ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?

Viral News: ಇಲ್ಲೊಂದು ಗಿಳಿ ಅಡಗಿ ಕುಳಿತಿದೆ. ಅಡಗಿರುವ ಗಿಳಿಯನ್ನು ಹುಡುಕಲು ನೆಟ್ಟಿಗರು ತೀವ್ರ ತಲೆಕೆಡಿಸಿಕೊಂಡಿದ್ದಾರೆ. ಚಿತ್ರ ನೋಡಿದ ನೀವು ಆ ಗಿಳಿ ಎಲ್ಲಿ ಅಡಗಿದೆ ಎಂದು ಗುರುತಿಸಬಲ್ಲಿರಾ?

ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?
ಇದರಲ್ಲಿ ಅಡಗಿರುವ ಗಿಣಿಯನ್ನು ಗುರುತಿಸಬಲ್ಲಿರಾ?
Edited By:

Updated on: Apr 09, 2022 | 3:42 PM

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ್ದೇ ಕಾರುಬಾರು. ಅದೇನು ಅಂತೀರಾ? ಇಲ್ಲಿದೆ ನೋಡಿ. ಮೇಲಿನ ಚಿತ್ರದ ತುಂಬೆಲ್ಲಾ ಮಾವಿನ ಹಣ್ಣುಗಳನ್ನು ನೀವು ನೋಡಿದ್ದೀರಿ. ಆದರೆ ಅಲ್ಲೊಂದು ಗಿಳಿ (Parrot) ಅಡಗಿ ಕುಳಿತಿದೆ. ಅಲ್ಲಿ ಅಡಗಿರುವ ಗಿಳಿಯನ್ನು ಹುಡುಕಲು ನೆಟ್ಟಿಗರು ತೀವ್ರ ತಲೆಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ನಡುವೆಯೇ ಬಿಸಿಬಿಸಿ ಚರ್ಚೆಯಲ್ಲೂ ತೊಡಗಿದ್ದಾರೆ. ಚಿತ್ರ ನೋಡಿದ ನೀವು ಆ ಗಿಳಿ ಎಲ್ಲಿ ಅಡಗಿದೆ ಎಂದು ಗುರುತಿಸಬಲ್ಲಿರಾ? ನಿಮ್ಮ ಬುದ್ಧಿಶಕ್ತಿಗೆ, ನೋಟಕ್ಕೆ ಕೆಲಸ ಕೊಡುವ ಈ ಪ್ರಶ್ನೆಗೆ ಉತ್ತರ ಹೊಳೆಯಿತೇ? ಹೊಳೆದಿಲ್ಲವಾದರೆ ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಅದಕ್ಕಿಂತ ಮೊದಲು ಇಂತಹ ಚಿತ್ರಗಳು ಜನರ ಬುದ್ಧಿಗೆ ಏಕೆ ಕೆಲಸ ಕೊಡುತ್ತವೆ? ಇದಕ್ಕೆ ಏನನ್ನುತ್ತಾರೆ? ಈ ಮಾಹಿತಿ ಇಲ್ಲಿದೆ ನೋಡಿ.

ಇಂತಹ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಶನ್ (Optical Illusion) ಚಿತ್ರಗಳು ಎನ್ನುತ್ತಾರೆ. ಇವುಗಳು ಕಣ್ಣನ್ನು ಭ್ರಮೆಗೆ ತಳ್ಳುತ್ತವೆ. ಅರ್ಥಾತ್ ನಿಖರವಾಗಿ ಜನರಿಗೆ ಗುರುತಿಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಹಲವಾರು ಮಾದರಿಗಳಿವೆ. ಉದಾಹರಣೆಗೆ ಮೇಲೆ ತಿಳಿಸಿದಂತೆ ಬುದ್ಧಿಶಕ್ತಿಗೆ ಕೆಲವು ಕೆಲಸ ಕೊಟ್ಟರೆ, ಮತ್ತೆ ಕೆಲವು ಚಿತ್ರಗಳಿಂದ ನಿಮ್ಮ ವ್ಯಕ್ತಿತ್ವವನ್ನೂ ಹೇಳಬಹುದು. ಈ ಬಗ್ಗೆ ಕುತೂಹಲವಿದ್ದರೆ ಈ ಬರಹ ಓದಿ.

ಈಗ ಮೇಲೆ ತಿಳಿಸಿದ ಚಿತ್ರಕ್ಕೆ ಬರೋಣ. ಅಲ್ಲಿ ಕೆಂಪು ಬಣ್ಣದ ಮಾವಿನ ಹಣ್ಣುಗಳಿವೆ. ಅವುಗಳ ಮಧ್ಯೆ ಅದೇ ಬಣ್ಣದ ಗಿಳಿಯೊಂದು ಕೂತಿದೆ. ಅದರ ಕಣ್ಣು ಕಪ್ಪಿದೆ. ಮಾವಿನ ಹಣ್ಣಿನ ತೊಟ್ಟು ಕೂಡ ಕಪ್ಪಿರುವುದರಿಂದ ನಿಮ್ಮ ಕಣ್ಣಿಗೆ ಗಿಳಿಯನ್ನು ಹುಡುಕಲು ತುಸು ಸಮಯ ಹಿಡಿಯಬಹುದು. ಆದರೆ ಗಮನವಿಟ್ಟು ನೋಡಿದರೆ ನಿಮಗೆ ಖಂಡಿತಾ ಉತ್ತರ ದೊರಕುತ್ತದೆ.

ನಿಮಗಿನ್ನೂ ಉತ್ತರ ತಿಳಿಯಲಿಲ್ಲವೇ?

ಉತ್ತರ ತಿಳಿಯಲಿಲ್ಲ ಎಂದು ಚಿಂತಿಸಬೇಡಿ. ನಿಮಗೆ ಉತ್ತರವನ್ನು ನಾವು ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಗಿಳಿ ಎಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಇದೆ. ಒಂದು ವೇಳೆ ನೀವು ಸರಿಯಾಗಿ ಊಹಿಸಿದ್ದರೆ ನಿಮಗೆ ಅಭಿನಂದನೆ.

ಮಾವಿನ ಹಣ್ಣಿನ ಮಧ್ಯದಲ್ಲಿರುವ ಗಿಳಿ

ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!

ಆನೆ ಮತ್ತು ಸಿಂಹಿಣಿ ಮಧ್ಯೆ ತೀವ್ರ ಕಾಳಗ; ಗೆದ್ದೋರ್ಯಾರು..! ಸೋತವರ್ಯಾರು..! ಇಲ್ಲಿದೆ ವೈರಲ್ ವಿಡಿಯೋ