”ಯಾರು ನೋಡದ ಹಾಗೆ ನೃತ್ಯ ಮಾಡಿ”: ಕರಡಿ ಮರಿಯ ಕುಣಿತ ವಿಡಿಯೋ ವೈರಲ್
ಅತಿಯಾಗಿ ಉತ್ಸುಕವಾಗಿರುವ ಕರಡಿ (Bear) ಮರಿಯೊಂದು ಕುಣಿಯುತ್ತಿರುವ ವಿಡಿಯೋ ನೆಟ್ಟಿಜನ್ಗಳ ಮನಗೆದ್ದಿದ್ದು, ಭಾರಿ ವೈರಲ್ ಆಗುತ್ತಿದೆ.
ಪ್ರಾಣಿಗಳು ನೃತ್ಯ ಮಾಡುವುದನ್ನು, ಸಾಹಸ ಮಾಡುವುದನ್ನು ಸರ್ಕಸ್ಗಳಲ್ಲೋ ಅಥವಾ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಇದೀಗ ಅತಿಯಾಗಿ ಉತ್ಸುಕವಾಗಿರುವ ಕರಡಿ (Bear) ಮರಿಯೊಂದು ಕುಣಿಯುತ್ತಿರುವ (Dance) ವಿಡಿಯೋ (Video) ನೆಟ್ಟಿಜನ್ಗಳ ಮನಗೆದ್ದಿದ್ದು, ಹಲವುರು ವಿಭಿನ್ನ ರೀತಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕರಡಿ ಮರಿ ಕುಣಿತದ ವಿಡಿಯೋವನ್ನು ಯೋಧ ಫಾರ್ಎವರ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ”ಯಾರು ನೋಡದ ಹಾಗೆ ನೃತ್ಯ ಮಾಡಿ” ಎಂಬ ಶೀರ್ಷಿಕೆ ನೀಡಿದ್ದಾರೆ. ವಿಡಿಯೋದಲ್ಲಿರುವಂತೆ, ಅತಿಯಾಗಿ ಉತ್ಸುಕವಾಗಿರುವ ಕರಡಿ ಮರಿ ಜಿಗಿಯುತ್ತಾ ತನ್ನ ಹಿಂಗಾಲುಗಳ ಮೇಲೆ ನಿಂತಿರುವುದು ಅಂತರ್ಜಾಲದ ಗಮನವನ್ನು ಸೆಳೆದಿದೆ. 13 ಸೆಕೆಂಡ್ ಉದ್ದದ ಕ್ಲಿಪ್‌ನಲ್ಲಿ ಮರಿ ಕರಡಿ ಯಾರೂ ನೋಡದ ಹಾಗೆ ನೃತ್ಯ ಮಾಡುವುದನ್ನು ಕಾಣಬಹುದು. ವಿಡಿಯೋ ವೈರಲ್ ಆಗಿ ಬರೋಬ್ಬರಿ 2.5 ಮಿಲಿಯನ್ ಹೃದಯಗಳನ್ನು ಗೆದ್ದುಕೊಂಡಿದ್ದು, twitterನಲ್ಲಿಉತ್ತಮ ಪ್ರತಿಕ್ರಿಯೆಗಳನ್ನು ಪ್ರೇರೇಪಿಸಿದೆ.
Dance like nobody's watching…???? pic.twitter.com/GoEr16oog2
— ?o̴g̴ (@Yoda4ever) June 2, 2022
ಇದನ್ನೂ ಓದಿ: Viral Video: ಅಯ್ಯಯ್ಯೋ… ಮಹಿಳೆಯ ವಿಡಿಯೋ ವೈರಲ್, ನೀವೂ ನೋಡಿ ನಕ್ಕು ಬಿಡಿ
”ಮೋಜಿನ ಕರಡಿ ಕಥೆ! ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಹ್ಯಾರಿ ಕೋಲ್ಬೋರ್ನ್ ಎಂಬ ಕೆನಡಾದ ಸೈನಿಕನು ಬೇಟೆಗಾರನಿಂದ $20ಕ್ಕೆ ಖರೀದಿಸಿದ ಕಪ್ಪು ಕರಡಿ ಮರಿಯನ್ನು ಸಾಕಿದ್ದನು. “ವಿನ್ನಿ” ಎಂದು ಹೆಸರಿಟ್ಟಿದ್ದನು. ನಾವು ಈಗ ಈ ಕರಡಿಯನ್ನು ವಿನ್ನಿ ದಿ ಪೂಹ್ ಎಂದು ತಿಳಿದಿದ್ದೇವೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
”ಪ್ರಾಣಿಗಳು ಕೂಡ ನೃತ್ಯ ಮಾಡಲು ಇಷ್ಟಪಡುತ್ತವೆ ಮತ್ತು ಇದು ಮನಸ್ಥಿತಿಯನ್ನು ಹೆಚ್ಚಿಸುತ್ತದೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋಗೆ ಬಂದ ಕೆಲವು ನೆಟ್ಟಿಜನ್ಗಳ ಉತ್ತಮ ಪ್ರತಿಕ್ರಿಯೆಗಳು ಇಲ್ಲಿವೆ:
Fun bear story! During World War I, a Canadian soldier named Harry Colebourn made a pet of a black bear cub he bought from a hunter for $20. He named it Winnipeg—or “Winnie” for short. We now know this bear as Winnie the Pooh. Full story here: https://t.co/tMWw35tuAa pic.twitter.com/xXMBU0QSsN
— DenvilleCommunity (@iDenville) June 2, 2022
ಇದನ್ನೂ ಓದಿ: Trending: ಮೀನುಗಾರಿಕೆ ವೇಳೆ ಮೀನುಗಾರನ ಬಾಯಿಯೊಳಗೆ ನುಗ್ಗಿದ ಮೀನು! ಮುಂದೇನಾಯ್ತು ಗೊತ್ತಾ?
Even animals like to dance and it really lifts the mood?❤️???? pic.twitter.com/aZHFnMIw5i
— vivaneil (@vivaneil1234) June 2, 2022
ಇದನ್ನೂ ಓದಿ: Viral Video: ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಕೆಟ್ಟು ನಿಂತ ಟ್ರ್ಯಾಲಿ; ರೈಡರ್ಗಳು ಕಂಗಾಲು
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Fri, 3 June 22