Viral Video: ಆನೆ ಸಾಗುವಾಗ ಗುರಾಯಿಸಿದ ಕೆಂಪುಗಣ್ಣಿನ ಹುಲಿರಾಯ.. ಮುಂದೇನಾಯ್ತು? ವಿಡಿಯೋ ನೋಡಿ

ಸಾಮಾನ್ಯವಾಗಿ ಪ್ರಾಣಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಪ್ರಾಣಿಗಳ ತುಂತಾಟದ ಜತೆಗೆ ಕೆಲವು ಆಘಾತಕಾರಿ ವಿಡಿಯೋಗಳೂ ವೈರಲ್​ ಆಗುತ್ತವೆ. ಕಾಡಿನ ಅಧಿಪತಿ ಹುಲಿ ಒಂದು ಕಡೆ ಆದ್ರೆ ಮತ್ತೊಂದು ಕಡೆ ದೊಡ್ಡ ಗಾತ್ರದ ಆನೆ. ಮುಂದೇನಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

Viral Video: ಆನೆ ಸಾಗುವಾಗ ಗುರಾಯಿಸಿದ ಕೆಂಪುಗಣ್ಣಿನ ಹುಲಿರಾಯ.. ಮುಂದೇನಾಯ್ತು? ವಿಡಿಯೋ ನೋಡಿ
ಆನೆ ನಡೆದು ಸಾಗುವಾಗ ರಸ್ತೆಗೆ ಅಡ್ಡ ಕುಳಿತ ಹುಲಿರಾಯ ಗುರಾಯಿಸುತ್ತಿದ್ದಾನೆ

Updated on: Jun 01, 2021 | 12:53 PM

ತನ್ನ ಹಸಿವನ್ನು ಈಡೇರಿಸಿಕೊಳ್ಳಲು ಪ್ರಾಣಿಗಳ ಬೇಟೆಗೆ ಹುಲಿರಾಯ ಕಾದು ಕುಳಿತಿರುತ್ತಾನೆ. ಆದರೆ ದೊಡ್ಡಗಾತ್ರದ ಆನೆಯೊಂದಿಗೆ ಜಗಳಕ್ಕೆ ನಿಂತು ಸಿಲುಕಿಕೊಳ್ಳಲು ಹುಲಿರಾಯ ಎಂದೂ ಹೋಗಲಾರ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡುತ್ತಿದೆ. ಇಲ್ಲಿ ನಿಜವಾಗಿಯೂ ಕಾಡಿನ ಅಧಿಪತಿ ಯಾರು? ಎಂಬ ಶೀರ್ಷಿಕೆಯಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಪ್ರಾಣಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಪ್ರಾಣಿಗಳ ತುಂತಾಟದ ಜತೆಗೆ ಕೆಲವು ಆಘಾತಕಾರಿ ವಿಡಿಯೋಗಳೂ ವೈರಲ್​ ಆಗುತ್ತವೆ. ಭಕ್ಷಕ ಹುಲಿ ಒಂದು ಕಡೆ ಆದ್ರೆ ಮತ್ತೊಂದು ಕಡೆ ದೊಡ್ಡ ಗಾತ್ರದ ಆನೆ. ಮುಂದೇನಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ನಟಿ ಮತ್ತು ಅರಣ್ಯ ಸೇವೆಗಳ ಅಧಿಕಾರಿ ದಿಯಾ ಮಿರ್ಜಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದಾರಿ ಮಧ್ಯೆ ಕಾಡಿನ ರಾಜ ಹುಲಿರಾಯ ಮಲಗಿರುತ್ತಾನೆ. ಹುಲಿರಾಯನಿರುವ ಊಹೆಯೂ ಆನೆಗಿಲ್ಲ. ಸರಾಗವಾಗಿ ತನ್ನ ಪಾಡಿಗೆ ತಾನು ದಢೂತಿ ಗಾತ್ರದ ಆನೆ ನಡೆದು ಬರುತ್ತಿರುತ್ತದೆ. ಹುಲಿರಾಯ ಕತ್ತು ತಿರುಗಿಸಿ ಆನೆಯನ್ನು ನೋಡುತ್ತಾನೆ. ತನ್ನ ಪಾಡಿಗೆ ತಾನು ಕಾಡಿನ ಮಧ್ಯೆ ಹೋಗಿಬಿಡುತ್ತಾನೆ. ಆನೆಗೆ ರಸ್ತೆಯಲ್ಲಿ ಸರಾಗವಾಗಿ ಸಾಗಲು ಅವಕಾಶ ಸಿಗುತ್ತದೆ. ಇಲ್ಲಿ ನಿಜವಾಗಿಯೂ ಕಾಡಿನ ಅಧಿಪತಿ ಯಾರು? ಎಂಬುದಾಗಿ ಟ್ವಿಟರ್​ನಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ವಿಡಿಯೋ 1ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೆಚ್ಚಿಕೊಂಡ ನೆಟ್ಟಿಗರು ನೂರಾರು ಕಾಮೆಂಟ್​ಗಳನ್ನು ಮಾಡಿದ್ದಾರೆ. ಕಾಡಿನಲ್ಲಿರುವ ಹುಲಿಗಳು ಸಾಮಾನ್ಯವಾಗಿ ಜಿಂಕೆ, ಮಂಗಗಳನ್ನು ಹೆಚ್ಚು ಬೇಟೆಯಾಡುತ್ತವೆ. ಸಾಮಾನ್ಯವಾಗಿ ದಢೂತಿ ಗಾತ್ರದ ಆನೆಗಳನ್ನು ಭೇಟೆ ಆಡುವುದು ಅಪರೂಪ. ಆದರೂ ಕೆಲವು ಬಾರಿ ಮರಿ ಆನೆಗಳನ್ನು ಭೇಟೆ ಆಡಿದ ಸುದ್ದಿಗಳನ್ನು ಕೇಳಿರಬಹುದು.

ಇದನ್ನೂ ಓದಿ: 

Viral Video: ನಾಯಿ ಮರಿಯನ್ನು ಎತ್ತಿಕೊಂಡು ಹಾಡು ಹೇಳಿ ಮುದ್ದಾಡಿದ ಮಗು; ವಿಡಿಯೋ ವೈರಲ್

ಹರಿತ ಆಯುಧದಿಂದ ಹೊಡೆದು ನಾಯಿಯನ್ನು ಕೊಂದ ವಿಡಿಯೋ ವೈರಲ್​; ವ್ಯಕ್ತಿ ಬಂಧನ

Published On - 12:41 pm, Tue, 1 June 21

Loading...
Unable to load recommendations.
Follow Us