AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪುಣ್ಯಾತ್ಮ ಕಣಯ್ಯಾ ನೀನು; ಚರಂಡಿಗೆ ಬಿದ್ದ ನಾಯಿಮರಿಗಳನ್ನು ರಕ್ಷಿಸಿದ ವ್ಯಕ್ತಿ

ಈಗಿನ ಕಾಲದಲ್ಲಿ ಮಾನವೀಯತೆ ಅನ್ನೋದು ಮರೆಯಾಗಿದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಇದಕ್ಕೆ ತದ್ವಿರುದ್ಧವಾಗಿದೆ ಈ ದೃಶ್ಯ. ವ್ಯಕ್ತಿಯೊಬ್ಬರು ಚರಂಡಿಗೆ ಬಿದ್ದ ನಾಯಿ ಮರಿಗಳನ್ನು ರಕ್ಷಿಸಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯ ಒಳ್ಳೆತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಪುಣ್ಯಾತ್ಮ ಕಣಯ್ಯಾ ನೀನು; ಚರಂಡಿಗೆ ಬಿದ್ದ ನಾಯಿಮರಿಗಳನ್ನು ರಕ್ಷಿಸಿದ ವ್ಯಕ್ತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 14, 2026 | 4:45 PM

Share

ಮೂಕ ಪ್ರಾಣಿಗಳು ಗುಣದಲಿ ಮೇಲು ಎನ್ನುವ ಮಾತಿದೆ. ನೀವು ಅವುಗಳಿಗೆ ಪ್ರೀತಿ, ಕಾಳಜಿ ತೋರಿದರೆ ಜೀವನ ಪರ್ಯಂತ ಮರೆಯಲ್ಲ. ಇದೀಗ ವ್ಯಕ್ತಿಯೊಬ್ಬರು ಕೊಳಚೆಯ ಹಂಗು ತೊರೆದು ಚರಂಡಿಗೆ ಬಿದ್ದ ನಾಯಿಮರಿಗಳನ್ನು (puppies) ರಕ್ಷಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂಕಪ್ರಾಣಿಗಳ ಜೀವ ಉಳಿಸಿದ ವ್ಯಕ್ತಿಯ ಈ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

ಚರಂಡಿಗೆ ಬಿದ್ದ ನಾಯಿಮರಿಗಳ ರಕ್ಷಣೆ

ಸೋಮನಾಥ್ (somanath) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ನಾಯಿಮರಿಗಳು ಚರಂಡಿಗೆ ಬಿದ್ದಿರುವುದನ್ನು ಕಾಣಬಹುದು. ಮೇಲೆ ಬರಲು ಒದ್ದಾಡುತ್ತಿದ್ದ ನಾಯಿಮರಿಗಳನ್ನು ವ್ಯಕ್ತಿ ಗಮನಿಸಿದ್ದಾರೆ. ಆ ತಕ್ಷಣವೇ ಚರಂಡಿಗಿಳಿದು ಈ ವ್ಯಕ್ತಿ ನಾಯಿ ಮರಿಗಳನ್ನು ರಕ್ಷಿಸಿದ್ದಾರೆ. ಇದನ್ನು ನೋಡಿದ ತಾಯಿ ಶ್ವಾನವು ಓಡೋಡಿ ಬಂದು ತನ್ನ ಕಂದಮ್ಮಗಳನ್ನು ಸೇರಿಕೊಂಡಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಚೇರ್ ಒಳಗೆ ತಲೆ ಸಿಲುಕಿಕೊಂಡು ಒದ್ದಾಡಿದ ಶ್ವಾನ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಗೆ ಆ ದೇವರು ಒಳ್ಳೆಯ ಮಾಡಲಿ ಎಂದಿದ್ದಾರೆ. ಇನ್ನೊಬ್ಬರು, ಪುಣ್ಯಾತ್ಮರು ನೀವು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More