ಫ್ಲೋರಿಡಾದ ವಾಲ್ಟರ್ ಹಿಕಾಕ್ಸ್ ಎನ್ನುವ ವ್ಯಕ್ತಿ ವಿಶೇಷ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾನೆ. ಅವನು ತನ್ನ ಸಾಕು ನಾಯಿಯನ್ನು ಉಳಿಸಲು ಕ್ರೂರವಾದ ಕರಡಿಯೊಂದಿಗೆ ಹೋರಾಡಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಮ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಸುಮಾರು 1ಲಕ್ಷ ವೀಕ್ಷಣೆಯನ್ನು ಪಡೆದುಕೊಮಡಿದೆ. ಫ್ಲೋರಿಡಾದ ಡೇಟೋನಾ ಬೀಚ್‌ನಲ್ಲಿರುವ ಹಿಕಾಕ್ಸ್ ಮನೆಯಲ್ಲಿ ಈ ಘಟನೆ ನಡೆದಿದೆ.
ಕರಡಿಯೊಂದು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಹಿಕಾಕ್ಸ್ ತನ್ನ ಸಾಕು ನಾಯಿಗಳ ರಕ್ಷಣೆಗೆ ಮುಂದಾಗಿರುವುದನ್ನು ದೃಶ್ಯಾದಲ್ಲಿ ಕಾಣಬಹುದಾಗಿದೆ. ಅವನು ಕ್ರೂರ ಕರಡಿಯನ್ನು ದೂರ ತಳ್ಳಲು ಪ್ರಯತ್ನಿಸಿದರು ಕರಡಿ ಮತ್ತೆ ಹಲ್ಲೆ ಮಾಡಿದೆ. ಈ ಸಂದರ್ಭದಲ್ಲಿ ಹಿಕಾಕ್ಸ್ನಿಗೆ ಕೆಲವು ಗಾಯಗಳಾಗಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಕರಡಿ ಮತ್ತೆ ಮನೆಯೊಳಗೆ ಪ್ರವೇಶಿಸದಂತೆ ಅದನ್ನು ತಡೆಯಲು ಹಿಕಾಕ್ಸ್ ಅಲ್ಲೇ ಪಕ್ಕದಲ್ಲಿರುವ ಬೆಂಚ್‌ನೊಂದಿನ್ನು ಬಾಗಿಲಿಗೆ ಬ್ಯಾರಿಕೇಡ್ ಮಾಡಲು ಪ್ರಯತ್ನಿಸಿದ್ದಾನೆ. ಸಿಸಿಟಿವಿ ಫೂಟೇಜ್‌ನಲ್ಲಿ ಅವನು ತನ್ನ ಹೆಂಡತಿ ಕೆರ್ರಿಗೆ “ಓ ಮೈ ಗಾಡ್, ನನ್ನ ಮೇಲೆ ಕರಡಿ ದಾಳಿ ಮಾಡಿದೆ” ಎಂದು ಕೂಗುವುದನ್ನು ಕೇಳಬಹುದಾಗಿದೆ.
ತನ್ನ ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಹಿಕಾಕ್ಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು ಇವನ್ನು “ವರ್ಷದ ನಾಯಿಯ ತಂದೆ” ಎಂದು ಕರೆದರೇ, ಇತರರು ಅವನು ಮತ್ತು ಅವನ ಕುಟುಂಬದ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದ್ದಾರೆ.
ಕಳೆದ ವಾರದಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಕರಡಿ ದಾಳಿ ಇದಾಗಿದೆ ಎಂದು ಡೇಟೋನಾ ಬೀಚ್ ಪೊಲೀಸರು ಖಚಿತಪಡಿಸಿದ್ದಾರೆ. ಮಹಿಳೆಯೊಬ್ಬರು ತನ್ನ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋದಾಗ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: