AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಯಲ್‌ ಲೈಫ್‌ ಸ್ಪೈಡರ್‌ ಮ್ಯಾನ್;‌ ಹಗ್ಗದ ಸಹಾಯವಿಲ್ಲದೆಯೇ 508 ಮೀಟರ್ ಎತ್ತರದ ಕಟ್ಟಡವನ್ನೇರಿದ ಅಮೆರಿಕದ ರಾಕ್‌ ಕ್ಲೈಂಬರ್

ಅಮೆರಿಕದ ಫೇಮಸ್‌ ರಾಕ್‌ ಕ್ಲೈಂಬರ್ ಆಗಿರುವ ಅಲೆಕ್ಸ್ ಹೊನ್ನಾಲ್ಡ್ ತೈವಾನ್‌ನ ಐಕಾನಿಕ್ ತೈಪೆ 101 ಕಟ್ಟಡವನ್ನು ಏರುವ ಮೂಲಕ ಹೊಸ‌ ಇತಿಹಾಸ ಸೃಷ್ಟಿದ್ದಾರೆ. ಅವರು ಕ್ಲೈಂಬಿಂಗ್‌ ರೋಪ್‌ ಹಾಗೂ ಯಾವುದೇ ಸುರಕ್ಷತಾ ಪರಿಕರಗಳನ್ನು ಬಳಸದೆಯೇ 90 ನಿಮಿಷಗಳಲ್ಲಿ 508 ಮೀಟರ್‌ ಎತ್ತರದ ಕಟ್ಟಡವನ್ನು ಏರಿದ್ದು, ಇವರ ಸಾಧನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ರಿಯಲ್‌ ಲೈಫ್‌ ಸ್ಪೈಡರ್‌ ಮ್ಯಾನ್;‌ ಹಗ್ಗದ ಸಹಾಯವಿಲ್ಲದೆಯೇ 508 ಮೀಟರ್ ಎತ್ತರದ ಕಟ್ಟಡವನ್ನೇರಿದ ಅಮೆರಿಕದ ರಾಕ್‌ ಕ್ಲೈಂಬರ್
ಖ್ಯಾತ ರಾಕ್ ಕ್ಲೈಂಬರ್ ಅಲೆಕ್ಸ್ ಹೊನ್ನಾಲ್ಡ್
ಮಾಲಾಶ್ರೀ ಅಂಚನ್​
|

Updated on:Jan 26, 2026 | 6:46 PM

Share

ಸ್ಪೈಡರ್‌ ಮ್ಯಾನ್‌ ಸಿನಿಮಾವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಅದೆಷ್ಟೋ ಮಂದಿ ತಾವು ಕೂಡ ಬಂಡೆ, ಎತ್ತರದ ಕಟ್ಟಡಗಳನ್ನು ಏರುವಂತಹ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಇಂತಹ ಸಾಹಸಗಳನ್ನು ಮಾಡುವವರು ಕ್ಲೈಂಬಿಂಗ್‌ ರೋಪ್‌ಗಳನ್ನು ಬಳಸುತ್ತಾರೆ. ಆದ್ರೆ ಇದೀಗ ಅಮೆರಿಕದ ಖ್ಯಾತ ರಾಕ್ ಕ್ಲೈಂಬರ್ ಅಲೆಕ್ಸ್ ಹೊನ್ನಾಲ್ಡ್ (Alex Honnold) ಅವರು ಕ್ಲೈಂಬಿಂಗ್‌ ರೋಪ್‌ ಹಾಗೂ ಯಾವುದೇ ಸುರಕ್ಷತಾ ಪರಿಕರಗಳ ಸಹಾಯವಿಲ್ಲದೆಯೇ ತೈವಾನ್‌ನ ರಾಜಧಾನಿ ತೈಪೆಯಲ್ಲಿ ಐಕಾನಿಕ್ ತೈಪೆ 101  ಕಟ್ಟಡವನ್ನು ಏರಿದ್ದಾರೆ.  ಹೊನ್ನಾಲ್ಡ್ ಸುಮಾರು 90 ನಿಮಿಷಗಳಲ್ಲಿ ಈ ಆರೋಹಣವನ್ನು ಪೂರ್ಣಗೊಳಿಸಿದ್ದು, ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಕ್ಲೈಂಬಿಂಗ್‌ ರೋಪ್‌ ಸಹಾಯವಿಲ್ಲದೆಯೇ ಕಟ್ಟಡವನ್ನೇರಿದ ಅಲೆಕ್ಸ್ ಹೊನ್ನಾಲ್ಡ್:

ಭಾನುವಾರ (ಜನವರಿ 25) ತೈವಾನ್‌ನ ರಾಜಧಾನಿ ತೈಪೆಯಲ್ಲಿ 101 ಅಂತಸ್ತುಗಳನ್ನು ಹೊಂದಿರುವ 508 ಮೀಟರ್ (1,667 ಅಡಿ ಎತ್ತರದ) ತೈಪೆ 101 ಕಟ್ಟಡವನ್ನು ಅಮೆರಿಕದ ಖ್ಯಾತ ರಾಕ್ ಕ್ಲೈಂಬರ್ ಅಲೆಕ್ಸ್ ಹೊನ್ನಾಲ್ಡ್ ಕ್ಲೈಂಬಿಂಗ್‌ ರೋಪ್‌ ಸಹಾಯವಿಲ್ಲದೆಯೇ ಏರಿದ್ದಾರೆ.  ಹೊನ್ನಾಲ್ಡ್ ಸುಮಾರು 90 ನಿಮಿಷಗಳಲ್ಲಿ ಆರೋಹಣವನ್ನು ಪೂರ್ಣಗೊಳಿಸಿದರು. ಈ ಅಪಾಯಕಾರಿ ಆರೋಹಣವನ್ನು ವೀಕ್ಷಿಸಲು ಕಟ್ಟಡದ ಮುಂಭಾಗದಲ್ಲಿ ಸಾವಿರಾರು ಮಂದಿ ಸೇರಿದ್ದರು.

ಅವರು ಕಟ್ಟಡದ ಒಂದು ಮೂಲೆಯಿಂದ ತೈಪೆ 101 ಅನ್ನು ಹತ್ತಲು ಪ್ರಾರಂಭಿಸಿದರು. ಅವರು ಕಟ್ಟಡದ ಸಣ್ಣ L-ಆಕಾರದ ಅಂಚುಗಳ ಮೇಲೆ ಪಾದಗಳನ್ನಿಡುವ ಮೂಕಲ ಹಗ್ಗದ ಸಹಾಯವಿಲ್ಲದೆ ಕಟ್ಟಡವನ್ನು ಏರಿದ್ದಾರೆ. ಈ ಸಾಹಸದ ಅತ್ಯಂತ ಸವಾಲಿನ ಭಾಗವೆಂದರೆ “ಬ್ಯಾಂಬೂ ಬಾಕ್ಸಸ್” ಎಂದು ಕರೆಯಲ್ಪಡುವ ಮಧ್ಯದ 64 ಮಹಡಿಗಳು. ಇದು ಕಟ್ಟಡವನ್ನು ಪ್ರತ್ಯೇಕಿಸುವ ವಿಶಿಷ್ಟ ವಿನ್ಯಾಸವಾಗಿದ್ದು, ಈ ಭಾಗದ  ಮಹಡಿಗಳಿಗೆ ಹತ್ತುವುದು ಸವಾಲಿನ ಸಂಗತಿಯಾಗಿತ್ತು. ಆದರೂ ಛಲ ಬಿಡದೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಕಟ್ಟಡದ ತುತ್ತ ತುದಿಗೆ ತಲುಪಿದ್ದಾರೆ. ಅಲೆಕ್ಸ್ ಹೊನ್ನಾಲ್ಡ್ ತೈಪೆ 101 ಶಿಖರವನ್ನು ಹಗ್ಗವಿಲ್ಲದೆ ಏರಿದ ಮೊದಲ ವ್ಯಕ್ತಿ. ಇದಕ್ಕೂ ಮೊದಲು, ಫ್ರೆಂಚ್ ಪರ್ವತಾರೋಹಿ ಅಲೈನ್ ರಾಬರ್ಟ್ 2004 ರಲ್ಲಿ ಹಗ್ಗದ ಮೂಲಕ ಇದೇ ಕಟ್ಟಡವನ್ನು ಏರಿದ್ದರು.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಜೀವನವನ್ನು ಆನಂದಿಸಲು ಬೆಂಗಳೂರನ್ನು ಹೀಗೆ ಬಳಸಿಕೊಳ್ಳಿ ಎಂದ ಮಹಿಳೆ

ಈ ರೋಮಾಂಚಕಾರಿ ಆರೋಹಣವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು, ಇದರಿಂದಾಗಿ ಪ್ರಪಂಚದಾದ್ಯಂತದ ಜನರಿಗೆ ಈ ಅಪಾಯಕಾರಿ ಸಾಹಸವನ್ನು ವೀಕ್ಷಿಸಲು ಒಂದು ಅವಕಾಶ ಸಿಕ್ಕಿತು.  ಅಲೆಕ್ಸ್ ಹೊನ್ನಾಲ್ಡ್ ಹಗ್ಗವಿಲ್ಲದೆ ಈ ಅಸಾಮಾನ್ಯ ಆರೋಹಣವನ್ನು ಮಾಡಿದ್ದು, ಈ ಮೂಲಕ  ಈ ರೀತಿಯಲ್ಲಿ ತೈಪೆ 101 ಕಟ್ಟಡವನ್ನು ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಹೊನ್ನಾಲ್ಡ್ ಪಾತ್ರರಾದರು.

ಅಲೆಕ್ಸ್ ಹೊನ್ನಾಲ್ಡ್ ಅವರ ಈ ಸಾಧನೆ ಹೊಸದೇನಲ್ಲ. ಈ ಹಿಂದೆ, ಹೊನ್ನಾಲ್ಡ್ ಅಮೆರಿಕದ ಪ್ರಸಿದ್ಧ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಎಲ್ ಕ್ಯಾಪಿಟನ್ ಕಟ್ಟಡವನ್ನು ಹಗ್ಗವಿಲ್ಲದೆ ಹತ್ತುವುದರ ಮೂಲಕ ಇತಿಹಾಸ ನಿರ್ಮಿಸಿದ್ದರು. ಹೀಗೆ ಇವರು ತಮ್ಮ ಧೈರ್ಯಶಾಲಿ ಕ್ಲೈಂಬಿಂಗ್‌ಗಳಿಗೆ  ಹೆಸರುವಾಸಿಯಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Mon, 26 January 26

ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು
ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ?
ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ?
ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್!
ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್!
ಕೇಸರಿ ಧ್ವಜ ವಿವಾದ: ಉಡುಪಿ ಜಿಲ್ಲಾಧಿಕಾರಿ ಬೆಂಬಲಕ್ಕೆ ನಿಂತ ಹೆಬ್ಬಾಳ್ಕರ್!
ಕೇಸರಿ ಧ್ವಜ ವಿವಾದ: ಉಡುಪಿ ಜಿಲ್ಲಾಧಿಕಾರಿ ಬೆಂಬಲಕ್ಕೆ ನಿಂತ ಹೆಬ್ಬಾಳ್ಕರ್!
ನಾಳೆ ಕಾಂಗ್ರೆಸ್​ನಿಂದ ರಾಜಭವನ ಚಲೋ: ಡಿಕೆಶಿ ಹೇಳಿದ್ದೇನು ನೋಡಿ
ನಾಳೆ ಕಾಂಗ್ರೆಸ್​ನಿಂದ ರಾಜಭವನ ಚಲೋ: ಡಿಕೆಶಿ ಹೇಳಿದ್ದೇನು ನೋಡಿ
ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು
ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು