Video: ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಚಹಾ ಮಾಡಿಕೊಟ್ಟ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಹಿಳೆಯೊಬ್ಬರು ಬೆಳ್ಳಂಬೆಳಗ್ಗೆ ಕಸ ತೆಗೆದುಕೊಂಡು ಹೋಗಲು ಬರುವ ಸ್ವಚ್ಛತಾ ಕಾರ್ಮಿಕರಿಗೆ ಚಹಾ ಮಾಡಿ ಕೊಡುವ ಮೂಲಕ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಚಹಾ ಮಾಡಿಕೊಟ್ಟ ಮಹಿಳೆ
ವೈರಲ್‌ ವಿಡಿಯೋ
Image Credit source: Twitter

Updated on: Dec 16, 2025 | 11:38 AM

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡುವ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಸಿಗುವುದೇ ಕಡಿಮೆ. ಆದರೆ, ಕೆಲವರು ತಾವು ಮಾಡುವ ಒಳ್ಳೆಯ ಕೆಲಸದಿಂದಲೇ ನಿಜ ಜೀವನದಲ್ಲಿ ಹೀರೋಗಳಾಗುತ್ತಾರೆ. ಇದಕ್ಕೆ ನೈಜ ಉದಾಹರಣೆ ಈ ಮಹಿಳೆ (Woman). ಕಸ ಸಂಗ್ರಹಿಸಲು ಮನೆಯ ಹತ್ತಿರ ಬರುವ ಪೌರ ಕಾರ್ಮಿಕರಿಗೆ (poura karmika) ಕುಡಿಯಲು ಚಹಾ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಿಮ್ಮಿ (Jimmy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ, ಮಹಿಳೆಯೊಬ್ಬರು ದಿನನಿತ್ಯ ಬೆಳಗ್ಗೆ 7:15ಕ್ಕೆ ನೈರ್ಮಲ್ಯ ಕಾರ್ಮಿಕರಿಗೆ ಚಹಾ ನೀಡಲು ಬರುತ್ತಾರೆ. ಈ ನಿಸ್ವಾರ್ಥ ಕೆಲಸವು ಅವರ ಆ ದಿನವನ್ನು ಸುಂದರವಾಗಿಸುತ್ತದೆ. ನಮ್ಮ ನಗರಕ್ಕಾಗಿ ಶ್ರಮಿಸುತ್ತಿರುವ ಕಾರ್ಮಿಕರಿಗೆ ಮಾಡುವ ಈ ಕೆಲಸವು ಬಹಳಷ್ಟು ಅರ್ಥವನ್ನು ನೀಡುತ್ತವೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಬೆಳಗ್ಗಿನ ಜಾವ ಕಸ ಸಂಗ್ರಹಿಸಲು ಮನೆಗೆ ಕಾರ್ಮಿಕರು ಬಂದಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಚಹಾ ಪಾತ್ರೆಯೊಂದಿಗೆ ಮನೆಯಿಂದ ಹೊರಗೆ ಬಂದಿದ್ದಾರೆ. ಟ್ರಕ್ ಮೇಲೆ ನಿಂತು ಕಾರ್ಮಿಕರು ಕೆಲಸದಲ್ಲಿ ತೊಡಗಿಕೊಂಡಿದ್ದರೆ, ಇತ್ತ ಮಹಿಳೆಯೂ ಅವರಿಗೆ ಒಂದು ಕಪ್ ಚಹಾ ನೀಡುವುದನ್ನು ಕಾಣಬಹುದು.

ಇದನ್ನೂ ಓದಿ: ಹಿಮಾಲಯ ಟ್ರೆಕ್ಕಿಂಗ್ ವೇಳೆ ಪ್ರವಾಸಿಗರಿಗೆ ಸ್ವಚ್ಛತೆಯ ಪಾಠ ಮಾಡಿದ ರಷ್ಯನ್ ಮಹಿಳೆ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಜಗತ್ತಿನಲ್ಲಿ ನಿಜವಾಗಿಯೂ ಒಳ್ಳೆಯ ಮನಸ್ಸಿನ ಜನರಿದ್ದಾರೆ. ಮಾನವೀಯತೆ ಜೀವಂತವಾಗಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದಿದ್ದಾರೆ. ಮತ್ತೊಬ್ಬರು, ನಾವು ಕಸ ಗುಡಿಸುವವರಿಗೆ ಚಹಾ ನೀಡುತ್ತೇವೆ. ಹೆಚ್ಚಿನ ಭಾರತೀಯರು ಇದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಎಲ್ಲವನ್ನೂ ರೆಕಾರ್ಡ್ ಮಾಡುವ ಅಗತ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನ್ನ ತಂದೆ ತಾಯಿಯನ್ನು ಸೇರಿಸಿ ಇದು ನಗರದಲ್ಲಿ ಸರ್ವೇ ಸಾಮಾನ್ಯವಾದ ದೃಶ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 11:08 am, Tue, 16 December 25