ಮನೆಯಲ್ಲಿ ನಾವು ಅಡುಗೆ ಮಾಡುವಾಗ ಬಹಳ ಜಾಗರೂಕತೆಯಿಂದ ಮಾಡುತ್ತೇವೆ. ಆದರೆ ಹೊಟೇಲ್ಗಳಲ್ಲಿ, ರೆಸ್ಟೋರೆಂಡ್ಗಳಲ್ಲಿ ಫಿಜ್ಜಾ ಹಟ್ಗಳಲ್ಲಿ ಯಾವ ರೀತಿ ಆಹಾರ (Food) ಸಿದ್ಧಪಡಿಸುತ್ತಾರೆ ಎಂದು ಯಾರಿಗೆ ಗೊತ್ತು? ಈ ಮಾತನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ, ವೆಜ್ ಬರ್ಗರ್ (Burger)ನಲ್ಲಿ ಸರಿಸೃಪವೊಂದು ಕಂಡುಬಂದಿದ್ದು, ಇದರ ವಿಡಿಯೋ (Video) ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: IND vs SA: ಹೊಸ ಹೇರ್ ಸ್ಟೈಲ್ನಲ್ಲಿ ಮಿಂಚಿದ ಚಹಾಲ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್
ViralHog ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಗಮನಿಸಿದಾಗ, ವ್ಯಕ್ತಿಯೊಬ್ಬರು ಬರ್ಗರ್ ಆರ್ಡರ್ ಮಾಡಿದ್ದಾರೆ. ಅದರ ಬನ್ನ ಹಿಂಭಾಗದಲ್ಲಿ ಸರಿಸೃಪ ಹಲ್ಲಿಯೊಂದು ಪತ್ತೆಯಾಗಿದೆ. ಆ ಹಲ್ಲಿಯು ಬನ್ಗೆ ಅಂಟಿಕೊಂಡು ಅಸ್ತಿಪಂಜರದಂತೆ ಆಗಿದೆ. ಮುಂಭಾಗದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಮುಖವನ್ನು ಒಂಥರಾ ಮಾಡಿಕೊಂಡು ಜ್ಯೂಸ್ ಕುಡಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ವೀಕ್ಷಿಸಿ:
There goes my appetite! ??? #viralhog #burger #lizard #nothanksimfull pic.twitter.com/4TgW7CxPtF
— ViralHog (@ViralHog) May 28, 2022
ಇದನ್ನೂ ಓದಿ: ”ಯಾರು ನೋಡದ ಹಾಗೆ ನೃತ್ಯ ಮಾಡಿ”: ಕರಡಿ ಮರಿಯ ಕುಣಿತ ವಿಡಿಯೋ ವೈರಲ್
ಸಾಮಾನ್ಯವಾಗಿ ಸ್ವಚ್ಛವಲ್ಲದ ಸ್ಥಳದಲ್ಲಿ ಅಡುಗೆಗಳನ್ನು ಮಾಡಿದರೆ ಇಂಥ ಸಮಸ್ಯೆಗಳು ಕಂಡುಬರುತ್ತದೆ. ಕೆಲವೊಮ್ಮೆ ಮನೆಗಳಲ್ಲೂ ಜಿರಳೆಗಳು, ಜಿಗಣೆಗಳು, ನೊಣ, ಚಿಟ್ಟೆಗಳು ಪದಾರ್ಥಗಳಿಗೆ ಬೀಳುತ್ತವೆ. ಹೀಗಾಗಿ ಆಹಾರ ತಯಾರಿಸುವಾಗ ಸ್ಥಳವನ್ನು ಆದಷ್ಟು ಸ್ವಚ್ಛವಾಗಿರಿಸಬೇಕು ಮತ್ತು ಯಾವುದೇ ಸರಿಸೃಪಗಳು ಪದಾರ್ಥಗಳಿಗೆ ಬೀಳದಂತೆ ಎಚ್ಚರವಹಿಸಬೇಕು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Fri, 3 June 22