Video: ತನ್ನ ಟಿಫಿನ್ ಬಾಕ್ಸ್‌ನಲ್ಲಿದ್ದ ಊಟವನ್ನು ಕೊಟ್ಟು ಬೀದಿನಾಯಿಯ ಹಸಿವು ನೀಗಿಸಿದ ಪುಟ್ಟ ಬಾಲಕಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುತ್ತದೆ. ಕೆಲವು ದೃಶ್ಯಗಳು ಒಳ್ಳೆತನಕ್ಕೆ ಸಾಕ್ಷಿಯಾಗುತ್ತದೆ. ಇಲ್ಲೊಬ್ಬಳು ಪುಟ್ಟ ಬಾಲಕಿ ಬೀದಿ ನಾಯಿ ಕಂಡೊಡನೆ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ನಮ್ಮಲ್ಲಿ ಕೆಲವರಿಗೆ ಪ್ರಾಣಿ ಪಕ್ಷಿಗಳೆಂದರೆ ಅತೀವ ಪ್ರೀತಿ. ಹೀಗಾಗಿ ಅವುಗಳ ಹಸಿವನ್ನು ನೀಗಿಸಿ ಒಳ್ಳೆತನ ಮೆರೆಯುತ್ತಾರೆ. ಅದರಲ್ಲೂ ಬೀದಿ ಶ್ವಾನಗಳನ್ನು (street dog) ಕಂಡರಂತೂ ಅವುಗಳಿಗೆ ಆಹಾರ ನೀಡುತ್ತಾರೆ. ಇಲ್ಲೊಬ್ಬ ಪುಟ್ಟ ಹುಡುಗಿ (little girl) ತನ್ನ ಹೃದಯ ಶ್ರೀಮಂತಿಕೆಯಿಂದ ಎಲ್ಲರ ಮನಸ್ಸು ಗೆದ್ದಿದ್ದಾಳೆ. ತನ್ನ ಟಿಫಿನ್ ಬಾಕ್ಸ್‌ನಲ್ಲಿದ್ದ ಆಹಾರವನ್ನು ಬೀದಿನಾಯಿಗೆ ಹಾಕಿ, ಅದರ ಹಸಿವು ನೀಗಿಸಿದ ಪುಟ್ಟ ಬಾಲಕಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಬಾಲಕಿಯ ಒಳ್ಳೆತನವನ್ನು ಮೆಚ್ಚಿದ್ದಾರೆ.
ಬೀರ್ ವೈರಲ್ (beer viral) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಬೀದಿ ನಾಯಿಗೆ ಆಹಾರ ಹಾಕುವುದನ್ನು ನೋಡಬಹುದು. ಶಾಲೆಗೆ ಹೋಗುವ ಪುಟ್ಟ ಬಾಲಕಿ ತನ್ನ ಟಿಫಿನ್ ಬಾಕ್ಸ್ ತೆರೆದು, ಅದರಲ್ಲಿ ಊಟವನ್ನು ಕೊಟ್ಟು ಶ್ವಾನದ ಹಸಿವನ್ನು ನೀಗಿಸುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ವಿಡಿಯೋದ ಕೊನೆಗೆ ಪುಟ್ಟ ಹುಡುಗಿಯೂ ಮುಗುಳು ನಗೆ ಬೀರಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ:ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ಈ ವಿಡಿಯೋ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಪುಟಾಣಿಯ ಮನಸ್ಸು ದೊಡ್ಡದು ಎಂದರೆ, ಮತ್ತೊಬ್ಬರು, ಈ ದೃಶ್ಯ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




