ಮೈಮೇಲೆ ಹಚ್ಚೆ ಹಾಕಿಸಿಕೊಂಡ (reticulated) ಹಾಗೆ ಕಾಣುವ ಹೆಬ್ಬಾವು (python) ಸರ್ಪಜಾತಿಯಲ್ಲೇ ಭಾರಿಗಾತ್ರ ಮತ್ತು ಅತಿ ಉದ್ದನೆಯ ಹಾವು. ಹೆಬ್ಬಾವುಗಳು ಬೇಟೆಯಾಡುವ ರೀತಿ ಭಿನ್ನ. ಅದರ ಬಗ್ಗೆ ಆಮೇಲೆ ಮಾತಾಡೋಣ. ಮೊದಲು ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇಲ್ಲಿ ಕಾಣುವ ಕುಟುಂಬವು ಹೆಬ್ಬಾವೊಂದನ್ನು ಸಾಕಿದೆ. ವ್ಯಕ್ತಿಯೊಬ್ಬ ಪ್ರಾಯಶಃ ಆಹಾರ ನೀಡಲು ಹಾವನ್ನಿಟ್ಟಿರುವ ಬೋನಿನ ಬಾಗಿಲು ತೆರೆದು ಅದರ ಮುಂದೆ ಕೂತಿದ್ದಾನೆ. ಆಗ ಇದಕ್ಕಿದ್ದಂತೆ ಸರೀಸೃಪ (reptile) ವ್ಯಕ್ತಿಯ ಮೇಲೆ ಆಕ್ರಮಣ ಮಾಡುತ್ತದೆ, ‘laris_a9393’ ಎನ್ನುವವರು ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನ ಇದನ್ನು ವೀಕ್ಷಿಸಿ ತಮಗೆ ತೋಚಿದ್ದನ್ನು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋದಲ್ಲಿ ನಾವು ನೋಡುವ ಹಾಗೆ ಹಾವು ವ್ಯಕ್ತಿಯ ತಲೆಯನ್ನು ಗಟ್ಟಿಯಾಗಿ ಹಿಡಿದುಬಿಡುತ್ತದೆ. ಬಗಲಲ್ಲಿ ಮಗುವನ್ನೆತ್ತಿಕೊಂಡು ಓಡಾಡುತ್ತಿರುವ ಮಹಿಳೆಯೊಬ್ಬಳು ಅವನ ನೆರವಿಗೆ ಧಾವಿಸುತ್ತಾಳೆ. ಅವರಿಬ್ಬರ ಚೀರಾಟ ಕೇಳಿ ಮನೆಯಲ್ಲಿದ್ದ ಉಳಿದ ಜನ ಕೂಡ ಹೊರಗೋಡಿ ಬಂದು ವ್ಯಕ್ತಿಯ ತಲೆಯಿಂದ ಹಾವನ್ನು ಬಿಡಿಸುವ ಪ್ರಯತ್ನ ಮಾಡುತ್ತಾರೆ, ಅವರ ನಾಯಿ ಅಸಹಾಯಕತೆಯಿಂದ ಅತ್ತಿಂದಿತ್ತ ಓಡಾಡುತ್ತದೆ.
ಹಾವನ್ನು ಬಿಡಿಸುವ ಪ್ರಯತ್ನಗಳು ವಿಫಲಾವಾದಂತೆಲ್ಲ ವ್ಯಕ್ತಿಯ ಕಿರುಚಾಟ ಹೆಚ್ಚುತ್ತದೆ. ಅವನು ಗಾಬರಿ ಮತ್ತು ನೋವಿನಿಂದ ಚೀರುತ್ತಾನೆ. ಹಾವಿಗೆ ಹೊಡಿಬಡಿ ಮಾಡಿದರೂ ಅದು ಪಟ್ಟು ಸಡಿಲಿಸುವುದಿಲ್ಲ. ಒಂದಿಬ್ಬರು ಅದರ ಬಾಯಿಯ ಬಳಿ ಬಟ್ಟೆ ಹಾಕಿ ಬಿಡಿಸಲು ಪ್ರಯತ್ನಿಸುತ್ತಾರೆ. ಮುಂದೇನಾಯಿತು ಅನ್ನೋದು ನಮಗೆ ಗೊತ್ತಿಲ್ಲ ಮಾರಾಯ್ರೇ.
ಇದನ್ನೂ ಓದಿ: ತುಮ್ ಹೀ ಆನಾ; ರೈಲಿನಲ್ಲಿ ಹಾಡುತ್ತಿರುವ ಈ ಹಿರಿಯರ ವಿಡಿಯೋ ವೈರಲ್; ಕುನಾಲ್ ವರ್ಮಾ ಪ್ರತಿಕ್ರಿಯೆ
ಹೆಬ್ಬಾವುಗಳು ಸಾಮಾನ್ಯವಾಗಿ ತಮ್ಮ ಬೇಟೆಯನ್ನು ಉಸಿರುಗಟ್ಟಿಸಿ ಸಾಯಿಸುತ್ತವೆ ಅಥವಾ ಹೃದಯಾಘಾತವಾಗುವಂತೆ ಮಾಡುತ್ತವೆ. ನಂತರ ಬೇಟೆಯನ್ನು ಇಷ್ಟಿಷ್ಟಾಗಿ ನುಂಗುತ್ತಾ ಹೋಗುತ್ತವೆ. ಬೇಟೆ ಮಿಸುಕಾಡದ ಹಾಗೆ ಅದರ ಸುತ್ತ ದೇಹದ ಭಾಗವನ್ನು ಸುರುಳಿಯಂತೆ ಸುತ್ತತ್ತವೆ. ಆಗ ಬೇಟೆಯ ರಕ್ತ ಪರಿಚಲನೆ ನಿಂತುಹೋಗುತ್ತದೆ. ಹೆಬ್ಬಾವು ಮಾನವನೊಬ್ಬನ ಮೇಲೆ ಅಟ್ಯಾಕ್ ಮಾಡಿದಾಗಳೂ ಈ ಎಲ್ಲ ಕಾರಣಗಳಿಂದಾಗಿ ಅವನು ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪುತ್ತಾನೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ