
Delhi: ದೆಹಲಿಯ ಮೆಟ್ರೋ ಒಂದಿಲ್ಲಾ ಒಂದು ವಿಷಯಕ್ಕೆ ಪ್ರತೀದಿನ ಸುದ್ದಿಯಲ್ಲಿರುತ್ತದೆ. ಅದರಲ್ಲಿಯೂ ರೀಲಿಗರ ಹಾವಳಿಯಂತೂ ಹೇಳತೀರದು. ಆದರೆ ಈವತ್ತು ಸುದ್ದಿಯಲ್ಲಿರುವ ಈ ವಿಡಿಯೋ ಮಾತ್ರ ಹೆದರಿಕೆ ಹುಟ್ಟಿಸುವಂತಿದೆ. ಒಬ್ಬ ಯುವಕ ಲೇಡೀಸ್ ಕೋಚ್ನಲ್ಲಿ (Ladies Coach) ನುಗ್ಗಿದ್ದಾನೆ. ಅಲ್ಲಿದ್ದ ಯುವತಿಯರು, ಮಹಿಳೆಯರು ಅವನನ್ನು ಪ್ರಶ್ನಿಸಿದ್ದಾರೆ ಮತ್ತು ಹೊರಹೋಗುವಂತೆ ಹೇಳಿದ್ದಾರೆ. ಅದಕ್ಕೆ ಅವನು ‘ಯಾರನ್ನು ಕರೀತೀಯೋ ಕರೀ’ ಎಂದು ಒರಟಾಗಿ ಉತ್ತರಿಸಿದ್ದಾನೆ ಮತ್ತು ತೀವ್ರ ವಾಗ್ವಾದಕ್ಕೂ ಬಿದ್ದಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ದೆಹಲಿ ಮೆಟ್ರೊದ ಬಗ್ಗೆ ನೆಟ್ಟಿಗರು ಮತ್ತೆ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : Viral Video: ಲೈವ್ನಲ್ಲಿ ಆ್ಯಂಕರ್ಗೆಳತಿಯ ಬಳಿ ಪ್ರೇಮನಿವೇದನೆ ಮಾಡಿಕೊಂಡ ರಿಪೋರ್ಟರ್ಗೆಳೆಯ
ದೆಹಲಿ ಸ್ಥಳೀಯ ಪ್ರಯಾಣಿಕರಿಗೆ ವರದಾನವೆನ್ನಿಸಿದ್ದ ಮೆಟ್ರೋ ದಿನೇದಿನೇ ಅನವಶ್ಯಕ ಸಂಗತಿಗಳಿಂದಾಗಿ ಕುಖ್ಯಾತಿಗೊಳ್ಳುತ್ತಿದೆ. ಈ ವಿಡಿಯೋದಲ್ಲಿ ಈ ಯುವಕ ಲೇಡಿಸ್ ಕೋಚ್ ಪ್ರವೇಶಿಸಿದ್ದೇ ಮತ್ತೀಗ ನೆಟ್ಟಿಗರ ಕಣ್ಣನ್ನು ಕೆಂಪಾಗಿಸಿದೆ. ಈ ಕೋಚ್ನಿಂದ ಹೊರಹೋಗುವಂತೆ ಅಲ್ಲಿದ್ದ ಮಹಿಳೆಯರೆಲ್ಲ ಕೇಳಿಕೊಂಡರೂ ಆತ ಸಿನಿಮೀಯ ಶೈಲಿಯಲ್ಲಿ ಅವರೆಲ್ಲರ ವಿರುದ್ಧ ಜಗಳಕ್ಕೆ ಬಿದ್ದಿದ್ದಾನೆ.
ಸುಮಾರು ಐದು ಗಂಟೆಗಳ ಹಿಂದೆ X ನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 38,000 ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ದೆಹಲಿ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಂಥ ದುರ್ವರ್ತನೆಯ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋದ ಈ ಕಥೆಗಳಿಗೆ ಕೊನೆಯೇ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮೆಟ್ರೋ ಕ್ರಮೇಣ ಪೋಕರಿಗಳ ತಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು
ಅವ ಕುಡಿದಿದ್ದಾನೆ ಅದಕ್ಕೆ ಹೀಗೆ ವರ್ತಿಸುತ್ತಿದ್ದಾನೆ ಎಂದಿದ್ದಾರೆ ಒಬ್ಬರು. ಮಹಿಳೆಯರಿಗೆ ಎಲ್ಲಿಯೂ ಸುರಕ್ಷತೆಯೇ ಇಲ್ಲ! ಎಂದಿದ್ದಾರೆ ಮತ್ತೊಬ್ಬರು. ಅದು ಹೇಗೆ ಇವರು ಹೀಗೆಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಾರೆ? ಪೊಲೀಸರು ಮತ್ತು ಸಿಸಿಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು.
ಒಟ್ಟಾರೆಯಾಗಿ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:11 pm, Fri, 25 August 23