಿ ಸೊಂಡಿಲು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ