ಶುದ್ಧ ಸಸ್ಯಾಹಾರಿ ಮಹಿಳೆಯೊಬ್ಬರು ಆನ್ಲೈನ್ನಲ್ಲಿ ಫುಡ್ ಡೆಲಿವರಿ ಆ್ಯಪ್ ಬಳಸಿ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ‘ಪಿಕ್ ಅಪ್ ಮೀಲ್ಸ್ ಬೈ ಟೆರ್ರಾ’ ನಿಂದ ಪನೀರ್ ಟಿಕ್ಕಾ ಸ್ಯಾಂಡ್‌ವಿಚ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ, ರೆಸ್ಟೋರೆಂಟ್ ಪನ್ನೀರ್ ಬದಲಿಗೆ ಚಿಕನ್ ಸ್ಯಾಂಡ್‌ವಿಚ್ ಡೆಲಿವರಿ ಮಾಡಿದ್ದು, ಇದರಿಂದ ಕೋಪಗೊಂಡ ಮಹಿಳೆ ಗ್ರಾಹಕರ ನ್ಯಾಯಾಲಯದಲ್ಲಿ 50 ಲಕ್ಷ ರೂ ಪರಿಹಾರಕ್ಕಾಗಿ ಆನ್ಲೈನ್ನಲ್ಲಿ ಫುಡ್ ಡೆಲಿವರಿ ಆ್ಯಪ್ ಮತ್ತು ರೆಸ್ಟೋರೆಂಟ್ ವಿರುದ್ದ ದೂರು ದಾಖಲಿಸಿದ್ದಾರೆ.
ಮೇ 3 ರಂದು, ನಿರಾಲಿ ಎಂಬ ಮಹಿಳೆ ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿರುವ ತನ್ನ ಕಚೇರಿಯಿಂದ ಆರ್ಡರ್ ಮಾಡಿದ್ದಾಳೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಕುತೂಹಲಕಾರಿಯಾಗಿ, ಸ್ಯಾಂಡ್ವಿಚ್ ಡೆಲಿವರಿ ಆದ ಕೂಡಲೇ ತಿನ್ನಲು ಪ್ರಾರಂಭಿಸಿದಳು. ಅರ್ಥ ತಿಂದ ಬಳಿಕ, ಪನೀರ್‌ನ ವಿನ್ಯಾಸವು ಸಾಮಾನ್ಯಕ್ಕಿಂತ ಗಟ್ಟಿಯಾಗಿದೆ ಎಂದು ಅನುಮಾನಗೊಂಡು ಪರೀಕ್ಷಿಸಿದಾಗ ಚಿಕನ್ ಸ್ಯಾಂಡ್‌ವಿಚ್ ತಿಂದಿರುವುದಾಗಿ ತಿಳಿದುಬಂದಿದೆ. ಎಂದೂ ಮಾಂಸಾಹಾರ ಸೇವಿಸದ ನಿರಾಲಿ, ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದಲ್ಲದೇ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಉಪ ಆರೋಗ್ಯ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ 200ಕ್ಕೆ 212 ಅಂಕ, ಇದು ಹೇಗೆ ಸಾಧ್ಯ?
ಗ್ರಾಹಕರ ನ್ಯಾಯಾಲಯದಿಂದ ನ್ಯಾಯ ಪಡೆದು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನಿರಾಲಿ ಹೇಳಿದ್ದಾರೆ. ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ, ಜೋಧ್‌ಪುರದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆಯಿಂದ ಆನ್‌ಲೈನ್ ಆಹಾರ ಆರ್ಡರ್ ಮತ್ತು ಡೆಲಿವರಿ ಪ್ಲಾಟ್‌ಫಾರ್ಮ್ ಜೊಮಾಟೊ ಮತ್ತು ರೆಸ್ಟೋರೆಂಟ್ ಪಾಲುದಾರ ಮೆಕ್‌ಡೊನಾಲ್ಡ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಇದೀಗ ಸಸ್ಯಾಹಾರಿ ಆಹಾರದ ಬದಲಿಗೆ ಮಾಂಸಾಹಾರವನ್ನು ತಪ್ಪಾಗಿ ವಿತರಿಸಿದ ಆರೋಪದ ಮೇಲೆ ದಂಡ ವಿಧಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ