Video: ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಬಹುಬೇಗನೆ ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಪುಟ್ಟ ಹುಡುಗನ ಮಡಿಲಿನಲ್ಲಿ ನಾಯಿಮರಿಯೊಂದು ಹಾಯಾಗಿ ಮಲಗಿದೆ. ಈ ವಿಡಿಯೋ ನೋಡಿ ನೆಟ್ಟಿಗರ ಈ ಪುಟ್ಟ ಹುಡುಗನ ಶ್ವಾನ ಪ್ರೀತಿಗೆ ಕಳೆದೇ ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ
ವೈರಲ್‌ ವಿಡಿಯೋ
Image Credit source: Instagram

Updated on: Jan 05, 2026 | 2:54 PM

ಪುಟಾಣಿಗಳೇ (Little kids) ಹಾಗೆ, ಮನೆಯಲ್ಲಿ ಶ್ವಾನಗಳಿದ್ದರೆ ಅವುಗಳ ಜತೆಗೆ ಹೆಚ್ಚು ಸಮಯ ಕಳೆಯುತ್ತವೆ. ಈ ಮನೆಯ ಮುದ್ದಿನ ಶ್ವಾನಗಳು (dogs) ಪುಟ್ಟ ಮಕ್ಕಳಿಗೆ ಕಾವಲಾಗಿರುವುದನ್ನು ನೀವು ನೋಡಿರುತ್ತೀರಿ. ಆದರೆ ಪುಟ್ಟ ಹುಡುಗನೊಬ್ಬ ನಾಯಿಮರಿಯನ್ನು ಮಡಿಲಿನಲ್ಲಿ ಮಗುವಿನಂತೆ ಮಲಗಿಸಿ  ಮುದ್ದಿಸಿರುವ ದೃಶ್ಯ ನೆಟ್ಟಿಗರ ಕಣ್ಮನ ಸೆಳೆದಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಂಜುನಾಥ್ ಲೋಕಪುರ್ (manjunath_lokapur) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗನ ಮಡಿಲಿನಲ್ಲಿ ಶ್ವಾನದ ಮರಿಯೊಂದು ಮಲಗಿರುವುದನ್ನು ಕಾಣಬಹುದು. ಹೌದು, ಬೀದಿ ಬದಿಯಲ್ಲಿ ಕುಳಿತಿರುವ ಪುಟ್ಟ ಬಾಲಕನು ಚಳಿಯಾಗದಂತೆ ನಾಯಿಮರಿಗೆ ಟವೆಲ್ ಸುತ್ತಿದ್ದಾನೆ. ಈ ನಾಯಿಮರಿಯೂ ಪುಟ್ಟ ಹುಡುಗನ ಮಡಿಲಿನಲ್ಲಿ ಹಾಯಾಗಿ ಮಲಗಿರುವುದನ್ನು ಕಾಣಬಹುದು. ಈ ವೇಳೆ ದಾರಿಹೋಕರೊಬ್ಬರು ಈ ಪುಟ್ಟ ಹುಡುಗನ ಕೈಗೆ ಒಂದಿಷ್ಟು ಕಾಸು ಕೊಟ್ಟು ಮಾತನಾಡಿಸುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ತನ್ನ ಟಿಫಿನ್ ಬಾಕ್ಸ್‌ನಲ್ಲಿದ್ದ ಊಟವನ್ನು ಕೊಟ್ಟು ಬೀದಿನಾಯಿಯ ಹಸಿವು ನೀಗಿಸಿದ ಪುಟ್ಟ ಬಾಲಕಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಮುಗ್ಧ ಮನಸ್ಸುಗಳು ಎಂದು ಹೇಳಿದರೆ, ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ