Tattoo : ಮನುಷ್ಯನಿಗೆ ಹುಚ್ಚು ಇರಬೇಕು, ಆದರೆ ಬದುಕನ್ನೇ ತೊಡಕು ಮಾಡಿಕೊಳ್ಳುವಷ್ಟು ಅಲ್ಲ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ನಲ್ಲಿರುವ ಮಹಿಳೆಯನ್ನು ಗಮನಿಸಿ. ಹಚ್ಚೆಪ್ರಿಯಳಾದ ಈಕೆ ಈತನಕ ಒಂದಲ್ಲ ಹತ್ತಲ್ಲ ಬರೋಬ್ಬರಿ 800 ಹಚ್ಚೆಗಳನ್ನು ತನ್ನ ಮೈಮುಖದ ಮೇಲೆ ಹಾಕಿಸಿಕೊಂಡಿದ್ದಾಳೆ. ಆದರೆ ಈ ‘ಹಚ್ಚೆಯ ಚಟ’ ದಿಂದಾಗಿಯೇ ಆಕೆ ನಿರುದ್ಯೋಗವನ್ನು (Jobless) ಅನುಭವಿಸುವಂತಾಗಿದೆ. ಕೆಲಸ ಕೇಳಿಕೊಂಡು ಹೋದಲ್ಲೆಲ್ಲ ಆಕೆಯ ಹಚ್ಚೆಗಳ ಬಗ್ಗೆಯೇ ಟೀಕಿಸುತ್ತಾರೆ ವಿನಾ ಯಾರೊಬ್ಬರೂ ಈಕೆಗೆ ಕೆಲಸ ಕೊಡುತ್ತಿಲ್ಲ. ಹೀಗಾಗಿ ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ ಈಕೆಯ ಪರಿಸ್ಥಿತಿ.
ನ್ಯೂಯಾರ್ಕ್ ಪೋಸ್ಟ್ನ ವರದಿಯಂತೆ, ಲಂಡನ್ನ ವೇಲ್ಸ್ನಲ್ಲಿ 46 ವರ್ಷದ ಈ ಮೆಲಿಸ್ಸಾ ಸ್ಲೋನ್ ನೆಲೆಸಿದ್ದಾಳೆ. ಈಕೆಗೆ ಎರಡು ಮುದ್ದಾದ ಹೆಣ್ಣುಮಕ್ಕಳೂ ಇವೆ. ಆದರೆ ಕೆಲಸವಿಲ್ಲದೆ ಇದೀಗ ಒದ್ಧಾಡುತ್ತಿದ್ದಾಳೆ. ”ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ನಾನು ಅರ್ಜಿ ಸಲ್ಲಿಸಿದಾಗ, ಹಚ್ಚೆಗಳನ್ನು ನೋಡಿಯೇ ನನಗೆ ಕೆಲಸ ಕೊಡಲಿಲ್ಲ ಎನ್ನುವುದು ಒಂದು ಕಡೆಯಾದರೆ, ನೀನಗೆ ಈ ಕೆಲಸದ ಅನುಭವವೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಈ ಹಿಂದೆ ನನಗೆ ಕೆಲಸ ಮಾಡಿದ ಅನುಭವವಿದೆ, ಆದರೆ ಹೆಚ್ಚು ಕಾಲ ನಾನಲ್ಲಿ ಇರಲಿಲ್ಲ” ಎನ್ನುತ್ತಾಳೆ ಈಕೆ.
ಇದನ್ನೂ ಓದಿ : Viral Video: ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ
20ನೇ ವಯಸ್ಸಿಗೆ ಶುರುವಾದ ಈಕೆಯ ಹಚ್ಚೆಯ ಹುಚ್ಚು 46ರಲ್ಲಿಯೂ ಮುಂದುವರೆದಿದೆ. ಕೆಲಸ ಹುಡುಕುವುದು ಅದರ ಪಾಡಿಗೆ ಅದು ನಡೆದಿರುತ್ತದೆ. ಜೊತಗೆ ವಾರಕ್ಕೆ 3 ಹೊಸ ಹಚ್ಚೆಗಳನ್ನು ಈಕೆ ಹಾಕಿಸಿಕೊಳ್ಳುತ್ತಿರುತ್ತಾಳೆ. ಮೂರು ಪದರಗಳ ಹಚ್ಚೆಗಳು ಆಕೆಯ ಮುಖದ ಮೇಲಿವೆ. ”ಈಗಾಗಲೇ ನಾನು ನೀಲಿಬಣ್ಣದಿಂದ ಆವೃತಗೊಂಡಿದ್ದೇನೆ. ನನ್ನ ಮುಖ ಸ್ಮರ್ಫ್ (Smurf) ನಂತೆ ಕಾಣುತ್ತಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಹಚ್ಚೆ ಹಾಕಿಸಿಕೊಂಡ ಮಹಿಳೆ ನಾನು. ಈ ಹುಚ್ಚನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುತ್ತೇನೆ” ಎಂದು ಉತ್ಸಾಹದಿಂದ ಹೇಳುತ್ತಾಳೆ ಮೆಲಿಸ್ಸಾ.
ಏನಂತೀರಿ ನೀವಿದಕ್ಕೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:01 pm, Thu, 6 July 23